ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಾವರ್ಕರ್ ಪಾರ್ಕ್ ನಿರ್ಮಾಣ – ಸ್ವಾತಂತ್ರ್ಯ ಸೇನಾನಿ ಎಂದು ಒಪ್ಪಿದ್ದ ಕಾಂಗ್ರೆಸ್ಸಿಗರು

Public TV
2 Min Read
Veer Savarkar Park

ತುಮಕೂರು: ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಪ್ರಭಲವಾಗಿ ವಿರೋಧಿಸುವ ಕಾಂಗ್ರೆಸ್ಸಿಗರೇ ತುಮಕೂರಿನ ಪಾರ್ಕ್ ಒಂದಕ್ಕೆ ವೀರ ಸಾವರ್ಕರ್ ಪಾರ್ಕ್ ಎಂದು ನಾಮಕರಣ ಮಾಡಿ ಗೌರವಿಸಿದ ವಿಚಾರ ಈಗ ಮತ್ತೊಮ್ಮೆ ಬಹಿರಂಗಗೊಂಡಿದೆ. ಬಿ.ಎಚ್.ರಸ್ತೆಗೆ ಹೊಂದಿಕೊಂಡಂತೆ ಎಸ್.ಎಸ್ ಪುರಂನಲ್ಲಿ ಇರುವ ಪಾರ್ಕ್‍ಗೆ ಸ್ವಾತಂತ್ರ್ಯ ಸೇನಾನಿ ವೀರ ಶ್ರೀವಿ.ದಾ.ಸಾವರ್ಕರ್ ಎಂದು ನಾಮಕರಣ ಮಾಡಿದ್ದರು.

Veer Savarkar Park 2

ವಿನಾಯಕ ದಾಮೋದರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರು ಬ್ರಿಟೀಷರ ಬಳಿ ಕ್ಷಮಾಪಣೆ ಕೇಳಿದ ಹೇಡಿ ಎಂದು ದೂಷಿಸುವ ಕಾಂಗ್ರೆಸ್ಸಿನ ಇಬ್ಬಗೆಯ ನೀತಿ ಈಗ ಬಟಾಬಯಲಾಗಿದೆ. ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಮುಜುಗರತಂದಿದೆ. ಯಾಕೆಂದರೆ ಸಿದ್ದರಾಮಯ್ಯ ಸಿಎಂ ಇದ್ದಾಗಲೇ ತುಮಕೂರಿನಲ್ಲಿ ವೀರ ಸಾವರ್ಕರ್ ಪಾರ್ಕ್ ಉದ್ಘಾಟನೆಯಾಗಿದೆ. ಹಾಗಂತ ಇದು ಬಿಜೆಪಿಯವರು ಮಾಡಿದ್ದಲ್ಲ. ಕಾಂಗ್ರೆಸ್‍ನವರು ಸಾವರ್ಕರ್‌ರನ್ನು ಮೆಚ್ಚಿ ಒಪ್ಪಿ ಮಾಡಿದ್ದು. ವಾರ್ಡ್ ನಂಬರ್ 15ರ ಎಸ್.ಎಸ್.ಪುರಂನ ಪಾರ್ಕ್‍ಗೆ ಸ್ವಾತಂತ್ರ ವೀರ ವಿ.ದಾ.ಸಾವರ್ಕರ್ ಎಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ನಾಮಕರಣ ಮಾಡಲಾಗಿದೆ. ಆಗ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರ ಇತ್ತು. ಕಾಂಗ್ರೆಸ್‍ನ 15 ಸದಸ್ಯರು, ಜೆಡಿಎಸ್ 12 ಸದಸ್ಯರು ಮತ್ತು ಬಿಜೆಪಿಯ ಕೇವಲ 8 ಜನ ಸದಸ್ಯರು ಮಾತ್ರ ಇದ್ದರು. ಆದರೂ ಸರ್ವಾನುಮತದ ಒಪ್ಪಿಗೆಯಿಂದ ಅನುಮೋದನೆ ಪಡೆಯಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯಗೆ ಡಿಕೆಶಿಯವರೇ ಮೊಟ್ಟೆ ಹೊಡೆಸಿರಬೇಕು: ಕಟೀಲ್

Veer Savarkar Park 1

ಪಾರ್ಕ್ ಅಭಿವೃದ್ಧಿಗೆ ಸುಮಾರು ಒಂದು ಕೋಟಿ ರೂ. ಅನುದಾನವನ್ನು ಕಾಂಗ್ರೆಸ್ ಆಡಳಿತದ ಪಾಲಿಕೆ ಬಿಡುಗಡೆ ಮಾಡಿತ್ತು. ಅಲ್ಲದೇ 2016 ಸೆಪ್ಟೆಂಬರ್ 06 ರಂದು ಈ ಪಾರ್ಕನ್ನು ಅಂದಿನ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್, ಸಂಸದ ಮುದ್ದಹನುಮೇಗೌಡ, ಅಂದಿನ ನಗರ ಶಾಸಕ ರಫೀಕ್ ಅಹಮದ್, ಕಾಂಗ್ರೆಸ್ ಮೇಯರ್ ಯಶೋಧಾ ಶ್ರೀನಿವಾಸ್ ಜೊತೆಯಾಗಿ ಉದ್ಘಾಟನೆ ಮಾಡಿದ್ದರು. ಮುಸ್ಲಿಂ ಏರಿಯಾದಲ್ಲಿ ಯಾಕೆ ಸಾವರ್ಕರ್ ಫೋಟೋ ಹಾಕಿದ್ರಿ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಿರುವ ಸಂದರ್ಭದಲ್ಲಿ ಅದೇ ಮುಸ್ಲಿಂ ನಾಯಕರು ಮುಂದೆ ನಿಂತು ಸಾವರ್ಕರ್‌ರನ್ನು ಸ್ವಾತಂತ್ರ್ಯ ಸೇನಾನಿ ಎಂದು ಕೊಂಡಾಡಿದ್ದು ಈಗ ಮತ್ತೇ ಮುನ್ನೆಲೆಗೆ ಬಂದಿದೆ. ತುಮಕೂರು ನಗರದಲ್ಲಿ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿ ವಿಕೃತಿ ಮೆರೆದ ಪ್ರಕರಣವೂ ನಡೆದಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಸಾವರ್ಕರ್‌ರನ್ನು ಅವಮಾನಿಸಿದೆ ಎಂದು ಬಿಜೆಪಿ ಶಾಸಕ ಜ್ಯೋತಿಗಣೇಶ್ ದೂರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹತ್ಯೆಗೆ ಯತ್ನಿಸಿದ್ದು ಸತ್ಯ; ನಾನೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ – ಎಂ.ಲಕ್ಷ್ಮಣ್‌

ಸಾವರ್ಕರನ್ನು ತೆಗಳುವ ಕಾಂಗ್ರೆಸ್‍ನ ಇಬ್ಬಗೆಯ ನೀತಿ ಪಾರ್ಕ್‌ನಿಂದ ಬಯಲಾಗಿದೆ. ತಾವೇ ಸೃಷ್ಟಿಸಿದ್ದ ವಿವಾದಕ್ಕೆ ತಾವೇ ದಂಡಕಟ್ಟಬೇಕಾದ ಪರಿಸ್ಥಿತಿಗೆ ಕಾಂಗ್ರೆಸ್ ಬಂದು ನಿಂತಿದೆ. ಈ ವಿಚಾರ ಸಿದ್ದರಾಮಯ್ಯರಿಗೆ ಮುಜುಗರ ಉಂಟುಮಾಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *