ಸ್ಯಾಂಡಲ್‌ವುಡ್‌ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Rangnath) ಇದೀಗ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಚಂದನವನದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪಟಾಕಿ ಪೋರಿ ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ನಟ ಸಿದ್ಧಾರ್ಥ್(Siddarth) ನಾಯಕಿಯಾಗಿ ಆಶಿಕಾ ಎಂಟ್ರಿ ಕೊಡ್ತಿದ್ದಾರೆ.
`ಕ್ರೇಜಿ ಬಾಯ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಶಿಕಾ ರಂಗನಾಥ್ ಎಂಟ್ರಿ ಕೊಟ್ಟರು. ಬಳಿಕ ಮುಗುಳುನಗೆ, ರ‍್ಯಾಂಬೋ 2, ಮದಗಜ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕನ್ನಡ ಚಿತ್ರರಂಗದಲ್ಲಿ ಸಖತ್ ನೇಮ್ ಫೇಮು ಇರುವಾಗಲೇ ಕಾಲಿವುಡ್‌ನಿಂದ(Kollywood) ಭರ್ಜರಿ ಆಫರ್ಸ್ ಆಶಿಕಾಗೆ ಅರಸಿ ಬಂದಿದೆ. ತಮಿಳಿನ ಸ್ಟಾರ್ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಪಟಾಕಿ ಪೋರಿ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಸೀರಿಯಲ್ ಮತ್ತೊಂದು ಟ್ವಿಸ್ಟ್ : ಆರ್ಯವರ್ಧನ್ ಕೊಲ್ಲಿಸೋಕೆ ಅನುನೇ ಕೊಟ್ಳು ಸುಪಾರಿ
ಎನ್. ರಾಜಶೇಖರ್ ನಿರ್ದೇಶನದ ಹೆಸರಿಡದ ಹೊಸ ಚಿತ್ರದಲ್ಲಿ ಸಿದ್ಧಾರ್ಥ್‌ಗೆ ಜೋಡಿಯಾಗಿ ಆಶಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮುಹೂರ್ತ ಕೂಡ ಇಂದು (ಸೆ.15) ಚೆನ್ನೈನಲ್ಲಿ ನೆರವೇರಿದೆ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಸಂತಸದ ಸುದ್ದಿಯನ್ನು ಫೋಟೋ ಶೇರ್ ಮಾಡುವ ಮೂಲಕ ಸ್ವತಃ ಆಶಿಕಾ, ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ನಟ ಸಿದ್ಧಾರ್ಥ್ ಮತ್ತು ಚಿತ್ರತಂಡದ ಜತೆ ಖುಷಿಯಿಂದ ಆಶಿಕಾ ಕ್ಯಾಮೆರಾಗೆ ಪೋಸ್ ಮಾಡಿದ್ದಾರೆ. ನೆಚ್ಚಿನ ನಟಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.
View this post on Instagram
ಭಿನ್ನ ಕಥೆಯ ಮೂಲಕ ತಮಿಳು ಚಿತ್ರರಂಗದಲ್ಲೂ ಮಿಂಚಲು ಕನ್ನಡದ ನಟಿ ಆಶಿಕಾ ಸಜ್ಜಾಗಿದ್ದಾರೆ. ಪರಭಾಷೆಯ ಚಿತ್ರರಂಗದಲ್ಲೂ ಹವಾ ಕ್ರಿಯೇಟ್ ಮಾಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.