ಪುನೀತ್ ರಾಜ್ ಕುಮಾರ್ ನಟನೆಯ ಪವರ್ ಸೇರಿದಂತೆ ನಾನಾ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ತ್ರಿಷಾ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ತಮಿಳು ನಾಡಿನಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೆಸರಾಂತ ಈ ನಟಿಯ ನಡೆಯ ಬಗ್ಗೆ ಚರ್ಚೆ ಕೂಡ ಶುರುವಾಗಿದೆ. ಮುಂದಿನ ದಿನಗಳಲ್ಲಿ ತ್ರಿಷಾ ರಾಜಕಾರಣಕ್ಕೆ ಬರಲು ಒಲವು ತೋರಿದ್ದು, ಶೀಘ್ರದಲ್ಲೇ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ.
ತಮಿಳು ಸಿನಿಮಾ ರಂಗದ ನಟ ನಟಿಯರು ಸಿನಿಮಾ ರಂಗಕ್ಕೆ ಬರುವುದು ಹೊಸದೇನೂ ಅಲ್ಲ. ತಮಿಳು ನಾಡಿನಲ್ಲಿ ಅತೀ ಹೆಚ್ಚು ಬಾರಿ ಮುಖ್ಯಮಂತ್ರಿಗಳು ಆಗಿದ್ದು ಸಿನಿಮಾ ರಂಗದವರೇ ಎನ್ನುವುದು ಇತಿಹಾಸ. ಹಾಗಾಗಿ ತ್ರಿಷಾ ಅವರ ನಡೆ ಅಚ್ಚರಿಗೂ ಕಾರಣವಾಗಿದೆ. ಈಗಾಗಲೇ ಅವರು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ್ದು, ಮುಂದಿನ ಚುನಾವಣೆಯಲ್ಲಿ ಇದೇ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು
ತಮಿಳು ನಾಡಿನಲ್ಲಿ ಡಿಎಂಕೆ, ಅಣ್ಣಾಡಿಎಂಕೆ ಅಂತ ಪ್ರಬಲ ಪಕ್ಷಗಳು ಇದ್ದರೂ, ಇದೇ ಪಕ್ಷದ ಮೂಲಕ ಜಯಲಲಿತಾ ಸೇರಿದಂತೆ ಹಲವು ಸಿನಿಮಾ ನಟ ನಟಿಯರು ಗುರುತಿಸಿಕೊಂಡಿದ್ದರೂ, ತ್ರಿಷಾ ಮಾತ್ರ ನ್ಯಾಷನಲ್ ಪಾರ್ಟಿ ಸೇರುತ್ತಿರುವ ಮೂಲಕ ವಿಭಿನ್ನ ಹಾದಿ ಕಂಡುಕೊಂಡಿದ್ದಾರೆ. ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ಕಾರಣವನ್ನು ಅವರೇ ಮುಂದಿನ ದಿನಗಳಲ್ಲಿ ಹೇಳಲಿದ್ದಾರೆ.