ಆಸ್ಪತ್ರೆಯಲ್ಲಿ ನಮಾಜ್ ಮಾಡಿದ ಮಹಿಳೆ – ಇದು ಅಪರಾಧವಲ್ಲ ಎಂದ ಪೊಲೀಸರು

Public TV
2 Min Read
Namaz

ಲಕ್ನೋ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‍ರಾಜ್‍ನ (Prayagraj) ಸರ್ಕಾರಿ ಆಸ್ಪತ್ರೆಯ (Government Hospital) ವಾರ್ಡ್ ಹೊರಗೆ ರೋಗಿಯನ್ನು ನೋಡಿಕೊಳ್ಳುತ್ತಿದ್ದ ಅಟೆಂಡರ್ ಒಬ್ಬರು ನಮಾಜ್ ಮಾಡಿದ್ದರು. ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ಪೊಲೀಸರು ಇದರಲ್ಲಿ ಯಾವುದೇ ಅಪರಾಧವಿಲ್ಲ ಎಂದು ಹೇಳಿದ್ದಾರೆ.

ವಾರ್ಡ್ ಹೊರಗೆ ನಮಾಜ್ (Namaz) ಮಾಡಿದ್ದ ಮಹಿಳೆ ಹಾಗೂ ಸಿಬ್ಬಂದಿಗೆ ಇಂತಹ ಚಟುವಟಿಕೆಗಳನ್ನು ಆಸ್ಪತ್ರೆಯ ಒಳಗೆ ಮಾಡಬಾರದು ಎಂದು ಆಸ್ಪತ್ರೆಯ ಅಧಿಕಾರಿಗಳು (Hospital authorities) ಎಚ್ಚರಿಕೆ ನೀಡಿದ್ದರು. ಜೊತೆಗೆ ನಮಾಜ್ ವೀಡಿಯೋ (Namaz Video) ವೈರಲ್ ಆಗುತ್ತಿದ್ದಂತೆಯೇ ಅನೇಕ ಜನರು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಕಾನೂನುಬಾಹಿರ ಎಂದು ಕಾಮೆಂಟ್ ಮಾಡಿದ್ದರು. ಮತ್ತೆ ಕೆಲವರು ತಮ್ಮ ಪ್ರೀತಿಪಾತ್ರರ ಯೋಗಕ್ಷೇಮಕ್ಕಾಗಿ ಯಾರಾದರೂ ಪ್ರಾರ್ಥಿಸಿದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿದ್ದರು. ಇದನ್ನೂ ಓದಿ: ಬಾಲಕಿಯರ ಶೌಚಾಲಯವನ್ನು ಬರಿಗೈಯಲ್ಲೇ ಸ್ವಚ್ಛಗೊಳಿಸಿದ ಬಿಜೆಪಿ MP

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಯಾಗರಾಜ್ ಪೊಲೀಸರು, ಮಹಿಳೆ ಯಾವುದೇ ದುರುದ್ದೇಶದಿಂದ ನಮಾಜ್ ಮಾಡಿಲ್ಲ. ಯಾವುದೇ ಕೆಲಸಕ್ಕೆ ಅಡ್ಡಿಯಾಗಬಾರದು ಹಾಗೂ ರೋಗಿ ಶೀಘ್ರದಲ್ಲಿಯೇ ಚೇತರಿಕೊಳ್ಳಲೆಂದು ನಮಾಜ್ ಮಾಡಿರುವ ವಿಚಾರ ವಿಚಾರಣೆ ವೇಳೆ ತಿಳಿದುಬಂದಿದೆ. ಇದು ಯಾವುದೇ ಅಪರಾಧ ಕಾಯಿದೆಗೆ ಸೇರುವುದಿಲ್ಲ. ಘಟನೆಯ ಬಗ್ಗೆ ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡ್ತಿದ್ದ ಯುವತಿ ಹತ್ಯೆ – ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್‌

ಈ ಮುನ್ನ ತೇಜ್ ಬಹದ್ದೂರ್ ಸಪ್ರು ಆಸ್ಪತ್ರೆಯ (Tej Bahadur Sapru Hospital) ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಕೆ.ಅಖೌರಿ ಅವರು, ಇದು ಸಾರ್ವಜನಿಕ ಸ್ಥಳವಾಗಿರುವುದರಿಂದ ವಾರ್ಡ್‍ನಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸದಂತೆ ನಾವು ಎಚ್ಚರಿಕೆ ನೀಡಿದ್ದೇವೆ. ಮಹಿಳೆಯನ್ನು ಡೆಂಗ್ಯೂ ವಾರ್ಡ್‍ನಲ್ಲಿದ್ದ (Dengue Ward) ರೋಗಿಯ ಅಟೆಂಡರ್ ಎಂದು ಗುರುತಿಸಲಾಗಿದೆ. ಇಂತಹ ಕೃತ್ಯಕ್ಕೆ ಅವಕಾಶ ನೀಡದಂತೆ ಎಲ್ಲ ವಾರ್ಡ್‍ಗಳ ಉಸ್ತುವಾರಿಗಳಿಗೂ ಸೂಚಿಸಿದ್ದೇವೆ. ಇನ್ಮುಂದೆ ಈ ರೀತಿ ಮಾಡದಂತೆ ಮಹಿಳೆಗೂ ತಿಳಿಸಿದ್ದೇವೆ ಎಂದು ಹೆಳಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *