ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಂ ಇಂಡಿಯಾಗೆ ನಿರಾಸೆ – ಕಾಡುತ್ತಿದೆ ಕೂಲ್ ಕ್ಯಾಪ್ಟನ್ ಕೊರತೆ

Public TV
2 Min Read
MS DHONI AND VIRAT KOHLI

ಮುಂಬೈ: ಟೀಂ ಇಂಡಿಯಾದ (Team India) ಕೂಲ್ ಕ್ಯಾಪ್ಟನ್ ಖ್ಯಾತಿಯ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ 2 ವರ್ಷ ಕಳೆದಿದೆ. ಆದರೂ ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ತುಂಬುವ ಆಟಗಾರ ಸಿಗುತ್ತಿಲ್ಲ.

DHONI

ಹೌದು ಧೋನಿ ಒಬ್ಬ ಕ್ರಿಕೆಟ್ ಮಾಂತ್ರಿಕ 2004ರಲ್ಲಿ ಟೀಂ ಇಂಡಿಯಾಗೆ ಕಾಲಿಟ್ಟ ಧೋನಿ ಆ ಬಳಿಕ ತನ್ನ ಆಟದ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿ, ತಂಡದ ನಾಯಕತ್ವದ ಚುಕ್ಕಾಣಿ ಹಿಡಿದು ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಐಸಿಸಿಯ ಮೂರು ಮಾದರಿ ಟ್ರೋಫಿ ಗೆದ್ದ ಭಾರತದ ನಾಯಕ ಎಂಬ ಹೆಗ್ಗಳಿಕೆಗೆ ಹೊಂದಿದವರು. ಬ್ಯಾಟ್ಸ್‌ಮ್ಯಾನ್‌ ಆಗಿ ಕ್ರೂಷಿಯಲ್ ಟೈಮ್‍ನಲ್ಲಿ ದೊಡ್ಡ ಹೊಡೆತಗಳ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುತ್ತಿದ್ದ ಫಿನಿಶರ್. ವಿಕೆಟ್ ಹಿಂದೆ ನಿಂತು ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮಾಡುತ್ತಿದ್ದ ಧೋನಿಯಿಂದಾಗಿ ಕ್ರಿಸ್ ಬಿಡಲು ಎದುರಾಳಿ ಬ್ಯಾಟ್ಸ್‌ಮ್ಯಾನ್‌ಗಳು ಭಯಪಡುತ್ತಿದ್ದರು. ಇನ್ನೂ ನಾಯಕತ್ವದ ಬಗ್ಗೆ ಹೇಳಬೇಕೆಂದಿಲ್ಲ. ಪಂದ್ಯವನ್ನು ಕೊನೆಯ ಎಸೆದವರೆಗೆ ತಮ್ಮ ಮಾಸ್ಟರ್ ಮೈಂಡ್ ಮೂಲಕ ಕೊಂಡೊಯ್ದು ಗೆಲುವನ್ನು ಎದುರಾಳಿಗಳಿಂದ ಕಸಿಯುತ್ತಿದ್ದ ಜಾದುಗಾರ. ಹಿರಿಯ ಆಟಗಾರರಿಗೆ ಕೊಕ್ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಿ ತಂಡವನ್ನು ಬಲಿಷ್ಠವಾಗಿ ಕಟ್ಟಿ ಸ್ಟಾರ್ ಆಟಗಾರರ ಬೆಳವಣಿಗೆ ಧೋನಿ ಶ್ರಮಿಸಿ ಬಳಿಕ ನಾಯಕತ್ವದ ಪಟ್ಟದಿಂದ ಕೆಳಗಿಳಿದು ಆಟಗಾರನಾಗಿ ಮಾತ್ರ ತಂಡದಲ್ಲಿದ್ದರು. ಇದನ್ನೂ ಓದಿ: ವಿಶ್ವಕಪ್ ಬಳಿಕ T20 ಆವೃತ್ತಿಗೆ ಕಿಂಗ್ ಕೊಹ್ಲಿ ವಿದಾಯ?

TEAM INDIA 3

ಹೀಗೆ ತಂಡದ ಬೆಳವಣಿಗೆ ಶ್ರಮಿಸಿ ತಂಡದಿಂದ ಧೋನಿ ನಿವೃತ್ತಿಗೊಂಡ ಬಳಿಕ ಅವರಂತ ಆಟಗಾರ, ನಾಯಕ ಇನ್ನೂ ಟೀಂ ಇಂಡಿಯಾಗೆ ಸಿಕ್ಕಿಲ್ಲ. ಆದರೆ ಅವರ ಸ್ಥಾನವನ್ನು ಒಂದು ಹಂತದಲ್ಲಿ ತುಂಬುವ ಭರವಸೆ ಮೂಡಿಸಿದ್ದ ಅಟಗಾರರೆಲ್ಲ ಸ್ಥಿರತೆ ಕಾಪಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ. ಹೌದು 2020ರಲ್ಲಿ ಧೋನಿ ನಿವೃತ್ತಿ ಘೋಷಿದ ಬಳಿಕ ಕೊಹ್ಲಿ (Virat Kohli) ತಂಡವನ್ನು ಉತ್ತಮವಾಗಿ ನಿಭಾಯಿಸಿದರೂ ಐಸಿಸಿ (ICC) ಟ್ರೋಫಿ ಗೆಲ್ಲದೇ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಆ ಬಳಿಕ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ (Rohit Sharma) ಒತ್ತಡದ ಸಮಯದಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲರಾಗಿ ತಂಡದ ಸಹ ಆಟಗಾರರೊಂದಿಗೆ ತಾಳ್ಮೆ ಕಳೆದುಕೊಂಡು ವರ್ತಿಸಿ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಕಾವೇರಿದ ಭಾರತ Vs ಪಾಕ್ T20 ವಿಶ್ವಕಪ್ ಫೈಟ್ – ಟಿಕೆಟ್ ಸೋಲ್ಡ್ ಔಟ್

kuldeep yadav and dhoni

ತಂಡ ಬಲಿಷ್ಠವಾಗಿದ್ದರೂ ಕಳೆದ 9 ವರ್ಷಗಳಿಂದ ಭಾರತ ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿದೆ. 2013ರಲ್ಲಿ ಭಾರತ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದ ಬಳಿಕ ಐಸಿಸಿ ಟೂರ್ನಿಗಳಲ್ಲಿ ಕಪ್ ಗೆಲ್ಲಲು ಭಾರತ ಎಡವಿದೆ. ಇದಕ್ಕೆ ಪ್ರಮುಖ ಕಾರಣ ತಂಡದಲ್ಲಿ ಪ್ರತಿಭಾನ್ವಿತ ಅಟಗಾರನಿದ್ದರೂ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲಾಗದೆ ನಿರಾಸೆ ಅನುಭವಿಸುತ್ತಿರುವ ಪರಿಯಾಗಿದೆ. ಹೌದು ಇದೀಗ ತಂಡದಲ್ಲಿ ಉತ್ತಮ ಸಾಮರ್ಥ್ಯವುಳ್ಳ ಅಟಗಾರರಿದ್ದರೂ ಪದೇ ಪದೇ ತಂಡದ ಬದಲಾವಣೆ, ನಾಯಕನ ಬದಲಾವಣೆ, ತಂಡದ ಸಮತೋಲನದ ಮೇಲೆ ಪರಿಣಾಮ ಬೀರಿದೆ.

ನಾಯಕನಾದವ ತಂಡದ ಸಹ ಆಟಗಾರರೊಂದಿಗೆ ಮೈದಾನದಲ್ಲಿ ಸರಿಯಾಗಿ ವರ್ತಿಸಬೇಕು. ಒತ್ತಡದ ಪರಿಸ್ಥಿತಿಯಲ್ಲೂ ಆಟಗಾರರಿಗೆ ಹುರಿದುಂಬಿಸಬೇಕು ಅದನ್ನು ಬಿಟ್ಟು ನಿರಾಸೆಗೊಂಡರೆ ಇದರಿಂದ ತಂಡದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಹಆಟಗಾರರನ್ನು ನಾಯಕನಾದವನು ಮೊದಲು ನಂಬಬೇಕು. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ತಂಡವನ್ನು ಮುನ್ನಡೆಸುವ ಮನಸ್ಥಿತಿ ಇರಬೇಕು ಅಂತಹ ನಾಯಕತ್ವದ ಮನಸ್ಥಿತಿಯನ್ನು ಮೈಗೊಂಡಿಸಿಕೊಂಡರೆ, ಯಾವುದೇ ಕಪ್ ಗೆಲ್ಲುವುದು ಅಸಾಧ್ಯವಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *