ವಿಶೇಷ ಅಧಿವೇಶನ ನಡೆಸಲು ಕೊನೆಗೂ ಒಪ್ಪಿಗೆ ನೀಡಿದ ಪಂಜಾಬ್ ಗವರ್ನರ್

Public TV
1 Min Read
Bhagwant Mann Banwarilal Purohit

ಚಂಡೀಗಢ: ಸೆಪ್ಟೆಂಬರ್ 22 ರಂದು ವಿಶ್ವಾಸಮತ ಚಲಾಯಿಸಲು ಪಂಜಾಬ್‌ನ (Punjab) ಆಮ್ ಆದ್ಮಿ ಪಕ್ಷ (AAP) ಕರೆದಿದ್ದ ಒಂದು ದಿನದ ವಿಶೇಷ ಅಧಿವೇಶವನ್ನು (One Day Special Session) ಪಂಜಾಬ್‌ನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ (Banwarilal Purohit) ಅವರು ರದ್ದುಗೊಳಿಸಿದ್ದರು. ಇದೀಗ ಸೆಪ್ಟೆಂಬರ್ 27ರಂದು 1 ದಿನದ ವಿಧಾನಸಭೆ ಅಧಿವೇಶನ ನಡೆಸುವ ಸರ್ಕಾರದ ಮನವಿಯನ್ನು ಅವರು ಅಂಗೀಕರಿಸಿದ್ದಾರೆ.

ಭಗವಂತ್ ಮಾನ್ (Bhagwant Mann) ನೇತೃತ್ವದ ಎಎಪಿ ಸರ್ಕಾರ ಸರಕು ಸೇವಾ ತೆರಿಗೆ, ವಿದ್ಯುತ್ ಪೂರೈಕೆಯಂತಹ ವಿಷಯಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 27ರಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ನಡೆಸಲಿದೆ. ಇದಕ್ಕೆ ರಾಜ್ಯಪಾಲರು ಅನುಮತಿ ನೀಡಿರುವುದಾಗಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವನ್ ಭಾನುವಾರ ತಿಳಿಸಿದ್ದಾರೆ.

Bhagwant Mann

ಪಂಜಾಬ್‌ನ ಎಎಪಿ ಸರ್ಕಾರ ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು. ಇದಾದ ಬಳಿಕ ಮಾನ್ ವಿಶ್ವಾಸ ಮತ ಪಡೆಯಲು ಸೆಪ್ಟೆಂಬರ್ 22 ರಂದು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದ್ದರು. ಇದನ್ನೂ ಓದಿ: ಎಸ್.ಎಂ ಕೃಷ್ಣ ಚೇತರಿಸಿಕೊಳ್ಳುತ್ತಿದ್ದು, ಗಾಬರಿ ಬೇಡ: ಬಸವರಾಜ್ ಬೊಮ್ಮಾಯಿ

Bhagwant Mann

ಅಧಿವೇಶನ ನಡೆಸಲು ರಾಜ್ಯಪಾಲರು ಮೊದಲಿಗೆ ಅನುಮತಿ ನೀಡಿದರೂ ಬಳಿಕ ಅದನ್ನು ಹಿಂತೆಗೆದುಕೊಂಡರು. ಇದಾದ ಬಳಿಕ ಪಂಜಾಬ್ ಸಿಎಂ ರಾಜಭವನದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ತಿಳಿಸಿದ್ದರು. ಇದೀಗ ಸೆಪ್ಟೆಂಬರ್ 27ರಂದು ಅಧಿವೇಶನ ನಡೆಸಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: PFI ಶಂಕಿತರ ಮೊಬೈಲ್‌ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ ಆಪ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *