ಸಿನಿಮಾ ರಂಗದಲ್ಲಿ ನಾಯಕಿಯರು ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಕಷ್ಟು ಸವಾಲುಗಳನ್ನ ಎದುರಿಸಬೇಕಾಗುತ್ತದೆ.ನಟಿಯಾಗಿ ನಿಲ್ಲುವುದು ಅದೆಷ್ಟು ಕಷ್ಟ ಮತ್ತು ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವದ ಬಗ್ಗೆ ನಟಿ ಶಮಾ ಸಿಕಂದರ್(Shama Sikander) ಮಾತನಾಡಿದ್ದಾರೆ.
ಕಿರುತೆರೆ ಮತ್ತು ಬಾಲಿವುಡ್‌ನ(Bollywood) ಕೆಲ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಚೆಲುವೆ ಶಮಾ ಸಿಕಂದರ್(Shama Sikander) ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ನಾನು ಪಾತ್ರಗಳ ಹುಡುಕಾಟದಲ್ಲಿದ್ದರೆ ನಿರ್ಮಾಪಕರು ನನ್ನಿಂದ ಬಯಸುತ್ತಿದ್ದದ್ದು ಬೇರೆ, ಅವರ ದೃಷ್ಟಿಕೋನವೇ ಬೇರೆಯಾಗಿತ್ತು ಎಂದು ನಟಿ ಹೇಳಿದ್ದಾರೆ.ಇದನ್ನೂ ಓದಿ:ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್
`ಯೇ ಮೇರಿ ಲೈಫ್ ಹೈ’ ಖ್ಯಾತಿಯ ನಟಿ ಶಮಾ, ಕೆಲ ದೊಡ್ಡ ನಿರ್ಮಾಪಕರು ನನ್ನ ಬಳಿ ಸ್ನೇಹಿತೆಯಾಗಿ ಇರಲು ಹೇಳುತ್ತಿದ್ದರು. ಯಾವುದೇ ಚಿತ್ರ ಮಾಡದೇ ನಾನು ಸ್ನೇಹಿತೆಯಾಗಿರಲು ಹೇಗೆ ಸಾಧ್ಯ, ಅವರು ನನ್ನ ಬಳಿ ತಮ್ಮ ಲೈಂಗಿಕ ಆಸೆಯನ್ನು ವ್ಯಕ್ತಪಡಿಸಿದ್ದರು ಎಂದು ತಮಗಾದ ಕರಾಳ ಅನುಭವವನ್ನು ನಟಿ ಹೇಳಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ಮಾತ್ರ ಕಾಸ್ಟಿಂಗ್ ಕೌಚ್ ಸೀಮಿತವಾಗಿಲ್ಲ. ಇದೀಗ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದು ಹೇಳಿದ್ದಾರೆ.