ಕೊಲೊಂಬೋ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಇದೀಗ ನಗದು ಕೊರತೆಯನ್ನು ನಿಭಾಯಿಸಲು ಅಲ್ಲಿನ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಬರೊಬ್ಬರಿ 300 ಗ್ರಾಹಕ ವಸ್ತುಗಳ ಆಮದಿನ ಮೇಲೆ ನಿಷೇಧವನ್ನು ಹೇರಿದೆ.
ಚಾಕಲೇಟ್, ಪರ್ಫ್ಯೂಮ್, ಹಾಗೂ ಶ್ಯಾಂಪೂ, ಮೆಕಪ್ ವಸ್ತು ಸೇರಿದಂತೆ 300 ಗ್ರಾಹಕ ವಸ್ತುಗಳ ಆಮದಿನ ಮೇಲೆ ನಿಷೇಧವನ್ನು ಹೇರಿದೆ ಎಂದು ಶ್ರೀಲಂಕಾ ಹಣಕಾಸು ಸಚಿವಾಲಯವು ಹೊರಡಿಸಿರುವ ವಿಶೇಷ ಅಧಿಸೂಚನೆಯಲ್ಲಿ ತಿಳಿಸಿದೆ. ಆ. 22ರ ಆಮದು ಮತ್ತು ರಫ್ತು ನಿಯಂತ್ರಣ ನಿಯಮಗಳ ಅಡಿಯಲ್ಲಿ ಗ್ರಾಹಕ ವಸ್ತುಗಳ ಮೇಲಿನ ಆಮದು ನಿಷೇಧವು ತಕ್ಷಣವೇ ಜಾರಿಗೆ ಬರಲಿದೆ. ಆದರೆ ಈ ಎಲ್ಲಾ ವಸ್ತುಗಳನ್ನು ಆ. 23ರ ಮೊದಲು ರಫ್ತು ಮಾಡಿ ಆ ವಸ್ತುವು ಸೆ. 14ರ ಮೊದಲು ದೇಶಕ್ಕೆ ಬಂದರೆ ಅವುಗಳನ್ನು ಮಾತ್ರ ಅನುಮತಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ – ನಿಮ್ಮ ನಗರಕ್ಕೆ ಯಾರು?
ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಅಲ್ಲಿನ ಜನರು ಅನೇಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೇ ವಿದೇಶಿ ವಿನಿಮಯ ಬಿಕ್ಕಟ್ಟು ತೀವ್ರವಾಗಿದ್ದು, ಅಗತ್ಯ ವಸ್ತುಗಳ ಕೊರೆತೆಯನ್ನು ಉಂಟು ಮಾಡಿದೆ. ಈ ವರ್ಷ ಆರಂಭದಿಂದ ಶ್ರೀಲಂಕಾದ ಬೀದಿ ಬೀದಿಯಲ್ಲಿ ಬೃಹತ್ ಸಾರ್ವಜನಿಕ ಪ್ರತಿಭಟನೆಗಳು ನಡೆದಿದ್ದವು. ಅಷ್ಟೇ ಅಲ್ಲದೇ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ದೇಶ ಬಿಟ್ಟು ಪಲಾಯನ ಮಾಡಿದ್ದರು. ಇದನ್ನೂ ಓದಿ: ದೇಶದ ಅತಿ ದೊಡ್ಡ ಆಸ್ಪತ್ರೆ ಉದ್ಘಾಟಿಸಿದ ಮೋದಿ