ಶಶಿ ತರೂರ್‌ಗೆ ಕೇರಳದಲ್ಲೇ ಸಿಕ್ತಿಲ್ಲ ಬೆಂಬಲ – ರಾಹುಲ್ ಸ್ಪರ್ಧಿಸುವಂತೆ ಒತ್ತಾಯ

Public TV
1 Min Read
rahul gandhi 4

ನವದೆಹಲಿ: ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಚುನಾವಣೆಗೆ (Congress Chief Election) ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ ಸಂಸದ ಶಶಿ ತರೂರ್‌ಗೆ (MP Shashi Tharoor) ತಮ್ಮ ತವರು ರಾಜ್ಯವಾದ ಕೇರಳದ (Kerala) ನಾಯಕರಿಂದಲೇ ಯಾವುದೇ ಬೆಂಬಲ ಸಿಗುತ್ತಿಲ್ಲ. ಹಲವಾರು ಮಂದಿ ರಾಹುಲ್ ಗಾಂಧಿಯವರು ಮುಖ್ಯಸ್ಥರಾಗಿ ಮರಳಬೇಕೆಂದು ಬಯಸುತ್ತಿದ್ದಾರೆ ಮತ್ತು ರಾಹುಲ್ ಗಾಂಧಿ (Rahul Gandhi) ಅವರು ಪಕ್ಷದ ಆಡಳಿತವನ್ನು ವಹಿಸಿಕೊಳ್ಳಬೇಕೆಂದು ಎಂಬ ಒತ್ತಾಯಗಳು ಕೇಳಿಬರುತ್ತಿದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಲೋಕಸಭೆಯ (Lok Sabha) ಕಾಂಗ್ರೆಸ್‍ನ ಸಚೇತಕ ಕೆ ಸುರೇಶ್ (K Suresh), “ಶಶಿ ತರೂರ್ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಅಭ್ಯರ್ಥಿಯ ಬಗ್ಗೆ ಎಲ್ಲರಿಗೂ ಒಮ್ಮತ ಇರಬೇಕು. ಆದರೆ ನಾವು ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರಾಗುವಂತೆ ವಿನಂತಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಗಳೂರಿನ PFI, SDPI ಕಚೇರಿ ಮೇಲೆ NIA ದಾಳಿ

ಮತ್ತೊಂದೆಡೆ ಸಂಸದ ಬೆನ್ನಿ ಬೆಹನನ್ (Benny Behanan) ಅವರು, ಶಶಿ ತರೂರ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ನಾನು ಅಂದುಕೊಳ್ಳುವುದಿಲ್ಲ ಮತ್ತು ಅವರು ಪಕ್ಷದ ಹೈಕಮಾಂಡ್ (High Command) ನಿರ್ಧಾರವನ್ನು ಪಾಲಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಲೇಡಿಸ್ ಸೀಟ್‍ನಲ್ಲಿ ಕೂತು ಪ್ರಯಾಣಿಸುವ ಮುನ್ನ ಎಚ್ಚರ – ಇಲ್ಲದ್ದಿದ್ದರೆ ಬೀಳುತ್ತೆ ಫೈನ್

ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಅವರಿಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹಲವು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *