ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 78ನೇ ಹುಟ್ಟು ಹಬ್ಬದ ಹಿನ್ನೆಲೆ ಅವರ ಮಕ್ಕಳಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ರಾಜೀವ್ ಗಾಂಧಿ ಅವರ ಸಮಾಧಿ ಬಳಿ ತೆರಳಿ ಗೌರವವನ್ನು ಅರ್ಪಿಸಿದರು.
ಈ ವೇಳೆ ತಮ್ಮ ತಂದೆಯನ್ನು ನೆನೆದ ರಾಹುಲ್ ಗಾಂಧಿ, ಟ್ವಿಟ್ಟರ್‌ನಲ್ಲಿ ರಾಜೀವ್ ಗಾಂಧಿಯವರ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ರಾಹುಲ್, ಅಪ್ಪಾ, ನೀವು ಯಾವಾಗಲೂ ನನ್ನ ಜೊತೆ, ನನ್ನ ಹೃದಯದಲ್ಲಿದ್ದೀರಿ. ನೀವು ಈ ದೇಶಕ್ಕೆ ಕಂಡ ಕನಸನ್ನು ಪೂರೈಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದಿದ್ದಾರೆ.
पापा, आप हर पल मेरे साथ, मेरे दिल में हैं। मैं हमेशा प्रयास करूंगा कि देश के लिए जो सपना आपने देखा, उसे पूरा कर सकूं। pic.twitter.com/578m1vY2tT
— Rahul Gandhi (@RahulGandhi) August 20, 2022
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದಂದು ಗೌರವ ಅರ್ಪಿಸಿದರು. ನಮ್ಮ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಜನ್ಮದಿನದಂದು ಅವರಿಗೆ ನಮನಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮೋದಿ, ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಅವಹೇಳನಕಾರಿ ಪೋಸ್ಟ್ – ಕಾನ್‍ಸ್ಟೇಬಲ್ ಅಮಾನತು
ರಾಜೀವ್ ಗಾಂಧಿ ಅವರು ಭಾರತದ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದು, 1984-89ರ ಅವಧಿಯಲ್ಲಿ ಅಧಿಕಾರದಲ್ಲಿದ್ದರು. 1991ರಲ್ಲಿ ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್‌ನಿಂದ ಹತ್ಯೆಗೀಡಾದರು. ಇದನ್ನೂ ಓದಿ: ಮತ್ತೆ ಕಾಂಗ್ರೆಸ್‍ಗೆ ಶುರುವಾಯ್ತಾ ಯಡಿಯೂರಪ್ಪ ಫೀವರ್..?