ಕೋಲಾರ: ವಿನಾಶ ಕಾಲದಲ್ಲಿರುವ ಕಾಂಗ್ರೆಸ್ ಪಕ್ಷ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವುದಕ್ಕೆ ನಾಟಕ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Ashwath Narayan) ವಾಗ್ದಾಳಿ ನಡೆಸಿದ್ದಾರೆ.
ಕೋಲಾರದ (Kolar) ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ಅಶ್ವಥ್ ನಾರಾಯಣ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ (Congress) ಅಧಿಕಾರದಲ್ಲಿದ್ದಾಗ, ದೇಶ ಹೊಡೆಯುವ ಕೆಲಸ ಹಾಗೂ ಭಯೋತ್ಪಾದನೆಗೆ ಉತ್ತೇಜನ ನೀಡುವ ಕೆಲಸ ಮಾಡಿದೆ. ಅಧಿಕಾರ ಉಳಿಸಿಕೊಳ್ಳಲು ಸಮಸ್ಯೆಗಳನ್ನು ಹುಟ್ಟುಹಾಕಿದ ಏಕೈಕ ಪಕ್ಷ ಅದು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ.
ಕಾಶ್ಮೀರ, ಪಂಜಾಬ್, ಅಸ್ಸಾಂ ಸೇರಿದಂತೆ ಎಲ್ಲಿಯೂ ಸ್ಪಷ್ಟತೆ ಎನ್ನುವುದು ಇಲ್ಲ, ಎಲ್ಲಾ ಕಡೆ ಸಮಸ್ಯೆಗಳನ್ನು ಹುಟ್ಟುಹಾಕಿರುವವರು ಕಾಂಗ್ರೆಸ್‍ನವರು. ಅಲ್ಲದೇ ಚೀನಾ (China) ಜೊತೆ ಯುದ್ಧ ಆದಾಗ ಜಾಗವನ್ನು ಬಿಟ್ಟುಕೊಟ್ಟಿವರು ಕಾಂಗ್ರೆಸಿಗರು, ಪಾಕಿಸ್ತಾನದಲ್ಲಿ (Pakistan) ಯುದ್ಧ ಗೆದ್ದರೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಏಕೆ ಪಡೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಯುವಕರ ಸಾಹಸ – ಭೂಗಳ್ಳರ ಕೈಯಿಂದ ಶಾಲೆಗೆ ಸೇರಿತು ಕೋಟ್ಯಂತರ ಮೌಲ್ಯದ ಜಮೀನು
ಮತ್ತೊಂದೆಡೆ ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ವ್ಯತ್ಯಾಸ ತಂದು ಸಮಾಜ ಹೊಡೆಯುವಂತಹ ಕೆಲಸ ಮಾಡುವುದರೊಂದಿಗೆ ದೇಶ ವಿರೋಧಿ ಚಟುವಟಿಕೆ ಮಾಡಿಕೊಂಡು ಬಂದರು. ಇನ್ನೂ ಭ್ರಷ್ಟಾಚಾರ (Corruption) ಹುಟ್ಟುಹಾಕಿದ್ದು ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರಕ್ಕೆ ಸಿಂಹಸಪ್ನವಾಗಿರುವ ಪಕ್ಷ ಬಿಜೆಪಿ (BJP) ಎಂದಿದ್ದಾರೆ. ಇದನ್ನೂ ಓದಿ: ಎಎಸ್‍ಐಗಳಿಂದ ಕಿರಿಯ ಸಹೋದ್ಯೋಗಿಗಳ ಮೇಲೆ ನಡೆಯುತ್ತಿದ್ಯಾ ದಬ್ಬಾಳಿಕೆ?
ಈ ಹಿಂದೆ ರಾಜೀವ್ ಗಾಂಧಿಯವರೇ ಹೇಳಿದ್ದಾರೆ, ಸರ್ಕಾರ ಕೊಡುವ ಹಣದಲ್ಲಿ 85 ತಿಂದು ಹಾಕುತ್ತಾರೆ. ಕೇವಲ 15 ರಷ್ಟು ಮಾತ್ರ ಜನರಿಗೆ ಸೇರುತ್ತದೆ. ನಮ್ಮಲ್ಲಿ ಭ್ರಷ್ಟಾಚಾರ ವಿಲ್ಲ, ಮುಕ್ತವಾಗಿ ಇದ್ದೇವೆ ಎಂದು ಹೇಳಿದ್ದಾರೆ.