ಪೊಲೀಸರಿಗಿಂತ ಇಡಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ: ಮೋದಿ ವಿರುದ್ಧ ಅಶೋಕ್ ಗೆಹ್ಲೋಟ್ ಕಿಡಿ

Public TV
1 Min Read
ASHOK GEHLOT MODI

ಜೈಪುರ: ಪೊಲೀಸರಿಗಿಂತ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ED Investigating 7 Cases Of Cryptocurrency Usage In Money Laundering - BW  Businessworld

ಜೈಪುರದಲ್ಲಿ ಬಜೆಟ್ ಯೋಜನೆಗಳ ಪರಿಶೀಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡಿ ಈಗ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಬೇಕಾಗಿಲ್ಲ. ಯಾರನ್ನಾದರೂ ಬಂಧಿಸಬಹುದು. ಪೊಲೀಸರಿಗಿಂತ ಹೆಚ್ಚಿನ ಅಧಿಕಾರವನ್ನು ಇಡಿಗೆ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ:  ಗುರಾಯಿಸಿದ್ದಕ್ಕೆ ದೊಣ್ಣೆ ಹಿಡಿದು ನಡುರಸ್ತೆಯಲ್ಲಿ ಹೊಡೆದಾಡಿದ ಯುವಕರು

ಈ ದೇಶದಲ್ಲಿ ಒಂದು ಧರ್ಮದ ರಾಜಕೀಯ ನಡೆಯುತ್ತಿದೆ. ನಮ್ಮ ರಾಷ್ಟ್ರವು ಇಂತಹ ಪರಿಸ್ಥಿತಿಯನ್ನು ನೋಡಿರಲಿಲ್ಲ. ಅದಕ್ಕೆ ಜನರು ಚಿಂತಿತರಾಗಿ ಭಯಭೀತರಾಗಿದ್ದಾರೆ. ಇಡಿ ಭಯದಿಂದ ಯಾರು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

Ashok Gehlot

ಮೋದಿ ವಿರುದ್ಧ ವಾಗ್ದಾಳಿ ಮಾಡಿದ ಅವರು, ಉದಯ್‍ಪುರದಲ್ಲಿ ಟೈಲರ್‌  ಶಿರಚ್ಛೇದದ ನಂತರ ಹಂತಕರನ್ನು ಶೀಘ್ರವಾಗಿ ಬಂಧಿಸದಿದ್ದರೆ ರಾಜ್ಯದಲ್ಲಿ, ದೇಶದಲ್ಲಿ ಕೋಮುಗಲಭೆಗಳು ಸಂಭವಿಸಬಹುದು. ನಾನು ಅದನ್ನು ತಡೆದಿದ್ದೇನೆ. ಹಿಂಸಾಚಾರವನ್ನು ನಾನು ಸಹಿಸುವುದಿಲ್ಲ ಎಂದು ಜನರಿಗೆ ಹೇಳಿ ಮನವಿ ಮಾಡುವಂತೆ ನಾನು ಮೋದಿ ಅವರನ್ನು ಕೇಳಿದೆ. ಅವರು ಹಾಗೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿರೋಧ ಪಕ್ಷಗಳಿಗೆ ಸೇರಿದ ಹಲವು ನಾಯಕರನ್ನು ಇಡಿ ಬಂಧಿಸಿರುವ ನಡುವೆಯೇ ಅಶೋಕ್ ಅವರು ಈ ರೀತಿಯ ಹೇಳಿಕೆ ಕೊಟ್ಟರು. ಇದನ್ನೂ ಓದಿ: ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ – ಪೊಲೀಸಪ್ಪನ ಮೂಗು, ಕಿವಿ, ತುಟಿ ಕಟ್ 

narendra modi flag

ಮುಂಬೈನಲ್ಲಿ ಚಾಲ್ ಪ್ರಾಜೆಕ್ಟ್‌ನ ಪುನರಾಭಿವೃದ್ಧಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಇಡಿ ಭಾನುವಾರ ಬಂಧಿಸಿದೆ. ಇದಕ್ಕೂ ಮುನ್ನ ಅಮಾನತುಗೊಂಡಿರುವ ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ನಿವಾಸದಲ್ಲಿ 20 ಕೋಟಿ ರೂ.ಗೂ ಹೆಚ್ಚು ನಗದು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *