ವಿಜಯಪುರದಲ್ಲಿ ವಿಸ್ಮಯಕಾರಿಯಾಗಿ ಹೆಚ್ಚುತ್ತಿದೆ ಕೃಷ್ಣ ಮೃಗಗಳ ಸಂತತಿ

Public TV
2 Min Read
Blackbuck Vijayapura

ಬೆಂಗಳೂರು: ಸೊಸೈಟಿ ಫಾರ್ಟೆ ಪ್ರೋಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಸಂಸ್ಥಾಪಕ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಪುತ್ರ ಧ್ರುವ ಪಾಟೀಲ್ ವಿಜಯಪುರದ ಅಪರೂಪದ ವನ್ಯಜೀವಿಗಳನ್ನು ಬೆಳಕಿಗೆ ತರುತ್ತಿದ್ದಾರೆ. ಇದೀಗ ಜಿಲ್ಲೆಯ ಇಂಡಿ ತಾಲೂಕು ಕೃಷ್ಣ ಮೃಗಗಳ ಆವಾಸಸ್ಥಾನವಾಗಿರುವುದನ್ನು ಪತ್ತೆ ಮಾಡಿದ್ದಾರೆ. ವಿಶೇಷವಾಗಿ ಇಂಡಿ ತಾಲೂಕನ್ನು ‘ಕೃಷ್ಣ ಮೃಗಗಳ ಪತ್ಯೇಕ ವನ್ಯಜೀವಿ ತಾಣ’ವನ್ನಾಗಿ ರೂಪಿಸಬೇಕೆಂದು ಹೇಳಿದರು.

Blackbuck Vijayapura 4

ಈ ಕುರಿತು ಮಾತನಾಡಿದ ಧ್ರುವ ಪಾಟೀಲ್, ಇಂಡಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೇವಲ ಎರಡು ಕೃಷ್ಣ ಮೃಗಗಳಿದ್ದವು. ಆದರೆ ಇದೀಗ ಇವುಗಳ ಸಂಖ್ಯೆ ವಿಸ್ಮಯಕಾರಿಯಾಗಿ 300ಕ್ಕೆ ಏರಿಕೆಯಾಗಿವೆ. ಕೃಷ್ಣ ಮೃಗಗಳು ಇಷ್ಟೊಂದು ಕಡಿಮೆ ಸಮಯದಲ್ಲಿ ಗಣನೀಯವಾಗಿ ಏರಿಕೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ತನ್ನದೆ ಆದ ಇತಿಹಾಸ ಅಥವಾ ಅತಿಯಾದ ತಾಪಮಾನಕ್ಕೆ ಹೆಸರುವಾಸಿಯಾದ ಜಿಲ್ಲೆ ವಿಜಯಪುರದಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾರಾಟಕ್ಕಿದ್ದಾನೆ ವರ – ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಸಿಕ್ತಾನೆ ವರ 

Blackbuck Vijayapura 6

ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳನ್ನು ರಕ್ಷಿಸಲು ವಿಜಯಪುರದಲ್ಲಿ ರಾಜ್ಯ ಅರಣ್ಯ ಇಲಾಖೆಯೊಂದಿಗೆ ಸೊಸೈಟಿ ಫಾರ್ ಪ್ರೋಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಪರಿಣಾಮಕಾರಿ ಮಾರ್ಗಗಳನ್ನು ರೂಪಿಸಿದೆ. ಇಂಡಿ ತಾಲೂಕಿನ ಐದು ಗ್ರಾಮಗಳಲ್ಲಿ 300 ಕ್ಕೂ ಹೆಚ್ಚು ಕೃಷ್ಣಮೃಗಗಳು(antilopecervicapra) ಕಾಣಿಸಿಕೊಂಡಿದ್ದು, ಇವುಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

Blackbuck Vijayapura 5

ಹುಲಿಗಳು ಮತ್ತು ಆನೆಗಳಂತೆಯೇ ವನ್ಯಜೀವಿ(ರಕ್ಷಣೆ) ಕಾಯಿದೆ 1972, 1ರ ಅಡಿಯಲ್ಲಿ ಕೃಷ್ಣಮೃಗಗಳು ಕೂಡ ಇದೆ ಕಾನೂನಿನ ಅಡಿಯಲ್ಲಿ ಸಂರಕ್ಷಿತವಾಗಿವೆ. ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳ ಉಳಿವು ಜಿಲ್ಲೆಯ ರೈತರೊಂದಿಗೆ ಸಹಬಾಳ್ವೆಯ ಮೇಲೆ ಅವಲಂಬಿತವಾಗಿದೆ. ಇಲ್ಲಿಯವರೆಗೆ ಕೃಷ್ಣಮೃಗಗಳಿಗಾಗಿ ಯಾವುದೇ ಸಂರಕ್ಷಿತ ಮೀಸಲು ಇಲ್ಲದಿರುವುದರಿಂದ ಕೃಷ್ಣಮೃಗಗಳು ಬೇಟೆಗೆ ಗುರಿಯಾಗುತ್ತವೆ. ಕೃಷ್ಣಮೃಗಗಳು ದ್ರಾಕ್ಷಿತೋಟಗಳಿಗೆ ಹಾರಿ ಬೆಳೆಗಳನ್ನು ತಿನ್ನುವುದರಿಂದ ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಎಂದರು. ಇದನ್ನೂ ಓದಿ: ಹರ್ ಘರ್ ತಿರಂಗ: ರಾಷ್ಟ್ರಧ್ವಜವನ್ನ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ ಭಾರತೀಯ ಅಂಚೆ ಸೇವೆ 

Blackbuck Vijayapura 3

ವಿಜಯಪುರ ಜಿಲ್ಲೆಯ ರೈತರು ಇಲ್ಲಿಯವರೆಗೂ ಕೃಷ್ಣಮೃಗಗಳ ಸ್ವಚ್ಛಂದ ಬದುಕಿನಲ್ಲಿ ಹಸ್ತಕ್ಷೇಪ ಮಾಡಿಲ್ಲ. ಏಕೆಂದರೆ ಅವುಗಳು ಧಾರ್ಮಿಕವಾಗಿ ಮಹತ್ವದ್ದಾಗಿವೆ. ದೇವರಾದ ಕೃಷ್ಣನ ಮೃಗಗಳು ಎಂದೇ ಪರಿಗಣಿಸಲಾಗಿದೆ. ಆದರೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರಾಣಿಗಳು ತಮ್ಮ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುವುದನ್ನು ತಡೆಯಲು ರೈತರು ಈಗ ವಿದ್ಯುತ್ ಬೇಲಿಗಳನ್ನು ಅಳವಡಿಸುತ್ತಿದ್ದಾರೆ. ಇದು ಭವಿಷ್ಯದಲ್ಲಿ ಬ್ಲ್ಯಾಕ್‍ಬಕ್‍ಗಳ ಪಾಲಿಗೆ ಮಾರಣಾಂತಿಕ ಗಾಯಕ್ಕೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *