ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗುವಿನ ಬರುವಿಕೆಯ ಖುಷಿಯ ನಡುವೆ ತಾಯ್ತನದ ಕಷ್ಟದ ಪರಿಸ್ಥಿತಿಯನ್ನ ಹೇಳಿಕೊಂಡಿದ್ದಾರೆ. ಸೋನಮ್‌ನ ಸದ್ಯ ಈ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ʻಸಾವರಿಯಾʼ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅನಿಲ್ ಕಪೂರ್ ಪುತ್ರಿ ಸೋನಮ್, ನಂತರ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿದ್ದರು. ಅವಕಾಶಗಳು ಅರಸಿ ಬರುತ್ತಿರುವಾಗಲೇ ಆನಂದ್ ಅಹುಜಾ ಅವರನ್ನ 2018ರಲ್ಲಿ ಮದುವೆಯಾದರು. ಸದ್ಯ ತಾಯ್ತನದ ಖುಷಿಯಲ್ಲಿರುವ ಸೋನಮ್‌ಗೆ 9 ತಿಂಗಳು ತುಂಬಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೋನಮ್, ಪ್ರೆಗ್ನೆನ್ಸಿ ಅಂದುಕೊಂಡಷ್ಟು ಸುಲಭವಲ್ಲ, ಸುಂದರವಾಗಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಎಂಟ್ರಿ
ಸೋನಮ್ ಈ ಬಾರಿ ಊದಿಕೊಂಡಿರುವ ಪಾದಗಳ ಫೋಟೋ ಹಂಚಿಕೊಂಡು ಪ್ರಗ್ನೆನ್ಸಿ ಕೆಲವೊಮ್ಮೆ ಸುಂದರವಾಗಿರಲ್ಲ ಎಂದು ಬರೆದುಕೊಂಡಿದ್ದಾರೆ.ಪ್ರೆಗ್ನೆನ್ಸಿ ಸಮಯದ ಚಾಲೆಂಜಿಂಗ್ ದಿನಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಇನ್ನು ತಮ್ಮ ಡೆಲಿವರಿ ನಂತರ ಮುಂಬೈನ ತವರು ಮನೆಯಲ್ಲಿಯೇ ನಟಿ ಇರಲಿದ್ದಾರೆ.
Live Tv
[brid partner=56869869 player=32851 video=960834 autoplay=true]