ವಿಂಡೀಸ್ ವಿರುದ್ಧದ ಕೊನೆಯ T20 ಪಂದ್ಯಕ್ಕೆ ರೋಹಿತ್ ಚಕ್ಕರ್ – ಕಾಮನ್‍ವೆಲ್ತ್ ಫೈನಲ್ ನೋಡಲು ಹಾಜರ್

Public TV
2 Min Read
TEAM INDIA

ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲೂ ದೊಡ್ಡ ಮೊತ್ತದ ಜಯದೊಂದಿಗೆ ಭಾರತ ತಂಡ 4-1 ಅಂತರದಲ್ಲಿ ಸರಣಿ ಗೆದ್ದಿದೆ. ಇತ್ತ ವಿಂಡೀಸ್ ಹೀನಾಯ ಪ್ರದರ್ಶನ ನೀಡಿ ತವರಿನಲ್ಲಿ ಮುಖಭಂಗ ಅನುಭವಿಸಿದೆ.

TEAM INDIA 4

5ನೇ ಟಿ20 ಪಂದ್ಯದಲ್ಲಿ ಭಾರತ ತಂಡ ನಾಯಕನ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಖಾಯಂ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದರು. ಇತ್ತ ಹಾರ್ದಿಕ್ ಪಾಂಡ್ಯ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಆದರೆ ರೋಹಿತ್ ಶರ್ಮಾ ಮಾತ್ರ ಇತ್ತ ಕಾಮನ್‍ವೆಲ್ತ್ ಕ್ರಿಕೆಟ್ ಫೈನಲ್ ನೋಡುವುದರಲ್ಲಿ ಬ್ಯುಸಿ ಆಗಿದ್ದರು. ರೋಹಿತ್ ಮೊಬೈಲ್‍ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದರೆ, ಅವರಿಗೆ ಇತರ ಆಟಗಾರರು ಸಾಥ್ ನೀಡಿದರು. ಇದನ್ನೂ ಓದಿ: Well Done Girls: ಗೋಲ್ಡ್‌ ಜಸ್ಟ್‌ ಮಿಸ್‌ – ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿಗೆದ್ದ ವನಿತೆಯರು

team india women 1

ಇತ್ತ ಪಾಂಡ್ಯ ಸಾರಥ್ಯದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 7 ವಿಕೆಟ್ ನಷ್ಟಕ್ಕೆ 188 ರನ್ ಪೇರಿಸಿ ವಿಂಡೀಸ್‍ಗೆ 189 ರನ್ ಟಾರ್ಗೆಟ್ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ ಬ್ಯಾಟ್ಸ್‌ಮ್ಯಾನ್‌ಗಳು ಭಾರತದ ಸ್ಪಿನ್ನರ್‌ಗಳ ದಾಳಿಗೆ ನೆಲಕಚ್ಚಿದರು. 15.4 ಓವರ್‌ಗಳಲ್ಲಿ 100 ರನ್‍ಗಳಿಗೆ ಸರ್ವಪತನಕಂಡು ಸೋಲೊಪ್ಪಿಕೊಂಡರು.

TEAM INDIA 2

ವಿಂಡೀಸ್‍ಗೆ ತ್ರಿವಳಿ ಸ್ಪಿನ್ನರ್‌ಗಳ ಆಘಾತ:
ಕೊನೆಯ ಪಂದ್ಯವನ್ನು ಗೆದ್ದು ಸರಣಿ ಗೆಲುವಿನ ಅಂತರವನ್ನು ತಗ್ಗಿಸುವ ಇರಾದೆಯಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಕುಲ್‍ದೀಪ್ ಯಾದವ್, ರವಿ ಬಿಷ್ಣೋಯ್ ಮೇಲಿಂದ ಮೇಲೆ ಆಘಾತ ನೀಡಿದರು. ಈ ಮೂವರು ಸೇರಿಕೊಂಡು ವಿಂಡೀಸ್‍ನ 10 ವಿಕೆಟ್ ಬೇಟೆಯಾಡಿದರು. ವೆಸ್ಟ್ ಇಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್ 56 ರನ್ (35 ಎಸೆತ, 5 ಬೌಂಡರಿ, 4 ಸಿಕ್ಸ್) ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಪೆವಿಲಿಯನ್ ಪರೇಡ್ ನಡೆಸಿದರು.

TEAM INDIA 1

ಅಂತಿಮವಾಗಿ 15.4 ಓವರ್‌ಗಳಲ್ಲಿ 100 ರನ್‍ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ರವಿ ಬಿಷ್ಣೋಯ್ 4 ವಿಕೆಟ್ ಕಿತ್ತು ಮಿಂಚಿದರೆ, ಅಕ್ಷರ್ ಪಟೇಲ್ ಮತ್ತು ಕುಲ್‍ದೀಪ್ ಯಾದವ್ ತಲಾ 3 ವಿಕೆಟ್ ಪಡೆದರು. ಇದನ್ನೂ ಓದಿ: CWG 2022: ನಿಖತ್ ಜರೀನ್‌ಗೆ ಒಲಿದ ಚಿನ್ನ – ಬಾಕ್ಸಿಂಗ್‌ನಲ್ಲಿ ಭಾರತಕ್ಕಿಂದು ಹ್ಯಾಟ್ರಿಕ್ ಗೋಲ್ಡ್

ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೇಯಸ್ ಅಯ್ಯರ್ 64 ರನ್ (40 ಎಸೆತ, 8 ಬೌಂಡರಿ, 2 ಸಿಕ್ಸ್), ದೀಪಕ್ ಹೂಡಾ 38 ರನ್ (25 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಪಾಂಡ್ಯ 28 ರನ್ (16 ಎಸೆತ, 2 ಬೌಂಡರಿ, 2 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್‍ಗಳ ದೊಡ್ಡ ಮೊತ್ತ ಪೇರಿಸಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *