Bigg Boss: ಮೂಡ್ ಇಲ್ಲ ಅಂದ್ರೆ ಮೂರು ದಿನ ಸ್ನಾನ ಮಾಡಲ್ಲ: ಸೋನು ಶ್ರೀನಿವಾಸ್ ಗೌಡ

Public TV
1 Min Read
sonu srinivas gowda 3

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರ ಎಂಟ್ರಿಯಿಂದ ದೊಡ್ಮನೆಯ ರಂಗು ಜೋರಾಗಿದೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಸೋನು ಶಾಕಿಂಗ್ ವಿಚಾರವೊಂದು ರಿವೀಲ್ ಮಾಡಿದ್ದಾರೆ. ಮೂಡ್ ಇಲ್ಲಾಂದ್ರೆ ಮೂರು ದಿನ ಆದ್ರೂ ಸ್ನಾನ ಮಾಡಲ್ಲ ಅಂತಾ ಕಿಚ್ಚನ ಮುಂದೆ ಸೋನು ಹೇಳಿದ್ದಾರೆ.

sonu gowda 4ಬಿಗ್ ಬಾಸ್ ಓಟಿಟಿ ಸೀಸನ್ 1 ಶುರುವಾಗಿ ಒಂದು ವಾರ ಕಳೆದಿದೆ. ಮೊದಲ ವಾರಕ್ಕೆ ಕಿರಣ್ ಯೋಗೇಶ್ವರ್ ಮನೆಯಿಂದ ಹೊರನಡೆದಿದ್ದಾರೆ. ಈಗ ವಾರದ ಕಥೆ ಕಿಚ್ಚನ ಜತೆಯ ಪಂಚಾಯಿತಿಯಲ್ಲಿ ಸುದೀಪ್ ಜತೆ ಸೋನು ಮಾತನಾಡಿರುವ ಮಾತು ಸಖತ್ ವೈರಲ್ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸೋನು ಸ್ನಾನ ಮ್ಯಾಟರ್ ಈಗ ಎಲ್ಲರ ನಗುವಿಗೆ ಕಾರಣವಾಗಿದೆ.

sonu gowda 2

ಈ ವೇಳೆ ಸೋನು ಗೌಡ ಸ್ನಾನ ಮಾಡುವುದಿಲ್ಲ ಎಂದು ಸಾನ್ಯಾ ಅಯ್ಯರ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ನಾನು ಇವತ್ತು ಸ್ನಾನ ಮಾಡಿಲ್ಲ ಎಂದು ಸುದೀಪ್ ಎದುರು ಸೋನು ಗೌಡ ಒಪ್ಪಿಕೊಂಡರು. ಇಲ್ಲಿ ಎಷ್ಟೋ ಜನರು ಸ್ನಾನದ ವಿಚಾರದಲ್ಲಿ ಡ್ರಾಮಾ ಮಾಡುತ್ತಾರೆ. ಎಲ್ಲರೂ ಪ್ರತಿ ದಿನ ಸ್ನಾನ ಮಾಡ್ತಾರೆ. ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಮೂಡ್ ಇಲ್ಲ ಅಂದರೆ ಮೂರು ದಿನಕ್ಕೊಮ್ಮೆ ಸ್ನಾನ ಮಾಡ್ತೀನಿ ಎಂದು ಸೋನು ಹೇಳಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

big boss ott 4ಸೋನು ಅವರ ಬಿಗ್ ಬಾಸ್ ಎಂಟ್ರಿಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ವೇದಿಕೆಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ವಾರವೇ ಅವರು ಎಲಿಮಿನೇಟ್ ಆಗಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಸಾಕಷ್ಟು ವೋಟ್ ಬಂದಿರುವ ಕಾರಣ ಸೋನು ಸೇಫ್ ಆಗಿದ್ದಾರೆ. ಸದ್ಯ ತಮ್ಮ ಸ್ನಾನದ ವಿಚಾರವಾಗಿ ಸೋನು ಶ್ರೀನಿವಾಸ್ ಗೌಡ ಟ್ರೋಲ್ ಆಗ್ತಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *