ದೊಡ್ಮನೆ ಇದೀಗ ಒಂಭತ್ತು ದಿನಗಳನ್ನ ಪೂರೈಸಿ 10ನೇ ದಿನದತ್ತ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್(Bigg Boss House) ಮನೆಯ ಆಟ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಪ್ರೀತಿ ,ಕೋಪ,ಜಗಳ ಎಲ್ಲವೂ ಹೈಲೆಟ್ ಆಗುತ್ತಿದೆ. ಇದೀಗ ವಿನೋದ್ ಗೊಬ್ಬರಗಾಲ(Vinod Gobbaragala) ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ ಎಂಬ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ(Bigg Boss) ಕಳೆದಿರುವ ಒಂದೇ ವಾರಕ್ಕೆ ಅಸಮಾಧಾನದ ಹೊಗೆಯಾಡುತ್ತಿದೆ. ಅದರಲ್ಲೂ ಕಾವ್ಯಶ್ರೀ ಗೌಡ, ವಿನೋದ್ ಗೊಬ್ಬರಗಾಲಾ ತಮಾಷೆ ಮಾಡಲು ಹೋಗಿ, ಹೋಗಿ ಜಗಳ ಆಡ್ತಾ ಇದ್ದಾರೆ. ಕಾವ್ಯಶ್ರೀ(Kavyashree) ಕಣ್ಣೀರು ಹಾಕಿದ್ದಾರೆ. ಮನೆಮಂದಿಗೆ ರಂಜಿಸಲು ನಾಟಕ ಮಾಡುವಾಗ ಮುಸರೆ ತಿಕ್ಕುವವಳು, ಕಸ ಗುಡಿಸುವವಳನ್ನು ಯಾಕೆ ರಾಣಿ ಮಾಡಿದ್ದೀರಾ ಎಂದು ಗೊಬ್ಬರ ಹೇಳಿರುವ ಮಾತು ಕಾವ್ಯಶ್ರೀಗೆ ಬೇಸರವಾಗಿದೆ.
ಬಳಿಕ ಊಟ ಮಾಡುವಾಗ ಕೂಡ ಈ ಜಟಾಪಟಿ ಮುಂದುವರೆದಿದೆ. ಬಾ ಅನ್ನ ಹಾಕು ಎಂದು ಗೊಬ್ಬರಗಾಲ ಆಡಿರುವ ಮಾತು ಕಾವ್ಯಶ್ರೀ ಕಣ್ಣೀರಿಗೆ ಕಾರಣವಾಗಿದೆ. ಗೌರವ ಕೊಡದೇ ಗೊಬ್ಬರಗಾಲ ಮಾತನಾಡುತ್ತಾರೆ. ನಾನು ಅವರಿಗೆ ಅಷ್ಟು ಸಲುಗೆ ಕೊಟ್ಟಿಲ್ಲ ಎಂದು ಮನೆಯವರ ಮುಂದೆ ಕಾವ್ಯಶ್ರೀ ಅಳಲು ತೋಗಿಕೊಂಡಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
ಬಳಿಕ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ದುಷ್ಟ ಗುಣ ಬಗ್ಗೆ ಟ್ಯಾಗ್ ಲೈನ್ ವಿವರಣೆ ಕೊಡುವ ಟಾಸ್ಕ್ ಇತ್ತು. ಈ ವೇಳೆ ಕಾವ್ಯ ಕೋಪ ಮತ್ತು ಅಹಂಕಾರದ ಬೋರ್ಡ್ ಅನ್ನು ಗೊಬ್ಬರಗಾಲಗೆ ಕೊಟ್ಟು ವಿವರಿಸಿದ್ದರು. ಒಬ್ಬ ವ್ಯಕ್ತಿಗೆ ಮರ್ಯಾದೆ ಕೊಟ್ಟು ಮಾತನಾಡುವ ಗುಣವಿಲ್ಲ. ಕೇಳುವ ಪರಿಜ್ಞಾನವೂ ಇಲ್ಲ. ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ. ಬದುಕು ಕಟ್ಟಿಕೊಳ್ಳಲು ಬಂದಿದ್ದೇನೆ. ನನಗೆ ಬದಕಲು ಬಿಡಿ ಎಂದು ವಿನೋದ್‌ಗೆ ಕಾವ್ಯಶ್ರೀ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.