ಇವನ ತಲೆ ಬುರುಡೆ ಒಡೆದು ಹೋಗದಿರಲಪ್ಪ – ಮಂತ್ರ ಜಪಿಸಿ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿರೋ ಪೊಲೀಸ್

Public TV
1 Min Read
Police helmet 2

ನವದೆಹಲಿ: ದ್ವಿಚಕ್ರವಾಹನ (Two Wheeler) ಸವಾರರಲ್ಲಿ ಹೆಲ್ಮೆಟ್ (Helmet) ಕುರಿತು ಅರಿವು ಮೂಡಿಸಲು ಒಂದಿಲ್ಲೊಂದು ವಿಧಾನಗಳನ್ನು ಅನುಸರಿಸುತ್ತಿರುವ ಪೊಲೀಸರು (Police) ಇದೀಗ, ಮಂತ್ರೋಪಚಾರದ ಮಾರ್ಗವನ್ನು ಅನುಸರಿಸುತ್ತಿದ್ದಾರೆ.

ನಡುರಸ್ತೆಯಲ್ಲಿ ನಿಂತು ಹೆಲ್ಮೆಟ್ ಜಾಗೃತಿ ಮೂಡಿಸುತ್ತಿರುವ ಪೊಲೀಸ್ (Police) `ಈತ ತನ್ನ ಮದುವೆಯಲ್ಲಿಯೂ ಇಷ್ಟೊಂದು ಗೌರವಯುತವಾಗಿ ಬಾಸಿಂಗ ಧರಿಸಿರಲಿಲ್ಲವೇನೋ’ ಎಂದು ಶೀರ್ಷಿಕೆ ಕೊಟ್ಟು ವೀಡಿಯೋ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ರಜೆ ತೆಗೆದುಕೊಂಡು ಆನಂದಿಸಿ- ಮೋದಿಗೆ ಶಾರುಖ್ ಖಾನ್ ಸಲಹೆ

Police helmet

ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಓಡಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ತಡೆದ ಪೊಲೀಸ್ ಅಧಿಕಾರಿ, ಆತನ ತಲೆಗೆ ಹೆಲ್ಮೆಟ್ ಹಾಕುತ್ತಾ ಮಂತ್ರವನ್ನು ಪಠಿಸಲು ಶುರುಮಾಡಿದ್ದಾರೆ. ಮಂತ್ರದಲ್ಲಿ ಸಂಚಾರ ನಿಯಮಗಳ (Traffic Rule) ವಿವರಣೆ ಮತ್ತು ನಿಯಮ ಮುರಿದರೆ ಆಗುವ ಪರಿಣಾಮವನ್ನು ಶ್ರುತಿಬದ್ಧವಾಗಿ, ಲಯಬದ್ಧವಾಗಿ ಹಾಗೂ ಅತ್ಯಂತ ಮಾರ್ಮಿಕವಾಗಿಯೂ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

helmet isi mark

ಹಲವು ಮಂತ್ರ ಸ್ತೋತ್ರಗಳನ್ನು ಪಠಿಸಿದ ಪೊಲೀಸ್ ಕೊನೆಗೆ ಹೆಲ್ಮೆಟ್ ಧರಿಸದೇ ಇದ್ರೆ ಅದರ ಐದು ಪಟ್ಟು ದಂಡ ಬೀಳುತ್ತೆ ಎಂದು ಎಚ್ಚರಿಸಿದ್ದಾರೆ. ಪೊಲೀಸ್ ಹೆಲ್ಮೆಟ್ ವಿಶೇಷ ಜಾಗೃತಿಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಲಕ್ಷಾಂತರ ಮಂದಿ ನೋಡಿ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *