ತಿರುವನಂತಪುರಂ: ಅಮ್ಮ, ಮಗ ಒಟ್ಟಿಗೆ ಸರ್ಕಾರಿ ಕೆಲಸಕ್ಕೆ ಸೇರಿದ ವಿಶೇಷ ಸುದ್ದಿಯೊಂದು ಕೇರಳದಲ್ಲಿ ಭಾರೀ ಸದ್ದು ಮಾಡುತ್ತಿದೆ.
ತಾಯಿ ಬಿಂದು(42) ಅವರು ಕೊನೆಯ ದರ್ಜೆಯ ಸೇವಕರ(ಎಲ್‍ಜಿಎಸ್) ಪರೀಕ್ಷೆಯಲ್ಲಿ 92ರ ರ‍್ಯಾಂಕ್‍ನೊಂದಿಗೆ ತೇರ್ಗಡೆಯಾಗಿದ್ದರೆ, ಅವರ 24 ವರ್ಷದ ಮಗ ಲೋವರ್ ಡಿವಿಜನಲ್ ಕ್ಲರ್ಕ್(ಎಲ್‍ಡಿಸಿ) ಪರೀಕ್ಷೆಯಲ್ಲಿ 38ನೇ ರ‍್ಯಾಂಕ್‍ನೊಂದಿಗೆ ತೇರ್ಗಡೆಯಾಗಿದ್ದಾನೆ. ಇದನ್ನೂ ಓದಿ: ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ
ಬಿಂದು ಅವರು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಮಗ 10ನೇ ತರಗತಿಯಲ್ಲಿದ್ದಾಗ ನನಗೆ ಓದಲು ಪ್ರೋತ್ಸಾಹಿಸಿದ. ಆಗ ನಾನು ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದೇನೆ. ಆದರೆ ಇದು ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್(PSC) ಪರೀಕ್ಷೆಗಳಿಗೆ ತಯಾರಿ ನಡೆಸುವಂತೆ ಪ್ರೇರೇಪಿಸಿತು. ಈಗ ನಾವಿಬ್ಬರು ಒಟ್ಟಿಗೆ ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿರುವುದು ಸಂತೋಷವಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಾನು ಎಲ್‍ಜಿಎಸ್‍ಗೆ ಎರಡು ಬಾರಿ ಮತ್ತು ಎಲ್‍ಡಿಸಿಗೆ ಒಂದು ಬಾರಿ ಪರೀಕ್ಷೆಯನ್ನು ಕೊಟ್ಟಿದ್ದೆ. ಅವು ಯಶಸ್ಸು ಕಾಣಲಿಲ್ಲ. ಆದರೆ ಈಗ ನಾಲ್ಕನೇ ಸಾಹಸವು ಯಶಸ್ವಿಯಾಗಿದೆ. ನನ್ನ ಮುಖ್ಯ ಗುರಿ ಐಸಿಡಿಎಸ್(ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‍ಮೆಂಟ್ ಸರ್ವಿಸ್ಸ್(ಐಸಿಡಿಎಸ್) ಮೇಲ್ವಿಚಾರಕರ ಪರೀಕ್ಷೆ, ಆದರೆ ಎಲ್‍ಜಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಬೋನಸ್ ಎಂದು ತಿಳಿಸಿದರು. ಇದನ್ನೂ ಓದಿ: ಅಕ್ರಮ ಗೋಹತ್ಯೆ ಮನೆ ಮೇಲೆ ದಾಳಿ – ವಿದ್ಯುತ್ ಸಂಪರ್ಕ ಕಟ್, ಶರಣಾಗಲು ಸೂಚನೆ
ಕಳೆದ 10 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿರುವ ಬಿಂದು, ಕೋಚಿಂಗ್ ಸೆಂಟರ್‍ನಲ್ಲಿರುವ ಅವರ ಶಿಕ್ಷಕರು, ಸ್ನೇಹಿತರು ಮತ್ತು ಅವರ ಮಗ ಪಿಎಸ್‍ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಪದೇ ಪದೇ ನೀಡುತ್ತಿದ್ದ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಯಶಸ್ಸು ಗಳಿಸಿದ್ದೇವೆ ಎಂದರು.
ಬಿಂದು ಅವರ ಮಗ ಈ ಕುರಿತು ಮಾತನಾಡಿದ್ದು, ಇಬ್ಬರೂ ಒಟ್ಟಿಗೆ ಅಧ್ಯಯನ ಮಾಡದಿದ್ದರೂ, ಕೆಲವು ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ನಾನು ಒಬ್ಬಂಟಿಯಾಗಿ ಓದಲು ಇಷ್ಟಪಡುತ್ತೇನೆ. ಮೇಲಾಗಿ, ನನ್ನ ಅಮ್ಮ ಯಾವಾಗಲೂ ಓದುವುದಿಲ್ಲ. ಸಮಯ ಸಿಕ್ಕಾಗ ಮತ್ತು ಅಂಗನವಾಡಿ ಕೆಲಸ ಮುಗಿದ ನಂತರ ಓದುತ್ತಿದ್ದರು. ನಾನು ಮೊದಲು ಪೊಲೀಸ್ ಪರೀಕ್ಷೆ ಬರೆದಿದ್ದೆ. ಆದರೆ ಅದು ಅಷ್ಟು ಯಶಸ್ವಿಯಾಗಿಲ್ಲ. ಈ ಬಾರಿ, ನಾನು ಎಲ್‍ಡಿಸಿ ಪರೀಕ್ಷೆಗಾಗಿ ಹೆಚ್ಚು ಓದಿದ್ದೆ ಎಂದು ವಿವರಿಸಿದರು.