ಡಬಲ್ ಸ್ಟೇರಿಂಗ್, ಡಬಲ್ ಡೋರ್ ಸರ್ಕಾರ ಆಗುತ್ತೆ – ಡಿಕೆಶಿ, ಸಿದ್ದು ಕಾಲೆಳೆದ ಸುಧಾಕರ್

Public TV
2 Min Read
KSUDHAKAR

ದೊಡ್ಡಬಳ್ಳಾಪುರ: ಡಬಲ್ ಎಂಜಿನ್ ಸರ್ಕಾರ ಬೇಕಾ? ಡಬಲ್ ಸ್ಟೇರಿಂಗ್ ಇರುವ ಸರ್ಕಾರ ಬೇಕಾ? ಡಬಲ್ ಸ್ಟೇರಿಂಗ್ ಡಬಲ್ ಡೋರ್ ಸರ್ಕಾರ ಆಗುತ್ತೆ. ಯಾರನ್ನು ಯಾವ ಬಾಗಿಲಿನಿಂದ ಇಳಿಸಬೇಕು ಎಂದು ನೋಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ ಶಿವಕುಮಾರ್ (D.K Shiva kumar) ಕುರಿತಾಗಿ ಜನಸ್ಪಂದನ ಕಾರ್ಯಕ್ರಮದಲ್ಲಿ (Janaspandana Program) ಸಚಿವ  ಕೆ. ಸುಧಾಕರ್ (K.Sudhakar) ಕಾಲೆಳೆದಿದ್ದಾರೆ.

Janaspandana Program

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡೋಕೆ ಬಂದಿದ್ದೇವೆ. ಬಿಜೆಪಿ, ಬೊಮ್ಮಾಯಿ (Basavarj Bommai) ಸರ್ಕಾರದ ಸಾಧನೆ ನಿಮ್ಮ ಮುಂದೆ ಇಡ್ತಿದ್ದೀವಿ. ನಮ್ಮ ರೈತಾಪಿ ಜನರ, ಮಕ್ಕಳ ಸಬಲೀಕರಣ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಶಿಕ್ಷಣದಿಂದ ಮಾತ್ರ ಮಕ್ಕಳ ಸಬಲೀಕರಣ ಸಾಧ್ಯ. 10 ಲಕ್ಷ ರೈತ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಆರಂಭಿಸಿದ್ದೇವೆ. ಈ ಮೂಲಕ ರೈತ ಮಕ್ಕಳ ಸಬಲೀಕರಣಕ್ಕೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನಾನು ಯಾವಾಗಲೂ ಶಕ್ತಿಧಾಮದ ಸ್ವಯಂ ಸೇವಕ: ವಿಶಾಲ್‌

ವಿದ್ಯಾನಿಧಿ, ಲಸಿಕಾ ಉತ್ಸವ ಮಾಡಿದ್ದೇವೆ. 10 ಕೋಟಿ ಗೋಶಾಲೆ ಆರಂಭಿಸಿದ್ದೇವೆ. ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಉಚಿತವಾಗಿ ನೀಡಿದ್ದೇವೆ. ಮನೆ ಇಲ್ಲದಿರುವವರಿಗೆ 3 ಕೋಟಿ ಮನೆಗಳನ್ನು ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಮೂಲಕ ನೀಡಿದ್ದೇವೆ. ಜನರ ಹಬ್ಬವೇ ಪ್ರಜಾಪ್ರಭುತ್ವ. 6.5 ಲಕ್ಷ ಕೋಟಿ ಎಫ್‍ಡಿಎ ಹೂಡಿಕೆಯಲ್ಲಿ 38% ರಾಜ್ಯಕ್ಕೆ ಬಂದಿದೆ. ಸರ್ಕಾರದ ಆಡಳಿತದ ಮೇಲೆ ವಿಶ್ವಾಸ ಇರಬೇಕಾಗುತ್ತೆ. ವಿಶ್ವಾಸ ಅರ್ಹತೆಯನ್ನು ನಮ್ಮ ಇಂದಿನ ಸರ್ಕಾರ ಹೊಂದಿದೆ. ಈ ಭಾಗದ ಜನರಿಗೆ ಸಹಕಾರವಾಗುವ ಎತ್ತಿನ ಹೊಳೆ ಪ್ರಮುಖ ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ. 2012ರಲ್ಲಿ ಡಿವಿಎಸ್ ಸಿಎಂ ಆಗಿದ್ದಾಗ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದರು. ಎತ್ತಿನ ಹೊಳೆ ಯೋಜನೆಗೆ ಬೊಮ್ಮಾಯಿ ಕೊಡುಗೆ ಅಪಾರ. ಕಾಮಗಾರಿ ವೇಗ ಕುಂಠಿತ ಆಗಿದೆ ಆದಷ್ಟು ಬೇಗ ಅನುಷ್ಠಾನ ಮಾಡುತ್ತೇವೆ. ಎಷ್ಟು ದಿನದಲ್ಲಿ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬರುವ ಕುರಿತಾಗಿ ಬಗ್ಗೆ ಸಿಎಂ ಹೇಳ್ತಾರೆ. ದೊಡ್ಡಬಳ್ಳಾಪುರ, ಹೊಸಕೋಟೆ, ಚಿಕ್ಕಬಳ್ಳಾಪುರ, ಸ್ಯಾಟಲೈಟ್ ಟೌನ್ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನನಗೆ ಜ್ವರ ಇತ್ತು: ತೆಪ್ಪದಲ್ಲಿ ಪ್ರವಾಹ ವೀಕ್ಷಣೆಗೆ ಮಹೇಶ್‌ ಸ್ಪಷ್ಟನೆ

ಕಾಂಗ್ರೆಸ್ ಕಚ್ಚಾಟ ನೋಡಿ ನನಗೆ ಹಾಡು ನೆನಪಾಗಿದೆ. ‘ಪ್ರೇಮದ ಕಾಣಿಕೆ ಬಾನಿಗೊಂದು ಎಲ್ಲೆ ಎಲ್ಲಿದೆ. ನಿನ್ನಾಸೆಗೆಲ್ಲಿ ಕೊನೆ ಇದೆ’. ಡಿಕೆಶಿ, ಸಿದ್ದರಾಮಯ್ಯ ನೆನೆದಂತೆ ಕರ್ನಾಟಕದಲ್ಲಿ ಏನೂ ಆಗದು ಎಂದು ಕಾಂಗ್ರೆಸ್‍ಗೆ ಸುಧಾಕರ್ ಕೌಂಟರ್ ಕೊಟ್ಟರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *