ಕಂದಕಕ್ಕೆ ಉರುಳಿದ ಮಿನಿಬಸ್‌ – 10 ಮಂದಿ ದುರ್ಮರಣ, 28 ಮಂದಿಗೆ ಗಾಯ

Public TV
1 Min Read
minibus accident

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪೂಂಚ್ ಜಿಲ್ಲೆಯಲ್ಲಿ ಕಿಕ್ಕಿರಿದು ತುಂಬಿದ್ದ ಮಿನಿಬಸ್‌ವೊಂದು (Minibus Accident) ಆಳವಾದ ಕಂದಕಕ್ಕೆ ಉರುಳಿ ಹತ್ತು ಜನರು ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ.

ಬಸ್ ಗಾಲಿ ಮೈದಾನದಿಂದ ಪೂಂಚ್‌ಗೆ ತೆರಳುತ್ತಿದ್ದಾಗ ಬೆಳಗ್ಗೆ 8.30ರ ಸುಮಾರಿಗೆ ಸಾವ್ಜಿಯಾನ್‌ನ ಗಡಿ ಬೆಲ್ಟ್‌ನ ಬ್ರಾರಿ ನಲ್ಲಾಹ್‌ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೇಗುಸರಾಯ್‍ನಲ್ಲಿ ಗುಂಡಿನ ದಾಳಿ – 11 ಮಂದಿಗೆ ಗಂಭೀರ ಗಾಯ, ಓರ್ವ ಸಾವು

ಸೇನೆ, ಪೊಲೀಸರು ಮತ್ತು ಸ್ಥಳೀಯ ಗ್ರಾಮಸ್ಥರು ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಿದ್ದರು. ಒಂಬತ್ತು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ 28 ಮಂದಿಯಲ್ಲಿ ಒಂಬತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಅಪಘಾತದಲ್ಲಿ ಜೀವಹಾನಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಅಪಘಾತದಲ್ಲಿ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ನೆರವು ಕಲ್ಪಿಸುವಂತೆ ಪೊಲೀಸರು ಮತ್ತು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸೈರಸ್‌ ಮಿಸ್ತ್ರಿ ಸಾವು ಪ್ರಕರಣ – ಅಪಘಾತಕ್ಕೀಡಾದ ಕಾರು ಪರಿಶೀಲಿಸಲು ಹಾಂಗ್‌ ಕಾಂಗ್‌ನಿಂದ ಬಂದ ಮರ್ಸಿಡಿಸ್ ತಜ್ಞರು

ಮಿನಿಬಸ್‌ ಅಪಘಾತದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು (draupadi murmu), ಪ್ರಧಾನಿ ಮೋದಿ (narendra modi) ಸೇರಿದಂತೆ ಅನೇಕ ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ಪರಿಹಾರ ಘೋಷಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *