ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಟ್ಟಿದ್ದನ್ನು ಅನಿರುದ್ಧ ಮಹಿಳಾ ಅಭಿಮಾನಿಗಳ ಸಂಘ ಖಂಡಿಸಿದೆ. ಮಂಗಳವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿ ಆಯೋಜನೆ ಮಾಡಿದ್ದ ತಂಡದ ಸದಸ್ಯರು. ಬೇಕು ಅಂತಾನೇ ಅನಿರುದ್ಧ ಅವರನ್ನು ಧಾರಾವಾಹಿ ತಂಡ ಕೈ ಬಿಟ್ಟಿದೆ ಎಂದು ಆರೋಪಿಸಿದರು. ಅನಿರುದ್ಧ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳುವುದಕ್ಕೆ ಆಗದೇ ಈ ರೀತಿ ಮಾಡಲಾಗುತ್ತಿದೆ ಎನ್ನುವ ಮಾತುಗಳನ್ನೂ ಆಡಿದರು.
ಅನಿರುದ್ಧ ಮತ್ತು ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್ ಅವರ ಮಧ್ಯೆ ಮುಸುಕಿನ ಗುದ್ದಾಟ ಇರುವುದಂತೂ ನಿಜ. ಆರೂರು ಜಗದೀಶ್ ಅವರೇ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಂತೆ, ಹಲವಾರು ರೀತಿಯ ತೊಂದರೆಗಳನ್ನು ಅನಿರುದ್ಧ ಕೊಟ್ಟಿದ್ದಾರಂತೆ. ಆರೂರು ಜಗದೀಶ್ ಅವರ ಆರೋಪಕ್ಕೂ ಅನಿರುದ್ಧ ಉತ್ತರ ನೀಡಿದ್ದಾರೆ. ನಿರ್ಮಾಪಕರಿಗೆ ತೊಂದರೆ ಕೊಡುವಂತಹ ಯಾವುದೇ ಕೆಲಸ ಮಾಡಿಲ್ಲ. ಹಾಗಾಗಿ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡಿ ಎಂದು ಹೇಳಿದ್ದರು. ಇದನ್ನೂ ಓದಿ:ಬಿಗ್ ಬಾಸ್: ನಂದು ವಿರುದ್ಧ ಜಯಶ್ರೀ ಆರಾಧ್ಯ ಫುಲ್ ಗರಂ
ಮಾಧ್ಯಮಗೋಷ್ಠಿ ನಂತರ ಅನಿರುದ್ಧ ಮತ್ತು ಆರೂರು ಜಗದೀಶ್ ಸುಮ್ಮನಾಗಿದ್ದರೂ, ಮಹಿಳಾ ಅಭಿಮಾನಿಗಳು ಮಾತ್ರ ಸುಮ್ಮನಾಗಿಲ್ಲ. ಮತ್ತೆ ಅನಿರುದ್ಧ ಅವರನ್ನೇ ಧಾರಾವಾಹಿಯಲ್ಲಿ ಮುಂದುವರೆಸಿ ಎಂದು ವಾಹಿನಿಗೆ ಕೇಳಿಕೊಂಡಿದ್ದಾರೆ. ಅನಿರುದ್ಧ ಅವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ವಾಹಿನಿಯು ಗಮನಿಸಬೇಕು ಎಂದು ಮಹಿಳಾ ಅಭಿಮಾನಿಗಳು ಮಧ್ಯಮ ಗೋಷ್ಠಿಯಲ್ಲಿ ಮನವಿ ಮಾಡಿದರು.