ಜಗ್ಗೇಶ್ ನಟನೆಯ ಕಾಳಿದಾಸ ಕನ್ನಡ ಮೇಷ್ಟ್ರು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿರುವ, ಸಾಕಷ್ಟು ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹಾಗೂ ರೂಪದರ್ಶಿ ಆಗಿಯೂ ಸಾಕಷ್ಟು ಹೆಸರು ಮಾಡಿರುವ ಮಾಸ್ಟರ್ ಓಂ (Om) ಅವರಿಗೆ ಪ್ರತಿಷ್ಠಿತ ವೆಲೋಝ್ ಈವ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಗ್ಲಾಮರಸ್ ಸೂಪರ್ ಮಾಡೆಲ್ (Model) ಪೇಜೆಂಟ್ನಲ್ಲಿ ಕರ್ನಾಟಕ (Karnataka) ಸೂಪರ್ ಟೀನ್ ಮಾಡೆಲ್ ಟೈಟಲ್ ತನ್ನದಾಗಿಸಿಕೊಂಡಿದ್ದಾನೆ. ಜತೆಜತೆಗೆ ಫ್ಯಾಷನ್, ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ನೀಡಲಾಗುವ ರಾಜ್ಯ ಬಾಲ ಪ್ರಶಸ್ತಿ (Award) ಕೂಡ ಮಾಸ್ಟರ್ ಓಂ ಪಾಲಾಗಿದೆ.
ಬಸವನಗುಡಿ ಆಚಾರ್ಯ ಪಾಠಶಾಲಾ 9 ನೇ ತರಗತಿಯ ವಿದ್ಯಾರ್ಥಿಯಾಗಿರುವ ಓಂ, ಚಿಕ್ಕ ಮಗುವವಾಗಿರುವಾಗಿನಿಂದಲೇ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ (Sandalwood) ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ. ಕೊವೀಡ್ಗೂ ಮುನ್ನ ಇಂಟರ್ನ್ಯಾಷನಲ್ ಕಿಡ್ಸ್ ಫ್ಯಾಷನ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ , ಸಿನಿಮಾ ಹಾಗೂ ಫ್ಯಾಷನ್ ಕ್ಷೇತ್ರ ಎರಡರಲ್ಲೂ ದಶಕಗಳಿಂದ ಗುರುತಿಸಿಕೊಂಡಿರುವ ಏಕೈಕ ಸೌತ್ ಇಂಡಿಯನ್ ಸೂಪರ್ ಕಿಡ್ ಮಾಡೆಲ್ ಎಂಬ ಗೌರವಕ್ಕೂ ಪಾತ್ರನಾಗಿದ್ದಾನೆ. “ನನ್ನ ಸಾಧನೆಗೆ ಅಮ್ಮನ ಹಾಗೂ ಆಚಾರ್ಯ ಪಾಠ ಶಾಲೆಯ ಪ್ರೋತ್ಸಾಹ ಜತೆಗಿದೆ” ಎಂದು ಹೇಳುತ್ತಾನೆ. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್
ಕಾಳಿದಾಸ ಕನ್ನಡ ಮೇಷ್ಟ್ರು ಹಾಗೂ ತಮಿಳಿನ ಕಾಫಿ ಚಿತ್ರ ಸೇರಿದಂತೆ ಈಗಾಗಲೇ ಮಾಸ್ಟರ್ ಓಂ ಸುಮಾರು 10 ಕ್ಕೂ ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಓದಿನ ಜತೆಜತೆಯೇ ಮಾಡೆಲಿಂಗ್ನಲ್ಲೂ ಬಿಝಿಯಾಗಿದ್ದು 35 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದು, ಸುಮಾರು 30 ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದಾನೆ.