ಮಾಸ್ಕೋ: ಕೋವಿಡ್ -19 ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಹೊರಹೊಮ್ಮಿದ ದೇಶದ ಜನಸಂಖ್ಯಾ ಬಿಕ್ಕಟ್ಟನ್ನು ಸರಿದೂಗಿಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸ ಪ್ಲಾನ್ ಹುಡುಕಿಕೊಂಡಿದ್ದಾರೆ.
ಹೌದು. 10 ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಲು ಮಹಿಳೆಯರಿಗೆ ಪುಟಿನ್ ಹಣವನ್ನು ನೀಡುತ್ತಿದ್ದಾರೆ. 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದರೆ ಅಂತಹ ಮಹಿಳೆಗೆ 13,500 ಡಾಲರ್ (12,92,861 ರೂ.) ನೀಡುವ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ.
ಸಾಂಕ್ರಾಮಿಕ ರೋಗ ಹಾಗೂ ಯುದ್ಧದ ಪರಿಣಾಮ ರಷ್ಯಾದಲ್ಲಿ ಜನಸಂಖ್ಯೆ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಪುಟಿನ್, ‘ಮದರ್ ಹೀರೋಯಿನ್’ ಎಂಬ ಯೋಜನೆಯಡಿ ಈ ಗಿಫ್ಟ್ ಮಹಿಳೆಯರಿಗೆ ನೀಡುವ ಕುರಿತು ಘೋಷಣೆ ಮಾಡಿದ್ದಾರೆ ಎಂದು ರಷ್ಯಾದ ರಾಜಕೀಯ ಮತ್ತು ಭದ್ರತಾ ತಜ್ಞ ಡಾ. ಜೆನ್ನಿ ಮಾಥರ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ರರಂಗದಲ್ಲಿ ಬೆಳೆಯಬೇಕು, ಇಷ್ಟು ಬೇಗ ನಾನು ಮದುವೆ ಆಗಲ್ಲ: ಸೋನು ಶ್ರೀನಿವಾಸ್ ಗೌಡ
2022ರ ಮಾರ್ಚ್ ನಿಂದ ರಷ್ಯಾದಲ್ಲಿ ಪ್ರತಿ ದಿನ ಹಲವು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಅಲ್ಲದೆ ಉಕ್ರೇನ್-ರಷ್ಯಾ ನಡುವಿನ ಯುದ್ಧದಿಂದ ಸುಮಾರು 50 ಸಾವಿರ ಸೈನಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚು ಸದಸ್ಯರನ್ನು ಒಳಗೊಂಡ ಕುಟುಂಬಗಳನ್ನು ಹೊಂದಿರುವರು ಹೆಚ್ಚು ದೇಶಭಕ್ತರಾಗುತ್ತಾರೆ ಎಂದು ಪುಟಿನ್ ಹೇಳುತ್ತಿದ್ದಾರೆ ಎಂದು ಡಾ ಮ್ಯಾಥರ್ಸ್ ಹೇಳಿದರು.
ಒಟ್ಟಿನಲ್ಲಿ ಪುಟಿನ್ ಅವರ ಈ ಸ್ಕೀಮ್, ನಿಸ್ಸಂಶಯವಾಗಿ ರಷ್ಯಾದ ಮಹಿಳೆಯರನ್ನು ಪ್ರೋತ್ಸಾಹಿಸಲು ಅಥವಾ ಅವರನ್ನು ಪ್ರೇರೇಪಿಸುವ ಪ್ರಯತ್ನವಾಗಿದೆ. ಆದರೆ ಇಲ್ಲಿನ ಗಮನಿಸಬೇಕಾದ ವಿಚಾರವೆಂದರೆ ಪುಟಿನ್ ನೀಡುವ ಹಣದಲ್ಲಿ 10 ಮಕ್ಕಳನ್ನು ಸಾಕಲು ಸಾಧ್ಯವೇ? ಈಗಾಗಲೇ ರಷ್ಯಾದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿದ್ದು, ಇವುಗಳ ನಡುವೆ ಮಕ್ಕಳನ್ನು ಬೆಳೆಸುವುದು ಹೇಗೆ ಎಂಬ ಪ್ರಶ್ನೆ ಕಾಡಿದೆ ಅವರು ಹೇಳಿದರು.