ನಾನು ಗಾಂಧಿವಾದಿಯಲ್ಲ, ಉಪವಾಸ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ: ಕಂಗನಾ ಮತ್ತೆ ವಿವಾದ

Public TV
1 Min Read
kangana ranaut dhaakad 1

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥವನ್ನು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್  (Kangana Ranaut) ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಂಗನಾ, ‘ನಾನು ಗಾಂಧಿವಾದಿಯಲ್ಲ, ನೇತಾವಾದಿ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಅಲ್ಲದೇ, ಕೇವಲ ಉಪವಾಸ ಸತ್ಯಾಗ್ರಹದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಪರೋಕ್ಷವಾಗಿ ಮಹಾತ್ಮ ಗಾಂಧೀಜಿ ಅವರನ್ನು ಟೀಕಿಸಿದರು. ಗಾಂಧೀಜಿ (Gandhiji) ಬಗ್ಗೆ ಕಂಗನಾ ಆಡಿದ ಈ ಮಾತು ಗಾಂಧಿವಾದಿಗಳನ್ನು ಕೆರಳಿಸಿದೆ.

kangana ranaut 2

ಮಾಧ್ಯಮಗಳ ಜೊತೆ ಮುಂದುವರೆದು ಮಾತನಾಡಿದ ಕಂಗನಾ, ‘ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ (Veer Savarkar) ಹಾಗೂ ಸುಭಾಷ್ ಚಂದ್ರ ಬೋಸ್ (Subhash Chandra Bose) ರಂತಹ ವೀರ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಇವರು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು, ಅಧಿಕಾರಕ್ಕಾಗಿ ಅಲ್ಲ ಎಂದು ಮಾತನಾಡಿದರು. 2ನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿ ದೇಶವನ್ನು ಹೀನಾಯ ಸ್ಥಿತಿಯಿಂದ ಮೇಲೆತ್ತಲು ನೇತಾಜಿ ತುಂಬಾ ಶ್ರಮ ಪಟ್ಟರು. ಅಂಥವರನ್ನು ನಾವು ನೆನೆಯಬೇಕು ಅಂದರು ಕಂಗನಾ. ಇದನ್ನೂ ಓದಿ:‘ಯಶೋದಾ’ ಟೀಸರ್ನಲ್ಲಿ ಸಮಂತಾ ಮತ್ತೊಂದು ಮುಖ ಅನಾವರಣ

Kangana Ranaut 1

ಕರ್ತವ್ಯ ಪಥ ಬದಲಾವಣೆ ಕುರಿತು ಕಂಗನಾ ಮಾತನಾಡಿ, ರಾಜಪಥ (Rajpatha) ಅಂತ ಹೆಸರು ಕೇಳಿದಾಗೆಲ್ಲ ಏನೋ ಕಸಿವಿಸಿ ಆಗೋದು. ರಾಜಪಥ ಪದವೇ ಮಾದರಿ ಆದುದಲ್ಲ. ಹಾಗಾಗಿ ಕರ್ತವ್ಯದ ಪಥ ಹೆಸರು ಇಟ್ಟಿರುವುದು ಖುಷಿಯಾಗಿದೆ ಮತ್ತು ಹೆಮ್ಮೆ ತಂದಿದೆ ಅಂದರು. ಈ ರೀತಿಯಲ್ಲಿ ನಾನು ನೇರವಾಗಿ ಮಾತನಾಡಿ, ಕೆಲವರ ಕಂಗಣ್ಣಿಗೆ ಗುರಿಯಾಗಿರುವೆ. ಸತ್ಯ ನುಡಿದಾಗ ಇದೆಲ್ಲ ಸಹಜ. ನಾನು ಸತ್ಯ ನುಡಿಯುತ್ತಲೇ ಇರುವೆ ಅಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *