ಬಡ ಹುಡುಗಿಯರ ಶಿಕ್ಷಣಕ್ಕೆ ಲಡಾಖ್‍ನ ವರ್ಜಿನ್ ಶಿಖರ ಏರುತ್ತಿರುವ ಗಟ್ಟಿಗಿತ್ತಿಯರು

Public TV
2 Min Read
Telangana Women

ಲೇಹ್: ಇಬ್ಬರು ತೆಲಂಗಾಣ ಯುವತಿಯರು ಲಡಾಖ್‍ನ ವರ್ಜಿನ್ ಶಿಖರವನ್ನು ಏರುವ ಮೂಲಕ ಬಡ ಹುಡುಗಿಯರ ಶಿಕ್ಷಣಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ.

ತೆಲಂಗಾಣದ ಈ ಇಬ್ಬರು ಯುವತಿಯರು ಪ್ರಾಜೆಕ್ಟ್ ಶಕ್ತಿಗಾಗಿ ಲಡಾಖ್‍ನ ವರ್ಜಿನ್ ಶಿಖರವನ್ನು ಹತ್ತುತ್ತಿದ್ದಾರೆ. ಈ ಮೂಲಕ ಕಡಿಮೆ ಸವಲತ್ತು ಹೊಂದಿರುವ 100ಕ್ಕೂ ಹೆಚ್ಚು ಹುಡುಗಿಯರ ಜೀವನದಲ್ಲಿ ಬದಲಾವಣೆ ತರುವುದು ಇವರ ಮುಖ್ಯ ಉದ್ದೇಶ. ಈ ಶಿಖರವನ್ನು ಹತ್ತಿ ಗೆದ್ದ ಹಣದಲ್ಲಿ ಬಡ ಹುಡುಗಿಯರಿಗೆ ಸಹಾಯ ಮಾಡಲು ಈ ಇಬ್ಬರು ಗಟ್ಟಿಗಿತ್ತಿಯರು ಸಿದ್ಧರಾಗಿದ್ದಾರೆ. ಇದನ್ನೂ ಓದಿ: 16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ 

LADAKH INDIAN CHINA

ಯಾರಿವರು?
ಕಾವ್ಯ ಮಾನ್ಯಪು ಇವರು ಅಮೆರಿಕಾದಲ್ಲಿ ಅಧ್ಯಕ್ಷ ಪ್ರಶಸ್ತಿ ಪುರಸ್ಕೃತೆ ಮತ್ತು ಬಾಹ್ಯಾಕಾಶ ವಿಜ್ಞಾನಿ. ಪೂರ್ಣಾ ಮಾಲವತ್ ಅವರು ಮೌಂಟ್ ಎವರೆಸ್ಟ್ ಏರಿದ ಮತ್ತು ಏಳು ಶೃಂಗಗಳ ಸವಾಲನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಮಹಿಳೆ. ಈಗ ಈ ಇಬ್ಬರು ಗಟ್ಟಿಗಿತ್ತಿಯರು ಒಟ್ಟಾಗಿ, 1,00,000 ಡಾಲರ್(79,76,288 ರೂ.) ಮೊತ್ತವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ.

ಸೋಮವಾರ ಇಬ್ಬರು ಯುವತಿಯರು ಹೈದರಾಬಾದ್‍ನಿಂದ ಲಡಾಖ್‍ನ ಲೇಹ್‍ಗೆ ಹೊರಟಿದ್ದಾರೆ. ಮುಂದಿನ 15 ದಿನಗಳಲ್ಲಿ, ಇಬ್ಬರೂ ಲಡಾಖ್‍ನಲ್ಲಿ ಇನ್ನೂ ಯಾರು ಏರದ ಮತ್ತು ಹೆಸರಿಲ್ಲದ 6,200 ಮೀಟರ್ ಎತ್ತರದ ಪರ್ವತ ಶಿಖರವನ್ನು ಏರಲಿದ್ದಾರೆ. ಅವರು ಹಲವು ಶಿಖರವನ್ನು ಮುಂದೆ ಏರಲಿದ್ದು, ಇದು ಅವರ ಪ್ರಾಜೆಕ್ಟ್ ಶಕ್ತಿಯ ಮೊದಲನೆಯ ಶಿಖರವಾಗಿದೆ ಎಂದು ತಿಳಿಸಿದ್ದಾರೆ.

Ladakh

ಕಾವ್ಯ ಮತ್ತು ಪೂರ್ಣಾ ಇಬ್ಬರೂ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮೂಲದವರು. 2019 ರಲ್ಲಿ ಪೂರ್ಣಾ ಯುಎಸ್‍ಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ಇಬ್ಬರು ಮೊದಲು ಭೇಟಿಯಾದರು. ನಂತರ ಇವರಿಬ್ಬರ ಜರ್ನಿ ಪ್ರಾರಂಭವಾಗಿ ಇಲ್ಲಿಗೆ ಬಂದು ನಿಂತಿದೆ. ಇದನ್ನೂ ಓದಿ: ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಷ್ಕಾ’ ಮಾಡುವ ರೆಸಿಪಿ

ಈ ಕುರಿತು ಮಾತನಾಡಿದ ಕಾವ್ಯ ಅವರು, ಪ್ರಾಜೆಕ್ಟ್ ಶಕ್ತಿಯ ಭಾಗವಾಗಿ, ನಾವು ಪರ್ವತಾರೋಹಣವನ್ನು ವೇದಿಕೆಯಾಗಿ ಆರಿಸಿಕೊಂಡಿದ್ದೇವೆ. ಏಕೆಂದರೆ ಇದು ಮಹಿಳೆಯ ವೃತ್ತಿ ಅಥವಾ ಅನ್ವೇಷಣೆಯ ಅತ್ಯಂತ ಅಸಾಂಪ್ರದಾಯಿಕ ರೂಪವಾಗಿದೆ. ಆದರೂ ನಾವು ಇದನ್ನು ಮಾಡಲು ಇಷ್ಟಪಡುತ್ತೇವೆ. ಹುಡುಗಿಯರು ದೊಡ್ಡ ಕನಸು ಕಾಣಬೇಕು ಮತ್ತು ಅವರು ಮಾಡಲು ಬಯಸಿದ್ದನ್ನು ಮಾಡಬೇಕು. ಇದೇ ನಾನು ಎಲ್ಲರಿಗೂ ನೀಡುವ ಸಂದೇಶ ಎಂದು ತಿಳಿಸಿದರು.

Ladakh 1

ಜೂನ್‍ನಲ್ಲಿ ಉತ್ತರ ಅಮೆರಿಕಾದಲ್ಲಿ ತನ್ನ ಕೊನೆಯ ಕ್ಲೈಂಬಿಂಗ್ ದಂಡಯಾತ್ರೆಯನ್ನು ಮುಗಿಸಿ ಹಿಂತಿರುಗಿರುವ ಪೂರ್ಣಾ, ಲಡಾಖ್‍ನಲ್ಲಿ ಮಿಷನ್‍ಗಾಗಿ ಎದುರು ನೋಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ತುಂಬಾ ಉತ್ಸುಕಳಾಗಿದ್ದೇನೆ. ಇಲ್ಲಿಯವರೆಗೆ, ನಾನು ನನ್ನ ಉತ್ಸಾಹಕ್ಕಾಗಿ ಪರ್ವತಗಳನ್ನು ಏರಿದ್ದೇನೆ. ಈ ಬಾರಿ ನಾನು ಅದನ್ನು ಒಂದು ಒಳ್ಳೆಯ ಉದ್ದೇಶಕ್ಕೆ ಮಾಡುತ್ತಿದ್ದೇನೆ. ಅದಕ್ಕೆ ಸಂತೋಷವಾಗುತ್ತಿದೆ ಎಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *