ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರು ದಸರಾಗೆ ರಾಷ್ಟ್ರಪತಿಯಿಂದ ಚಾಲನೆ

Public TV
2 Min Read
mysuru dasara 6

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (mysuru dasara) ಹಬ್ಬವನ್ನು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೋಮವಾರ ರಾಷ್ಟ್ರಪತಿಯವರಿಂದ (President) ಉದ್ಘಾಟಿಸಲಾಗಿದೆ. ಮೈಸೂರಿನ 413ನೇ ದಸರಾಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಇಂದು ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

mysuru dasara 3 1

ದ್ರೌಪದಿ ಮುರ್ಮು ಅವರು ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡಿ ಮೈಸೂರು ದಸರಾಗೆ ಚಾಲನೆ ನೀಡಿದ್ದಾರೆ. ರಾಷ್ಟ್ರಪತಿಯವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ಗಣ್ಯರು ಸಾಥ್ ನೀಡಿದ್ದಾರೆ.

 

mysuru dasara 5

ಮೈಸೂರು ದಸರಾಗೆ ಚಾಲನೆ ನೀಡಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸರ್ಕಾರದ ವತಿಯಿಂದ ಮೈಸೂರು ಪೇಟಾ, ಮೈಸೂರು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಜೊತೆಗೆ ಚಾಮುಂಡಿ ದೇವಿಯ ಬೆಳ್ಳಿಯ ಮೂರ್ತಿ ನೀಡಿ ಗೌರವಿಸಲಾಯಿತು.

 

mysuru dasara 4

ಎಲ್ಲಾ ಸಹೋದರ – ಸಹೋದರಿಯರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ರಾಷ್ಟ್ರಪತಿ ಮುರ್ಮು, ರಾಷ್ಟ್ರಪತಿ ಆದ ಮೇಲೆ ನಾನು ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಅದರಲ್ಲೂ ದೇವಿಯ ಪೂಜಾ ಕಾರ್ಯವಾದ ಕಾರಣ ಬಂದೇ ಬರುತ್ತೇನೆ. ಚಾಮುಂಡಿ ದೇವಿಯ ಶಕ್ತಿ ಇಡೀ ನಾಡಿಗೆ ದಕ್ಕಿದೆ. ಕಾಲ ಕಾಲಕ್ಕೆ ಮಳೆ ಬೆಳೆ ನೀಡಿ ಇಡೀ ರಾಜ್ಯವನ್ನು ದೇವಿ ಕಾಪಾಡುತ್ತಿದ್ದಾಳೆ ಎಂದು ನುಡಿದರು. ಇದನ್ನೂ ಓದಿ: ಪಂದ್ಯಗೆದ್ದ ಖುಷಿ – ರೋಹಿತ್‍ಗೆ ಹೊಡೆದು ಸಂಭ್ರಮಿಸಿದ ಕೊಹ್ಲಿ

mysuru dasara Thawar Chand Gehlot

ಇಂದು ಮಹಿಷಾಸುರರ ಕಾಲ ಇಲ್ಲ. ಆದರೆ ಆ ಕೆಟ್ಟ ಗುಣ ನಮ್ಮ ಒಳಗಿದೆ. ನಾವು ಅದನ್ನು ಬಿಡಬೇಕು. ದುಷ್ಟ ವಿಚಾರವನ್ನು ದೂರವಿಟ್ಟು, ಒಳ್ಳೆಯ ವಿಚಾರವನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ನಾಡನ್ನು ಎಲ್ಲಾ ರಂಗದಲ್ಲೂ ಸರ್ವ ಶ್ರೇಷ್ಠವಾಗಿ ಕಟ್ಟುವ ಸಂಕಲ್ಪ ಮಾಡಬೇಕಿದೆ. ಸರ್ವರಿಗೂ ಒಳಿತು ಬಯಸುವ ಸದ್ಭುದ್ದಿ ಆ ದೇವತೆ ಎಲ್ಲರಿಗೂ ಕೊಡಲಿ ಎಂದು ಹಾರೈಸಿದರು

Draupadi Murmu 2

ಸಿಎಂ ಬಸವರಾಜ ಬೊಮ್ಮಾಯಿಯವರು ರಾಜ್ಯದ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮೈಸೂರು ದಸರಾಗೆ ಚಾಲನೆ ನೀಡಿದ ಮುರ್ಮು ಅವರಿಗೆ ಹಾಗೂ ರಾಜ್ಯಪಾಲರಿಗೂ ಧನ್ಯವಾದವನ್ನೂ ತಿಳಿಸಿದರು. ಇದನ್ನೂ ಓದಿ: ಸ್ವಚ್ಛತೆ ಬಗ್ಗೆ ಯೂತ್ ಫಾರ್ ಪರಿವರ್ತನ್ ಅರಿವು- ಬೆಂಗಳೂರು NGOಗೆ ಮೋದಿ ಶ್ಲಾಘನೆ

mysuru dasara basavaraj bommai

ಬಳಿಕ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕನ್ನಡದಲ್ಲಿಯೇ ಭಾಷಣವನ್ನು ಫ್ರಾರಂಭ ಮಾಡಿ ರಾಜ್ಯದ ಜನತೆಗೆ ಶುಭ ಕೋರಿದರು. ನಾನು ದೂರದರ್ಶನದಲ್ಲಿ ದಸರಾವನ್ನು ನೋಡಿದ್ದೆ. ಆದರೆ ಈ ಬಾರಿ ಖುದ್ದಾಗಿ ಹಾಜರಾಗಿ ಈ ಕ್ಷಣಗಳನ್ನು ನೋಡುತ್ತಿರುವು ನನಗೆ ಸಂತೋಷ ತಂದಿದೆ ಎಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *