ಪಾಕ್ ಮೇಲೆ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ – ವಾಯುಪಡೆಯ ಮೂವರು ಅಧಿಕಾರಿಗಳು ವಜಾ

Public TV
2 Min Read
02 7

ನವದೆಹಲಿ: ಪ್ರಸಕ್ತ ವರ್ಷದ ಮಾರ್ಚ್‌ 9ರಂದು ಭಾರತದ ಬ್ರಹ್ಮೋಸ್ ಕ್ಷಿಪಣಿಯನ್ನು ಪಾಕಿಸ್ತಾನದ ಮೇಲೆ ಆಕಸ್ಮಿಕವಾಗಿ ಉಡಾಯಿಸಿದ್ದ ಕಾರಣಕ್ಕಾಗಿ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳನ್ನು ವಜಾಗೊಳಿಸಿದೆ.

ಭಾರತದ ಸೂಪರ್‌ಸಾನಿಕ್ ಕ್ಷಿಪಣಿ ಆಕಸ್ಮಿಕವಾಗಿ ಪಾಕಿಸ್ತಾನದ ಭೂಪ್ರದೇಶದ ಒಳಗೆ ಹೋಗಿರುವುದನ್ನು ಭಾರತದ ರಕ್ಷಣಾ ಸಚಿವಾಲಯ ಒಪ್ಪಿಕೊಂಡಿತ್ತು. ತಾಂತ್ರಿಕ ಸಮಸ್ಯೆಯಿಂದ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆಯಾಗಿದ್ದು, ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು. ಜತೆಗೆ ಈ ಘಟನೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ಕೋರ್ಟ್‌ ತನಿಖೆಗೆ ಆದೇಶಿತ್ತು. ಇದನ್ನೂ ಓದಿ: ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

Air Force

ಅದರಂತೆ ತನಿಖೆ ನಡೆಸಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌, ವಿಂಗ್‌ ಕಮಾಂಡರ್‌ ಹಾಗೂ ಸ್ಕ್ವಾಡ್ರನ್‌ ಲೀಡರ್‌ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ.

ಪಾಕಿಸ್ತಾನದ ಪ್ರಕಾರ, ಕ್ಷಿಪಣಿಯು ಅಲ್ಲಿನ ವಾಯು ವಲಯದಲ್ಲಿ 100 ಕಿಲೋ ಮೀಟರ್‌ಗೂ ಹೆಚ್ಚು ದೂರ, ಒಳಭಾಗಕ್ಕೆ ಸುಮಾರು 40,000 ಅಡಿಗಳಷ್ಟು ಎತ್ತರದಿಂದ ಅಪ್ಪಳಿಸಿತ್ತು. ಭಾರತದ ಬ್ರಹ್ಮೋಸ್ ಕ್ಷಿಪಣಿಯು ಶಬ್ದದ ಮೂರು ಪಟ್ಟು ವೇಗದಲ್ಲಿ ಹಾರಿತ್ತು. ಕ್ಷಿಪಣಿಯಲ್ಲಿ ಯಾವುದೇ ಸಿಡಿತಲೆ ಇರಲಿಲ್ಲ, ಆದ್ದರಿಂದ ಅದು ಸ್ಫೋಟಿಸಲಿಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ಆಗ್ರಹಿಸಿತ್ತು. ಇದನ್ನೂ ಓದಿ: ಗೋವು ಕಳ್ಳಸಾಗಣೆ ಪ್ರಕರಣ – ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡಿ, ಇಲ್ಲವೇ..: ನ್ಯಾಯಾಧೀಶರಿಗೆ ಬೆದರಿಕೆ ಪತ್ರ

FotoJet 74

ಭಾರತ ಮತ್ತು ಪಾಕಿಸ್ತಾನ ನಡುವೆ 2005ರಲ್ಲಿ ನಡೆದ ಒಪ್ಪಂದದ ಪ್ರಕಾರ, ಭೂಮಿಯ ಮೇಲ್ಮೈ ಮೇಲ್ಲೈನಿಂದ ಅಥವಾ ಸಮುದ್ರ ಉಡಾವಣಾ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ನಡೆಸುವುದಿದ್ದರೆ, ಕನಿಷ್ಠ ಮೂರು ದಿನಗಳ ಮುಂಚೆ ಇನ್ನೊಂದು ದೇಶಕ್ಕೆ ಅದರ ಮಾಹಿತಿ ನೀಡಬೇಕು. ಈ ಬಗ್ಗೆ ಖಂಡಾಂತರ ಕ್ಷಿಪಣಿ ಪರೀಕ್ಷೆಗಳ ಹಾರಾಟದ ಪೂರ್ವ ಅಧಿಸೂಚನೆ ಮಾಡಿಕೊಳ್ಳಲಾಗಿತ್ತು. ಜತೆಗೆ ಉಡಾವಣಾ ಸ್ಥಳಗಳು ಎರಡೂ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿ ಅಥವಾ ಎಲ್‌ಒಸಿಯ 40 ಕಿಮೀ ಒಳಗೆ ಇರಬಾರದು ಹಾಗೂ ಅದರ ಪರಿಣಾಮ ಉಂಟಾಗುವ ವಲಯವು 75 ಕಿಮೀ ಒಳಗೆ ಇರಬಾರದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *