ಹರಾರೆ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಜಿಂಬಾಬ್ವೆ ಸರಣಿಯಲ್ಲಿ ಆಡದಿದ್ದರೂ ಅವರ ಹೆಸರು ಮಾತ್ರ ಹರಾರೆ ಮೈದಾನದಲ್ಲಿ ರಾರಾಜಿಸುತ್ತಿದ್ದೆ. ಕೊಹ್ಲಿ ಅಭಿಮಾನಿಗಳು ಮಾತ್ರ ಕೊಹ್ಲಿ ಪೋಸ್ಟರ್ ಹಿಡಿದುಕೊಂಡು ಮೈದಾನದಲ್ಲಿ ಕೊಹ್ಲಿಯನ್ನು ಸ್ಮರಿಸಿಕೊಂಡಿದ್ದಾರೆ.
ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ 2ನೇ ಏಕದಿನ ಪಂದ್ಯ ಹರಾರೆ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯ ವೀಕ್ಷಿಸಲು ಮೈದಾನಕ್ಕೆ ಆಗಮಿಸಿರುವ ಪ್ರೇಕ್ಷಕರ ಪೈಕಿ ಒಬ್ಬಾತ ಕೊಹ್ಲಿ ಬ್ಯಾಟಿಂಗ್‍ನಲ್ಲಿ ಫಾರ್ಮ್ ಕಳೆದುಕೊಂಡಿರಬಹುದು ನನ್ನ ಹೃದಯದಲ್ಲಿ ಅಲ್ಲ. ನಾವು ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡು ಪೋಸ್ಟರ್ ಹಿಡಿದು ಮೈದಾನದಲ್ಲಿ ಕಾಣಿಸಿಕೊಂಡಿದ್ದಾನೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ
Cricket fans in Zimbabwe is missing Virat Kohli. pic.twitter.com/p4dojemxh5
— Johns. (@CricCrazyJohns) August 20, 2022
ಕೊಹ್ಲಿ ಬ್ಯಾಟಿಂಗ್‍ನಲ್ಲಿ ರನ್ ಬರ ಅನುಭವಿಸುತ್ತಿದ್ದು, ಈಗಾಗಲೇ ವೆಸ್ಟ್ ಇಂಡೀಸ್, ಜಿಂಬಾಬ್ವೆ ಸರಣಿಯಿಂದ ವಿಶ್ರಾಂತಿ ಪಡೆದು ಹೊರಗುಳಿದಿದ್ದಾರೆ. ಹಾಗಾಗಿ ಜಿಂಬಾಬ್ವೆ ಪ್ರವಾಸದ ವೇಳೆ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇದನ್ನೂ ಓದಿ: ಹರಾರೆಯಲ್ಲಿ ನೀರಿಗೆ ಹಾಹಾಕಾರ – ಮಿತವಾಗಿ ಬಳಸಿ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಸೂಚನೆ
ಕೊಹ್ಲಿ ಮುಂದಿನ ಏಷ್ಯಾಕಪ್‍ಗಾಗಿ ಸಿದ್ಧತೆ ನಡೆಸುತ್ತಿದ್ದು, ನಿರೀಕ್ಷೆಯಂತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮತ್ತೆ ಕಂಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ. ಏಷ್ಯಾಕಪ್ ಆಗಸ್ಟ್ 27 ರಿಂದ ಆರಂಭವಾಗುತ್ತಿದ್ದು, ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ.
Live Tv
[brid partner=56869869 player=32851 video=960834 autoplay=true]