ಭುವನೇಶ್ವರ್: ಓಡಿಶಾದ(Odisha) ಕಲಹಂಡಿ ಜಿಲ್ಲೆಯಲ್ಲಿ ವಿವಾಹಿತನೊಬ್ಬ ತನ್ನ ಪತ್ನಿಯ(Wife) ಸಮ್ಮುಖದಲ್ಲಿ ಮಂಗಳಮುಖಿಯನ್ನು ವಿವಾಹವಾಗಿದ್ದಾನೆ.
ಕಲಹಂಡಿಯ ದೇಪುರ್ ಎಂಬ ಪುಟ್ಟ ಗ್ರಾಮದ ಸಂಗೀತಾ ತೃತೀಯ ಲಿಂಗಿಯಾಗಿದ್ದು(Trans Woman), ಈಕೆಯನ್ನು ಫಕೀರ್ ನಿಯಾಲ್ ಎಂಬಾತ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದಾನೆ.
5 ವರ್ಷಗಳ ಹಿಂದೆ ಫಕೀರ್ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದ. ದಂಪತಿಗೆ 2 ವರ್ಷದ ಮಗುವಿದೆ. ಆದರೆ ಕಳೆದ ಒಂದು ವರ್ಷದಿಂದ ಹಿಂದೆ ತೃತೀಯ ಲಿಂಗಿ ಸಮೂದಾಯಕ್ಕೆ ಸೇರಿದ್ದ ಸಂಗೀತಾಳೊಂದಿಗೆ ಫಕೀರ್ ದೈಹಿಕ ಸಂಬಂಧವನ್ನು ಬೆಳೆಸಿಕೊಂಡಿದ್ದ. ಸ್ವಲ್ಪ ದಿನಗಳ ಬಳಿಕ ಈ ಸಂಬಂಧವು ಫಕೀರನ ಪತ್ನಿಗೆ ತಿಳಿದಿದೆ. ಇದನ್ನೂ ಓದಿ: ಓದಲು ಇಷ್ಟವಿಲ್ಲವೆಂದು ಮೂವರು ನಾಪತ್ತೆ- ವಾರವಾದರೂ ಪತ್ತೆಯಾಗದ ಹೆಣ್ಣು ಮಕ್ಕಳನ್ನು ನೆನೆದು ಪೋಷಕರು ಕಣ್ಣೀರು
ಫಕೀರ್‍ನ ಪತ್ನಿಯು ಇದನ್ನು ವಿರೋಧಿಸದೇ ಅಥವಾ ಯಾವುದೇ ಅಸಮಾಧಾನವನ್ನು ವ್ಯಕ್ತಪಡಿಸದೇ ತನ್ನ ಪತಿಯೊಂದಿಗೆ ಚರ್ಚೆ ನಡೆಸಿದ್ದಾಳೆ. ನಂತರ ಅವರಿಬ್ಬರು ಮದುವೆ ಆಗಲು ಒಪ್ಪಿಗೆಯನ್ನು ಸೂಚಿಸಿದ್ದಾಳೆ.
ಮಂಗಳಮುಖಿಯರ ಸಮುದಾಯವು ಅನುಸರಿಸುವ ಪದ್ಧತಿಗಳ ಪ್ರಕಾರವೇ ಶಾಸ್ತ್ರೋಕ್ತವಾಗಿ ಫಕೀರ್ ಮತ್ತು ಸಂಗೀತಾ ಅವರ ವಿವಾಹವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಫಕೀರನ ಪತ್ನಿಯೇ ಉಪಸ್ಥಿತಳಿದ್ದು, ಕಾರ್ಯಕ್ರಮಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದಳು. ಇದನ್ನೂ ಓದಿ: ಕೇಂದ್ರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿ ಸಿದ್ದರಾಮಯ್ಯ