ಚಿಕ್ಕೋಡಿ(ಬೆಳಗಾವಿ): ಗಂಡನ ಅನೈತಿಕ ಸಂಬಂಧ ಹಿನ್ನೆಲೆ ತವರು ಸೇರಿದ ಹೆಂಡತಿಗೆ ವಾಪಸ್ ಮನೆಗೆ ಬರ್ತಿಯೋ ಇಲ್ವೋ ಅಂತ ಕೇಳಿ ಗಂಡ (Husband) ರಿವಾಲ್ವರ್‍ನಿಂದ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ (Athani) ಪಟ್ಟಣದಲ್ಲಿ ನಡೆದಿದೆ.
ತವರು ಮನೆಗೆ ಬಂದು ಹೆಂಡತಿಯ ಮೇಲೆ ಗುಂಡು ಹಾರಿಸಿ ಕೊಲ್ಲುವುದಾಗಿ ಧಮ್ಕಿ ಹಾಕಿ ರಿವಾಲ್ವರ್‍ನಿಂದ ಫೈರಿಂಗ್ ಮಾಡಿದ ಶಿವಾನಂದ ಕಾಗಲೇ(40) ಈಗ ಅರೆಸ್ಟ್ (Arrest) ಆಗಿದ್ದಾನೆ. ಶಿವಾನಂದನ ಫೈರಿಂಗ್ ತಪ್ಪಿಸಿಕೊಂಡು ಪತ್ನಿ (Wife) ಪ್ರೀತಿ ಪ್ರಾಣ ಉಳಿಸಿಕೊಂಡಿದ್ದಾಳೆ.
ಶಿವಾನಂದ್ ಹಾಗೂ ಪ್ರೀತಿ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇದೀಗ ಶಿವಾನಂದ್ ಪರಸ್ತ್ರೀ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನೆ ಮಾಡಿ ಪ್ರೀತಿ ತವರು ಮನೆ ಸೇರಿದ್ದಳು. ಬೆಳಗಾವಿ ಜಿಲ್ಲೆಯ ಅಥಣಿಗೆ ಬಂದು ತನ್ನ ತಾಯಿಯೊಂದಿಗೆ ವಾಸವಿದ್ದಳು. ಇದನ್ನೂ ಓದಿ: ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಪತ್ನಿ ರಸ್ತೆ ಅಪಘಾತದಲ್ಲಿ ಸಾವು
ನೀನು ಮನೆಗೆ ಬರಲೇಬೇಕು ಅಂತ ಲೈಸೆನ್ಸ್ ಡ್ ರಿವಾಲ್ವಾರ್ ಜೊತೆಗೆ ಮನೆಗೆ ಬಂದಿದ್ದ ಶಿವಾನಂದ್, ಎರಡು ಬಾರಿ ಗುಂಡು ಹಾರಿಸಿ ನಾಲ್ಕು ಗುಂಡು ಬಾಕಿ ಇಟ್ಟುಕೊಂಡಿದ್ದ. ಮನೆಗೆ ಬರಲಿಲ್ಲವೆಂದರೆ ಎರಡು ಗುಂಡು ನಿನಗೆ ಹಾರಿಸಿ ಎರಡು ಗುಂಡು ನಾನು ಹಾರಿಸಿಕೊಳ್ತೀನಿ ಅಂತ ಧಮ್ಕಿ ಹಾಕಿದ್ದ. ಇಬ್ಬರೂ ಸೇರಿ ಸತ್ತು ಹೋಗೊಣ ಎಂದು ಹೆಂಡತಿಗೆ ಧಮ್ಕಿ ಹಾಕಿದ್ದ ಭೂಪನ ವಿರುದ್ಧ ಪತ್ನಿ ನೀಡಿದ್ದಾರೆ. ಇದೀಗ ಈ ದೂರಿನನ್ವಯ ಶಿವಾನಂದ್ ನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.