ಬೆಂಗಳೂರು: ಸಿಲಿಕಾನ್ ಸಿಟಿ ಜನರ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನಿರ್ಮಾಣವಾದ ಶಿವಾನಂದ ಸರ್ಕಲ್ ಸ್ಟೀಲ್ ಸೇತುವೆ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.
ಸೇತುವೆ ಮೇಲೆ ವಾಹನ ಸಂಚಾರ ಆರಂಭವಾದ ಎರಡೇ ದಿನಕ್ಕೆ ವೈಬ್ರೇಷನ್ ಕಾರಣ ಅದನ್ನು ಬಂದ್ ಮಾಡಿತ್ತು. ಈಗ ಘನ ವಾಹನ ಓಡಾಡದಂತೆ ಫ್ಲೈಓವರ್ ಮೇಲೆ ಹೈಟ್ ಲಿಮಿಟ್ ಗ್ಯಾಂಟ್ರಿಯನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ದಂಡ ವಿಧಿಸಲು ಹೋದ ಮಾರ್ಷಲ್‌ಗಳ ಮೇಲೆ ರಿಕ್ಷಾ ಹತ್ತಿಸಿದ್ರು
ಈ ನಿರ್ಧಾರದಿಂದ ಬಸ್ಸು, ಲಾರಿ, ಟ್ರಕ್ ಓಡಾಡುವಂತೆ ಇಲ್ಲ. ಕೇವಲ ಬೈಕ್, ಕಾರು ಮಾತ್ರ ಸಂಚರಿಸಲು ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ.
ಹೊಸ ಬ್ರಿಡ್ಜ್ ಮೇಲೆ ಏಕಾಏಕಿ “ಘನ ವಾಹನಗಳ ಪ್ರವೇಶಕ್ಕೆ ನಿಷೇಧ” ಹೇರಿದರಿಂದ ಕಳಪೆ ಕಾಮಗಾರಿ ಆರೋಪ ಬಂದಿದೆ. ಜನರ ಆಕ್ರೋಶದ ಬೆನ್ನಲ್ಲೇ ಬಿಬಿಎಂಪಿ ಗುಣಮಟ್ಟ ಪರೀಕ್ಷೆಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಮೊರೆ ಹೋಗಿದೆ.