ತಿರುಪತಿ: ಸಾಮಾನ್ಯ ಯಾತ್ರಿಗಳಿಗೆ ಗುಡ್ ‌ನ್ಯೂಸ್‌ ನೀಡಿದ ಟಿಟಿಡಿ

Public TV
1 Min Read

ಹೈದರಾಬಾದ್‌: ಸಾಮಾನ್ಯ ಯಾತ್ರಿಗಳಿಗೆ (Common Pilgrims) ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯು ಗುಡ್‌ ನ್ಯೂಸ್‌ ನೀಡಿದೆ. ಸಾಮಾನ್ಯರಿಗೂ ವೆಂಕಟೇಶ್ವರಸ್ವಾಮಿ ದೇವರ ದರ್ಶನ ಸುಲಭವಾಗಿ ಸಿಗಲೆಂದು ಪ್ರಮುಖ ನಿರ್ಧಾರವನ್ನು ಟಿಟಿಡಿ ಕೈಗೊಂಡಿದೆ.

ತಿರುಮಲದಲ್ಲಿ ಶನಿವಾರ ಸಭೆ ನಡೆಸಿದ ಮಂಡಳಿಯು, ಗಣ್ಯರಿಗಾಗಿ ಜಾರಿಯಲ್ಲಿದ್ದ ತಿರುಪತಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಿದೆ. ಈವರೆಗೆ ಇದ್ದ ಬೆಳಗ್ಗೆ 5:30 ರ ಬದಲಾಗಿ ಗಣ್ಯರಿಗೆ 10 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲು ಕ್ರಮವಹಿಸಲಾಗಿದೆ. ಗಣ್ಯರು ದರ್ಶನ ಮುಗಿಸಿ ಬರುವವರೆಗೂ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಿದ್ದ ಸಾಮಾನ್ಯ ಯಾತ್ರಾರ್ಥಿಗಳಿಗೆ ಶ್ರೀವಾರಿ ದರ್ಶನಕ್ಕೆ ಅನುವು ಮಾಡಿಕೊಡಲು ಈ ಬದಲಾವಣೆ ಮಾಡಲಾಗಿದೆ.

TTD

ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಟಿಟಿಡಿ ಟ್ರಸ್ಟ್ ಬೋರ್ಡ್, ತಿರುಮಲ ಬೆಟ್ಟದ ಮೇಲಿನ ವಸತಿ ಹಂಚಿಕೆ ವ್ಯವಸ್ಥೆಯನ್ನು ತಿರುಪತಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಇದನ್ನೂ ಓದಿ: ತೂಕ ಇಳಿಸಿ, 10 ಲಕ್ಷ ಬಹುಮಾನ ಗೆಲ್ಲಿ – ಉದ್ಯೋಗಿಗಳಿಗೆ ಫಿಟ್‌ನೆಸ್ ಚ್ಯಾಲೆಂಜ್ ಹಾಕಿದ ಸಿಇಒ

ಟಿಟಿಡಿ ಎಲ್ಲಾ ವರ್ಗಗಳ ಕೊಠಡಿಗಳನ್ನು ಹೊಂದಿದೆ. ಸುಮಾರು 7,500 ಘಟಕಗಳಿವೆ. ಇದು ಸೀಮಿತ ಸಂಖ್ಯೆಯ ಯಾತ್ರಿಕರ ಅಗತ್ಯಗಳನ್ನು ಮಾತ್ರ ಹೊಂದಿದೆ. ತಿರುಮಲಕ್ಕೆ ಬರುವ ಅನೇಕ ಯಾತ್ರಾರ್ಥಿಗಳು ಕೊಠಡಿ ಖಾಲಿಯಾಗಿ ತಮಗೆ ಹಂಚಿಕೆಯಾಗುವವರೆಗೂ ಗಂಟೆಗಳ ಕಾಲ ಕಾಯುವಂತಹ ಪರಿಸ್ಥಿತಿ ಇದೆ. ಅದನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ.

ttd

ದರ್ಶನದ ಸಮಯ ಹಾಗೂ ವಾಸ್ತವ್ಯದ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮೊದಲು ಪ್ರಾಯೋಗಿಕವಾಗಿ ಅಕ್ಟೋಬರ್‌ನಿಂದ ಆರಂಭಿಸಲಾಗುವುದು ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಹೀಗಾಗಿತ್ತು, ಇದೀಗ ಮತ್ತೆ? – ಏನಿದು ಧೋನಿ ಲಾಜಿಕ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *