ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡ್ತಿದ್ದ ಪರಿಹಾರದ ಮೊತ್ತ 50 ಲಕ್ಷ ರೂ. ಗೆ ಏರಿಕೆ: ಸಿಎಂ ಘೋಷಣೆ

Public TV
2 Min Read
BASAVARJBOMMAI

ಬೆಂಗಳೂರು: ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರದ ಮೊತ್ತ 30 ಲಕ್ಷದಿಂದ 50 ಲಕ್ಷ ರೂ. ಗೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೊಷಿಸಿದ್ದಾರೆ.

ಅರಣ್ಯ ಇಲಾಖೆ ಕಟ್ಟಡದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಅರಣ್ಯ ಇಲಾಖೆ ಸಿಬ್ಬಂದಿಗೆ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ದಿವಂಗತ ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ಸ್ಮರಿಸಿಕೊಂಡರು.

ಮನುಷ್ಯ ಪ್ರಾಣಿ ಸಂಘರ್ಷ ಕಮ್ಮಿ ಮಾಡಬೇಕಿದೆ. ಮನುಷ್ಯ ಕಾಡಲ್ಲಿ ಹೆಚ್ಚು ಇದ್ದಷ್ಟೂ ಪ್ರಾಣಿಗಳು ಹೊರಗೆ ಬರುತ್ತವೆ. ಅರಣ್ಯ ಇಲಾಖೆ ಈ ಸಂಘರ್ಷ ಕಮ್ಮಿ ಮಾಡುವತ್ತ ಗಮನ ಕೊಡಬೇಕು. ಆನೆ (Elephant) -ಮಾನವ ಸಂಘರ್ಷ ಹೆಚ್ಚಿದೆ. ಇದನ್ನು ತಡೆಯಲು ಹೊಸ ವಿಧಾನಗಳ ಅಳವಡಿಕೆ ಅಗತ್ಯ ಇದೆ. ಆನೆಗಳು ಜಮೀನಿಗೆ ಬಾರದಂತೆ ತಡೆಯಲು ಹೊಸ ವಿಧಾನಗಳ ಅಳವಡಿಕೆಗೆ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಉಮೇಶ್ ಕತ್ತಿಯವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.  ಇದನ್ನೂ ಓದಿ: ‘ಕುದುರೆ ವ್ಯಾಪಾರ’ ಆರೋಪ – ಕಾಂಗ್ರೆಸ್ ಶಾಸಕ, ಬಿಜೆಪಿ ನಾಯಕಿಯ ಹಾದಿಬೀದಿ ರಂಪಾಟ

UMESH KATTI 1

ಬಂಡೀಪುರ (Bandipura) ದಲ್ಲಿ ಕತ್ತಿಯವರು ಹೊಸ ವಿಧಾನಕ್ಕೆ ಚಾಲನೆ ಕೊಟ್ಟಿದ್ರು. ಇತ್ತೀಚಿನ ದಿನಗಳಲ್ಲಿ ಇಡೀ ಫಾರೆಸ್ಟ್ ರೇಂಜ್ ಓಡಾಡಿದ ಸಚಿವರು ಅಂದ್ರೆ ಅದು ಉಮೇಶ್ ಕತ್ತಿ. ಕತ್ತಿಯವರು ಅರಣ್ಯಾಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕ್ತಿರಲಿಲ್ಲ. ಕತ್ತಿಯವರು ಇನ್ನಷ್ಟು ವರ್ಷ ನಮ್ಮ ಜೊತೆ ಇರಬೇಕಿತ್ತು, ಜನಸೇವೆ ಮಾಡಬೇಕಿತ್ತು ಎಂದು ಸ್ಮರಿಸಿದರು.

ಈ ವರ್ಷ ಅರಣ್ಯ (Forest) ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನ ಇಲಾಖೆ ಮಾಡಿದೆ. 21% ಅರಣ್ಯವನ್ನ 30% ಗೆ ಹೆಚ್ಚಿಸೋದು ನಮ್ಮ ಗುರಿ. ಬಂಜರು ಭೂಮಿ, ಗುಡ್ಡಗಾಡುಗಳಲ್ಲಿ ಗಿಡಮರ ಬೆಳೆಸಲು ಇದೇ ವೇಳೆ ಸಿಎಂ ಮನವಿ ಮಾಡಿದರು. ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ (National Forest Martyrs Day) ಯಲ್ಲಿ ಉಮೇಶ್ ಕತ್ತಿಯವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *