ಧಾರವಾಡ: ತನ್ನದೇ ಸ್ಪಾದಲ್ಲಿ (Spa) ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಕಾಂಗ್ರೆಸ್ ಮುಖಂಡನಿಗೆ(Congress leader) ಯುವತಿ(Young Women) ಸ್ನೇಹಿತರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಹೌದು, ಧಾರವಾಡದ ಕಾಂಗ್ರೆಸ್ ಮುಖಂಡ ಮನೋಜ್ ಕರ್ಜಗಿ(Manoj Karjagi) ಎಂಬಾತ ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಆಗಿದ್ದ. ಈತ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಅವರ ಪರಮ ಆಪ್ತ. ಕರ್ಜಗಿ ವೃತ್ತಿಯಿಂದ ಧಾರವಾಡದ (Darwad) ವಿದ್ಯಾಗಿರಿ ಬಡಾವಣೆಯಲ್ಲಿ ಲೇಮೋಸ್ ಯುನಿಸೆಕ್ಸ್ ಸಲೂನ್ ಆ್ಯಂಡ್ ಸ್ಪಾ ನಡೆಸುತ್ತಿದ್ದಾನೆ. ಇದನ್ನೂ ಓದಿ: ನನ್ನ ನೋಡಿ ಬೊಗಳುತ್ತೆ – ನಾಯಿಯನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದ
- Advertisement
ಭಾನುವಾರ (Sunday) ಮಧ್ಯಾಹ್ನ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಬ್ಯೂಟಿಷಿಯನ್ (Beautician) ಜೊತೆ ಸ್ಪಾ ಕ್ಲೀನ್ ಆಗಿ ಇಟ್ಟಿಲ್ಲ ಎಂಬ ವಿಚಾರವಾಗಿ ಕಿರಿಕ್ ಮಾಡಿದ್ದಾನೆ. ಬಳಿಕ ಆಕೆಯನ್ನು ತಬ್ಬಿಕೊಂಡು ಮುತ್ತು ಕೊಡಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಂದ ಕೂಗಾಡುತ್ತಾ ಹೊರ ಬಂದ ಯುವತಿ, ತನ್ನ ಸ್ನೇಹಿತರನ್ನು (Friends) ಅಲ್ಲಿಗೆ ಕರೆಯಿಸಿಕೊಂಡಿದ್ದಾಳೆ. ಆಗ ಸ್ಪಾಗೆ ಬಂದ ಯುವತಿಯ ಸ್ನೇಹಿತರ ಗುಂಪು ಮನೋಜ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಯುವತಿಗೆ ಕ್ಷಮೆ ಕೇಳಿ ಎಲ್ಲವೂ ಮುಗಿದಿತ್ತು.
- Advertisement
ಹೀಗಿದ್ದರೂ ತಾನು ಸಾಚಾ ಎಂದು ತೋರಿಸಿಕೊಳ್ಳಲು ಹೋಗಿ ಕಾಂಗ್ರೆಸ್ ಮುಖಂಡ ತಾನೇ ತೋಡಿದ ಖೆಡ್ಡಾದಲ್ಲಿ ತಾನೇ ಬಿದ್ದಿದ್ದಾನೆ. ಗಲಾಟೆ ವೇಳೆ ಆಯನ್ ನದಾಫ್(Ayan Nadaf) ಎಂಬಾತನಿಗೆ ಗಾಯವಾಗಿದ್ದು, ಈತನೊಂದಿಗೆ ಮನೋಜ್ ಕರ್ಜಗಿ ನಮ್ಮ ಮೇಲೆ ಗುಂಪೊಂದು ಹಲ್ಲೆ ಮಾಡಿ ಪರಾರಿಯಾಗಿದೆ ಅಂತಾ ಎಂಎಲ್‍ಸಿ(MLC) ಮಾಡಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಘಟನೆಯಲ್ಲಿ ಕರ್ಜಗಿ ಕೈಗೆ ಏಟಾಗಿದ್ದರೆ, ಆಯನ್ ಬೆನ್ನಿಗೆ ಇರಿತ ಆಗಿದೆ. ಕರ್ಜಗಿ ಇತ್ತ ಎಂಎಲ್‍ಸಿ ಮಾಡಿಸುತ್ತಿದ್ದಂತೆಯೇ ವಿದ್ಯಾಗಿರಿ ಠಾಣೆಗೆ ಬಂದ ಯುವತಿ, ಮನೋಜ್ ಕರ್ಜಗಿ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದು, ಸದ್ಯ ಕರ್ಜಗಿಯನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮತ್ತೊಂದು ಕಡೆ ಅಯಾನ್ ಹಾಗೂ ಕರ್ಜಗಿ ಮೇಲೆ ಹಲ್ಲೆ ಮಾಡಿದವರ ಮೇಲೂ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಈ ಸಂಬಂಧ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಫೋನ್ ಬಳಕೆದಾರರೇ ಎಚ್ಚರ! – ಎಂಟ್ರಿಕೊಟ್ಟಿದೆ ರಷ್ಯಾದ ಸೋವಾ-5.0 ವೈರಸ್