ಬಿಹಾರದ ಮಾಜಿ ಸಚಿವ ಸುಭಾಷ್ ಸಿಂಗ್ ವಿಧಿವಶ

Public TV
1 Min Read
Subhash Singh

ಪಾಟ್ನಾ: ಬಿಹಾರದ ಮಾಜಿ ಸಚಿವ ಸುಭಾಷ್ ಸಿಂಗ್(59) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಈ ಹಿಂದೆ ಸುಭಾಷ್ ಸಿಂಗ್ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.  ಇದನ್ನೂ ಓದಿ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

Subhash Singh 1

ನಿತೀಶ್ ಕುಮಾರ್ ನೇತೃತ್ವದ ಹಿಂದಿನ ಎನ್‍ಡಿಎ ಸರ್ಕಾರದಲ್ಲಿ ಸುಭಾಷ್ ಸಿಂಗ್ ಅವರು ಸಹಕಾರಿ ಸಚಿವರಾಗಿದ್ದರು. ಗೋಪಾಲ್‍ಗಂಜ್‍ನಿಂದ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿರುವ ಸುಭಾಷ್ ಸಿಂಗ್ ಇದೀಗ ಪತ್ನಿ, ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

ಆಗಸ್ಟ್ 16ರ ಮಂಗಳವಾರ ಬೆಳಗ್ಗೆ 11:30ಕ್ಕೆ ನಿತೀಶ್-ತೇಜಸ್ವಿ ಸರ್ಕಾರದ ಸಂಪುಟ ವಿಸ್ತರಣೆ ನಡೆಯುವ ಮುನ್ನವೇ ಸುಭಾಷ್ ಸಿಂಗ್ ಕೊನೆಯುಸಿರೆಳೆದಿರುವ ಸುದ್ದಿ ತಿಳಿದು ಬಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *