ಚಿಕ್ಕೋಡಿ: ಪಬ್ಲಿಕ್ ಟಿವಿ (Public TV) ವರದಿ ಬೆನ್ನಲ್ಲೇ ಡೋಣಿ ಹಳ್ಳಕ್ಕೆ ಸೇತುವೆ (Bridge) ನಿರ್ಮಿಸಲು ಬೆಳಗಾವಿ ಜಿಲ್ಲಾಡಳಿತ (Belagavi District Administration) ಮುಂದಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಕಳೆದ 2 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ (Rain) ಡೋಣಿ ಹಳ್ಳದ ಸೇತುವೆ ಕೊಚ್ಚಿ ಹೋಗಿದೆ.
- Advertisement 2-
- Advertisement 3-
ಮಳೆ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದ್ದ ಪರಿಣಾಮ ವಿದ್ಯಾರ್ಥಿಗಳು, ಗ್ರಾಮಸ್ಥರು ಅಪಾಯವನ್ನು ಲೆಕ್ಕಿಸದೇ ಸಂಚಾರ ಮಾಡುತ್ತಿದ್ದರು. ಈ ಕುರಿತು ಸಮಗ್ರವಾಗಿ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ್ದ ಪರಿಣಾಮ ತೇಲಸಂಗ್-ಬಿಜ್ಜರಗಿ ರಸ್ತೆಯ ಡೋಣಿ ಹಳ್ಳಕ್ಕೆ ಮರು ಸೇತುವೆ ನಿರ್ಮಾಣ ಮಾಡುವ ಕಾರ್ಯ ಆರಂಭವಾಗಿದೆ. ಇದನ್ನೂ ಓದಿ: ಕಾಂಗ್ರೆಸ್, ಜಿಹಾದಿ ಸಂಘಟನೆಗಳದ್ದು ಒಂದೇ ಧ್ಯೇಯ, ದೇಶವನ್ನು ತುಂಡರಿಸುವುದು: ಬಿಜೆಪಿ
- Advertisement 4-
ಬೃಹತ್ ಪೈಪ್‌ಗಳನ್ನು ಅಳವಡಿಸಿ ಸೇತುವೆ ನಿರ್ಮಾಣ ಮಾಡುವ ಕಾರ್ಯ ಭರದಿಂದ ನಡೆದಿದೆ. ಸದ್ಯ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸಣ್ಣ ನೀರಾವರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸುವ ಭರವಸೆ ನೀಡಿದ್ದಾರೆ. ಸೇತುವೆ ಮರು ನಿರ್ಮಾಣದಿಂದ ಗ್ರಾಮಸ್ಥರಿಗೆ ಶಾಲೆ ಮಕ್ಕಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: ಚಿಕ್ಕ ವಯಸ್ಸಿನ ಹುಡುಗನದ್ದು ಆಕಸ್ಮಿಕ ಸಾವು ಎಂಬುದು ಅನುಮಾನ: ಶೋಭಾ ಕರಂದ್ಲಾಜೆ