T20 WorldCupಗೆ ಡಿಕೆ ಓಕೆ, ರಿಷಭ್ ಯಾಕೆ – ಪಂತ್ ಕೈಬಿಡೋದು ಸೂಕ್ತ ಅಂದ ಮಾಜಿ ಕ್ರಿಕೆಟಿಗ

Public TV
2 Min Read
RISHAB PANT 3

ಮುಂಬೈ: ಟೀಂ ಇಂಡಿಯಾ (Team India) ಆಯ್ಕೆ ಮಾಡಿರುವ T20 ವಿಶ್ವಕಪ್ (T20 World Cup) ತಂಡದಿಂದ ರಿಷಭ್ ಪಂತ್  (Rishabh Pant) ಅವರನ್ನ ಕೈಬಿಡುವಂತೆ ಭಾರತೀಯ ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ.

ಇಂದಿನಿಂದ ಭಾರತ (India) – ಆಸ್ಟ್ರೇಲಿಯಾ (Australia) ಟಿ20 ಸರಣಿ ಆರಂಭವಾಗುತ್ತಿದ್ದು, ತವರಿನಲ್ಲೇ ಆಸಿಸ್ ತಂಡವನ್ನು ಬಗ್ಗು ಬಡಿಯಲು ಟೀಂ ಇಂಡಿಯಾ ಸಜ್ಜಾಗಿದೆ.

RISHAB PANT

ಏಷ್ಯಾಕಪ್ (Aisa Cup) ಸೂಪರ್ ಫೋರ್ ಲೀಗ್ ಹಂತದಲ್ಲಿ ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾದ (SriLanka) ವಿರುದ್ಧ ಸೆಣಸಿದರೂ ಫೈನಲ್ ತಲುಪಲು ಭಾರತ ವಿಫಲವಾಯಿತು. ಈ ಸೋಲಿನ ರುಚಿ ಕಂಡ ಭಾರತ ಹಲವು ಬದಲಾವಣೆಯೊಂದಿಗೆ ಎದುರಾಳಿಗಳನ್ನು ಬಗ್ಗು ಬಡಿಯಲು ಸಜ್ಜಾಗುತ್ತಿದೆ. ಅಲ್ಲದೇ ಐಸಿಸಿ (ICC) ಟಿ20 ವಿಶ್ವಕಪ್‌ಗೂ ಮುನ್ನವೇ ಟೀಂ ಇಂಡಿಯಾ ಆಟಗಾರರ ಸಾಮರ್ಥ್ಯವನ್ನೂ ಮೌಲ್ಯಮಾಪನ ಮಾಡುವ ಪಂದ್ಯವೂ ಇದಾಗಿದೆ. ಆಸ್ಟ್ರೇಲಿಯಾ ಟಿ20 ಸರಣಿ ಮುಗಿಯುತ್ತಿದ್ದಂತೆ ಸೆಪ್ಟೆಂಬರ್ 28 ರಿಂದ ದಕ್ಷಿಣ ಆಫ್ರಿಕಾದೊಂದಿಗೆ ಟಿ20 ಸರಣಿ ಆರಂಭವಾಗಲಿದೆ.

RISHAB PANT 2

ಈ ಹೊತ್ತಿನಲ್ಲೇ ರಿಷಭ್ ಪಂತ್ ಅವರನ್ನು ವಿಶ್ವಕಪ್ ತಂಡದಿಂದ ಕೈ ಬಿಡುವುದು ಉತ್ತಮ ಎಂದು ಭಾರತೀಯ ಮಾಜಿ ಕ್ರಿಕೆಟರ್ ವಾಸಿಮ್ ಜಾಫರ್ (Wasim Jaffer) ಹೇಳಿದ್ದಾರೆ.

ಈ ವರ್ಷದಲ್ಲಿ ಪಂತ್ ಅವರ ಪ್ರದರ್ಶನ ಉತ್ತಮವಾಗಿಲ್ಲ. ವಿಶ್ವಕಪ್‌ನಲ್ಲೂ ಅವರು ಸರಿಯಾಗಿ ಆಡುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ದಿನೇಶ್ ಕಾರ್ತಿಕ್ (Dinesh Karthik) ಅವರು ಇನ್ನಿಂಗ್ಸ್ ಹೇಗೆ ಕೊನೆಗೊಳಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ದಿನೇಶ್ ಕಾರ್ತಿಕ್ ಅವರು ಟೀಂ ಇಂಡಿಯಾದಲ್ಲಿ ಇರಬಹುದು. ಆದರೆ ಪಂತ್ ಅವರ ಆಯ್ಕೆಯನ್ನು ಟೀಂ ಇಂಡಿಯಾ (Team India) ಪರಾಮರ್ಶಿಸಬೇಕು ಎಂದು ಸಲಹೆ ನೀಡಿದ್ದಾರೆ.

dinesh karthik

ಇತ್ತೀಚೆಗೆ ನಡೆದ ಏಷ್ಯಾಕಪ್ (AisaCup) ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ವಿರುದ್ಧ ಕಳಪೆ ಪ್ರದರ್ಶನ ನೀಡಿದ ರಿಷಭ್ ಪಂತ್ 4 ಪಂದ್ಯಗಳಲ್ಲಿ ಕೇವಲ 54 ರನ್‌ಗಳನ್ನಷ್ಟೇ ಗಳಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಭಾರತ ಹಾಗೂ ಇಂಗ್ಲೆAಡ್ ನಡುವೆ ನಡೆದ ಏಕದಿನ ಹಾಗೂ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಪಂತ್ ಮಿಂಚಿದ್ದರು. ಇಂಗ್ಲೆAಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 113 ಎಸೆತಗಳಲ್ಲಿ 125 ರನ್ ಸಿಡಿಸಿ ಅಜೇಯರಾಗಿ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟಿದ್ದರು. ಹಾಗಾಗಿ ಪಂತ್ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಸೂಕ್ತವಾಗಿದ್ದಾರೆಯೇ ಹೊರತು ಟಿ20ಗೆ ಸೂಕ್ತವಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *