ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

Public TV
2 Min Read
KOHINURU DIAMOND 5

ಯಾದಗಿರಿ: ಬ್ರಿಟನ್ (Britain) ರಾಣಿ ಎಲಿಜಬೆತ್ ನಿಧನದ ನಂತರ, ಅವರು ಧರಿಸುತ್ತಿದ್ದ ಕೊಹಿನೂರು ವಜ್ರದ ಕಿರೀಟದ ಕುರಿತು ಚರ್ಚೆ ಜೋರಾಗಿದೆ. ಎಲಿಜಬೆತ್ ರಾಣಿ ಧರಿಸುತ್ತಿದ್ದ ಕಿರೀಟದಲ್ಲಿದ್ದ ವಜ್ರ, ಇದು ಭಾರರತದದ್ದು ಎನ್ನುವುದು ಮತ್ತೆ ಮುನ್ನಲೆಗೆ ಬಂದಿದೆ. ಆದರೆ ಇದು ಕೃಷ್ಣಾನದಿ ತೀರದಲ್ಲಿ ದೊರೆತ ಡೈಮೆಂಡ್ ಆಗಿದ್ದು, ಕರ್ನಾಟಕದ ಸ್ವತ್ತು ಎನ್ನಲಾಗಿದೆ.

KOHINURU DIAMOND

ಬ್ರಿಟನ್ ರಾಣಿ 2ನೇ ಎಲಿಜಬೆತ್ (Rani Elizabeth) ನಿಧನ ನಂತರ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರ (Kohinuru Diamond) ದ ಮೂಲ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಜ್ರ ಭಾರತದ್ದು, ಅದರಲ್ಲೂ ಕರ್ನಾಟಕದ ಯಾದಗಿರಿ (Yadagiri) ಯಲ್ಲಿ ಸಿಕ್ಕಿದ್ದು ಅನ್ನಲು ಕೆಲವೊಂದು ದಾಖಲೆಗಳು ಸಿಕ್ಕಿವೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಹೊರ ಭಾಗದಲ್ಲಿ ಹರಿಯುತ ಕೃಷ್ಣಾ ನದಿ (Krishna River) ತೀರದಲ್ಲಿ ಸಿಕ್ಕಿತೆನ್ನಲಾಗ್ತಿದೆ.

KOHINURU DIAMOND 2 1

ವಜ್ರ ಸಿಕ್ಕ ಸ್ಥಳವೆಂದು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದಿಂದ ನಾಮಫಲಕ ಹಾಕಲಾಗಿದೆ. ಡೈಮಂಡ್ ಸಿಕ್ಕ ಸ್ಥಳದಲ್ಲಿ ಮರಳು ಗಣಿಗಾರಿಕೆ ಕೂಡ ನಿಷೇಧ ಮಾಡಲಾಗಿದೆ. ಆದರೆ ವಜ್ರ ದೊರೆತ ಸ್ಥಳವು ಈಗ ಹಾಳುಕೊಂಪೆಯಾಗಿದೆ. ವಿಶ್ವ ಖ್ಯಾತಿ ಹೊಂದಿದ್ದ ವಜ್ರ ತರುವಲ್ಲಿ ವಿಫಲವಾಗಿರುವುದಕ್ಕೆ ಇತಿಹಾಸಕಾರ ಭಾಸ್ಕರ ರಾವ್ (Bhaskar Rao) ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

KOHINURU DIAMOND 3

1799ರಲ್ಲಿ ಬ್ರಿಟಿಷ್ ಕ್ಯಾಪ್ಟನ್ ಲಾರೆನ್ಸ್ ಪಂಜಾಬ್ (Punjab) ಗೆದ್ದ ನಂತರ ಖಜಾನೆಯಲ್ಲಿದ್ದ ವಜ್ರವು ಬ್ರಿಟಿಷ್‍ರು ದೋಚಿ ಕೊಂಡು ಹೋಗಿರುತ್ತಾರೆ. ಅದನ್ನೇ ರಾಣಿ ವಿಕ್ಟೋರಿಯಾ ಬ್ರೂಚ್‍ (Victoria Brooch) ರವರು ಕಿರೀಟದಲ್ಲಿ ಧರಿಸುತ್ತಾರೆ. ಆದರೆ ಮಹಿಳೆಯರು ಮಾತ್ರ ಕೊಹಿನೂರ್ ವಜ್ರವನ್ನ ಧರಿಸಬೇಕೆಂದು ಆದೇಶ ಮಾಡಿದ್ದ ಹಿನ್ನೆಲೆ, ನಂತರ ಬಂದ ರಾಣಿ ಎಲಿಜಬೆತ್ ಕೊಹಿನೂರು ವಜ್ರ ಕಿರೀಟ ಧರಿಸುತ್ತಾರೆ. ಇದೀಗ 2ನೇ ಎಲಿಜಬೆತ್ ನಿಧನ ನಂತರ ಕೊಹಿನೂರು ವಜ್ರದ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ.

ಈ ವಜ್ರವು ಯಾದಗಿರಿ ಜಿಲ್ಲೆಗೆ ಸೇರಿದ್ದು ಎಂದು ಸಂಸದ ಜಿ.ಸಿ.ಚಂದ್ರಶೇಖರ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ನಮ್ಮ ಸ್ವತ್ತನ್ನು ನಮ್ಮ ದೇಶಕ್ಕೆ ತರುವ ಪ್ರಯತ್ನ ಮಾಡ್ಬೇಕು ಎನ್ನಲಾಗ್ತಿದೆ. ಆದರೆ ವಿಶ್ವ ಖ್ಯಾತಿ ಹೊಂದಿದ್ದ ಡೈಮಂಡ್ ವಿಚಾರವಾಗಿ ಮತ್ತೊಂದೆಡೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಸಿಕ್ಕಿದ್ದು ಅಂತಾ ವೆಬ್‍ಸೈಟ್‍ಗಳಲ್ಲಿ ಸ್ವಲ್ಪ ಗೊಂದಲ ಸೃಷ್ಟಿಸುತ್ತಿವೆ. ಅದೇನೇ ಇರಲಿ ಕೊಹಿನೂರ್ ವಜ್ರ ಕರ್ನಾಟಕದ್ದೇ ಎನ್ನುವುಕ್ಕೆ ರಾಜ್ಯದಲ್ಲಿ ಸಾಕಷ್ಟು ಪುರಾವೆಗಳು ಇವೆ.

KOHINURU DIAMOND 2

ಒಟ್ಟಿನಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ (Narenra Modi) ಅವರು ಕೊಹಿನೂರು ವಜ್ರವನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನ ಮಾಡುತ್ತಾರಾ ಎಂಬ ಪ್ರಶ್ನೆ ಕಾಡುತ್ತಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *