ಉಗ್ರ ಬಿಟ್ಟಾ ಕರಾಟೆಯ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರರು ವಜಾ

Public TV
3 Min Read
bitta karate wife

ಶ್ರೀನಗರ: ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಬಿಟ್ಟಾ ಕರಾಟೆಯ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಸೇವೆಯಿಂದಲೇ ವಜಾಗೊಳಿಸಿದೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ನಿರ್ದೇಶನದ ಮೇರೆಗೆ ಶನಿವಾರ ನಾಲ್ವರು ಸರ್ಕಾರಿ ನೌಕರರನ್ನು ವಜಾಗೊಳಿಸಿದೆ. ಭಯೋತ್ಪಾದಕರ ಸಂಪರ್ಕವನ್ನು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಿಟ್ಟಾ ಕರಾಟೆಯ ಪತ್ನಿ, ಹಿಜ್ಬುಲ್ ಮುಜಾಹಿದ್ದೀನ್‌ನ ಸೈಯದ್ ಸಲಾವುದ್ದೀನ್ ಪುತ್ರ ಸೇರಿದಂತೆ ನಾಲ್ವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇನ್ನಿಬ್ಬರು ಮಾಜಿ ಎಲ್‌ಇಟಿ ಭಯೋತ್ಪಾದಕ ಮತ್ತು ಕಾಶ್ಮೀರ ವಿಶ್ವವಿದ್ಯಾಲಯದ ವಿಜ್ಞಾನಿಯಾಗಿದ್ದ ಸಹಾಯಕ ಪ್ರಾಧ್ಯಾಪಕರು ಸೇರಿದ್ದಾರೆ. ಈ ಎಲ್ಲಾ ಸರ್ಕಾರಿ ನೌಕರರು ರಾಜ್ಯದ ಹಿತಾಸಕ್ತಿಗಳಿಗೆ ಹಾನಿ ಉಂಟಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

manoj sinha 1

ಡಾ. ಮುಹೀತ್ ಅಹ್ಮದ್ ಭಟ್- ಕಾಶ್ಮೀರ ವಿವಿಯ ಕಂಪ್ಯೂಟರ್ ಸೈನ್ಸ್‌ನ ಸ್ನಾತಕೋತ್ತರ ವಿಭಾಗದಲ್ಲಿ ವಿಜ್ಞಾನಿ ಆಗಿದ್ದಾನೆ. ಈತ ಪಾಕಿಸ್ತಾನ ಹಾಗೂ ಅದರ ಕೆಲ ಕಾರ್ಯಗಳನ್ನು ಮುಂದಕ್ಕೆ ತರಲು ವಿದ್ಯಾರ್ಥಿಗಳನ್ನು ಆಮೂಲಾಗ್ರಗೊಳಿಸುವ ಮೂಲಕ ಕಾಶ್ಮೀರಿ ವಿವಿಯಲ್ಲಿ ಪ್ರತ್ಯೇಕವಾದು ಭಯೋತ್ಪಾದಕ ಅಜೆಂಡಾವನ್ನು ಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಅರೆಸ್ಟ್ ಮಾಡೋ ಭಯ – ಅಗ್ನಿಪಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಆತ್ಮಹತ್ಯೆ

ಮಾಜಿದ್ ಹುಸೇನ್ ಖಾದ್ರಿ- ಜಮ್ಮು ಕಾಶ್ಮೀರ ವಿಶ್ವ ವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಹಿರಿಯ ಸಹಾಯಕ ಪ್ರೊಫೆಸರ್ ಆಗಿರುವ ಈತ ಎಲ್‌ಇಟಿ ಸೇರಿದಂತೆ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸುದೀರ್ಘ ಸಂಬಂಧವನ್ನು ಹೊಂದಿದ್ದಾನೆ. ಈ ಹಿಂದೆಯೂ ಸಹ ಈತನ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.

ಸೈಯದ್ ಅಬ್ದುಲ್ ಮುಯೀದ್- ಜೆಕೆಇಡಿಐನ ಐಟಿ ಮ್ಯಾನೇಜರ್ ಆಗಿದ್ದಾನೆ. 3 ಭಯೋತ್ಪಾದಕ ದಾಳಿಗಳಲ್ಲಿ ಈತನ ಪಾತ್ರವಿದೆ ಎಂಬುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಈತನಿಂದಾಗಿ ಸಂಸ್ಥೆಯಲ್ಲಿ ಪ್ರತ್ಯೇಕತಾವಾದಿ ಕೂಗುಗಳು ಹೆಚ್ಚಾಗಿವೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಬೆಳಕು ಇಂಪ್ಯಾಕ್ಟ್‌ – ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ನಾರಾಯಣಸ್ವಾಮಿ

ಅಸ್ಸಾಬಾ ಉಲ್ ಅರ್ಜಮಂಡ್ ಖಾನ್- ಈಕೆ ಕಾಶ್ಮೀರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಈಕೆ ಪಾಸ್‌ಪೋರ್ಟ್‌ಗಾಗಿ ತಪ್ಪು ಮಾಹಿತಿಯನ್ನು ಒದಗಿಸುವಲ್ಲಿ ತೊಡಗಿರುವುದು ಕಂಡುಬಂದಿದೆ. ಈಕೆ ಅನೇಕ ವಿದೇಶಿ ಉಗ್ರರೊಂದಿಗೆ ಸಂಪರ್ಕವನ್ನು ಹೊಂದಿರುವುದು ತಿಳಿದುಬಂದಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ಹಣವನ್ನು ಸಾಗಿಸುವಲ್ಲಿ ಆಕೆ ತೊಡಗಿಸಿಕೊಂಡಿದ್ದಾಳೆ.

ಅಸ್ಸಬಾ ಖಾನ್ ಯಾರಿಕೆ?: ಅಸ್ಸಬಾ ಖಾನ್ 2011ರಲ್ಲಿ ಹಿಂದೂಗಳ ನರಮೇಧದಲ್ಲಿ ತೊಡಗಿದ್ದ ಬಿಟ್ಟಾ ಕರಾಟೆಯನ್ನು ಮದುವೆಯಾಗಿದ್ದಾಳೆ. ಶ್ರೀನಗರದಲ್ಲಿ 1972ರಲ್ಲಿ ಜನಿಸಿದ್ದ ಫರೂಕ್ ಅಹ್ಮದ್ ದಾರ್ ಅಡ್ಡ ಹೆಸರು ಬಿಟ್ಟಾ. ಸಮರ ಕಲೆಗಳಲ್ಲಿ ಪಾಂಡಿತ್ಯ ಪಡೆದಿದ್ದರಿಂದ ಇತನಿಗೆ ಕರಾಟೆ ಎಂಬ ಹೆಸರು ಬಂದಿದೆ. ಈ ಕಾರಣಕ್ಕೆ ಈತ ಬಿಟ್ಟ ಕರಾಟೆ ಎಂದು ಫೇಮಸ್ ಆಗಿದ್ದಾನೆ. 1990ರ ದಶಕದಲ್ಲಿ ಕಣಿವೆ ರಾಜ್ಯದಲ್ಲಿ ಪಂಡಿತರ ಮೇಲೆ ಎಸಗಿದ ಕೃತ್ಯದಿಂದ ಈತ ಕುಖ್ಯಾತನಾಗಿದ್ದಾನೆ.

bitta karate wife 1

1980-1990ರಲ್ಲಿ ಈತ ಪಂಡಿತರನ್ನು ಹುಡುತ್ತಾ ಶ್ರೀನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದ. ಪಂಡಿತರೆಂದು ತಿಳಿದ ತಕ್ಷಣ ಆತ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಗುಂಡಿಕ್ಕಿ ಕೊಲ್ಲುತ್ತಿದ್ದ. ಕನಿಷ್ಠ 20 ಕಾಶ್ಮೀರಿ ಪಂಡಿತರನ್ನು ಕೊಂದಿದ್ದೇನೆ ಎಂದು ವಿಡಿಯೋ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದ. ಬಾಲ್ಯ ಸ್ನೇಹಿತ ಸತೀಶ್ ಟಿಕ್ಕೂ ಈತ ಹತ್ಯೆ ಮಾಡಿದ್ದ. ಇದು ಈತ ಹತ್ಯೆ ಮಾಡಿದ ಮೊದಲ ಪ್ರಕರಣ ಆಗಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಬಿಟ್ಟಾ ಕರಾಟೆಯ ವಿರುದ್ಧ 31 ವರ್ಷದ ಹಿಂದೆ ನಡೆದ ಪ್ರಕರಣದ ವಿಚಾರಣೆ ನಡೆಸುವಂತೆ ಟಿಕ್ಕೂ ಕುಟುಂಬಸ್ಥರು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: 20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *