-RSS ಪಾದದ ಧೂಳಿಗೂ ಸಿದ್ದರಾಮಯ್ಯ ಸಮವಿಲ್ಲ
-RSS ಬಗ್ಗೆ ಮಾತಾಡೋ ನಿಮ್ಮ ನಾಲಿಗೆ ತೊಳೆದುಕೊಳ್ಳಿ
-RSS ಬಗ್ಗೆ ಮಾತಾಡೋ ನಿಮ್ಮ ನಾಲಿಗೆ ತೊಳೆದುಕೊಳ್ಳಿ
ಶಿವಮೊಗ್ಗ: ಸಿದ್ದರಾಮಯ್ಯ ಅವರಿಗೆ ನಾಚಿಕೆ ಮಾನ, ಮರ್ಯಾದೆ ಇದೆಯಾ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಪರಿಹಾರದ ಬಿಕ್ಕಟ್ಟು ಗಲಭೆಗೆ ಕಾರಣವೆಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತಂತೆ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಇಂತಹ ಕೆಟ್ಟ ಮುಖ್ಯಮಂತ್ರಿ ಅವರನ್ನು ಕೊಟ್ಟಿದ್ದೇವಲ್ಲ ಅಂತ ಬಹಳ ಬೇಸರ ಆಯಿತು. ಸಿದ್ದರಾಮಯ್ಯ ಅವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಪಾಕಿಸ್ತಾನ ಮಾಡಿದ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಾರತದ ಸುದ್ದಿಗೆ ಬರದ ರೀತಿ ಮಾಡಿದ್ದು ಮೋದಿ. ದೇಶದ ಮೇಲೆ ಆಘಾತವಾದಾಗ, ವಿಕೋಪವಾದಾಗ ಆರ್‌ಎಸ್‍ಎಸ್ ಸ್ವಯಂ ಸೇವಕರು ಶ್ರಮ ಪಟ್ಟಿದ್ದಾರೆ. ಸ್ವಯಂ ಸೇವಕರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಏನು ಗೊತ್ತಿಲ್ಲ. ಆರ್‌ಎಸ್‍ಎಸ್ ಪಾದದ ಧೂಳಿಗೂ ಸಿದ್ದರಾಮಯ್ಯ ಸಮವಿಲ್ಲ. ದೇಶದ ಜನರ ಕ್ಷಮೆ ಕೇಳಬೇಕು. ರಾಷ್ಟ್ರದ್ರೋಹಿಗಳಿಗೆ ಇದುವರೆಗೂ ರಕ್ಷಣೆ ಕೊಡುತ್ತಾ ಬಂದಿರುವುದು ನೀವು ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಂದೆರಡು ದಿನ ಆರ್‌ಎಸ್‍ಎಸ್ ಶಾಖೆಗೆ ಬನ್ನಿ. ನಾನೇ ನಿಮ್ಮನ್ನು ಶಾಖೆಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿನ ಚಟುವಟಿಕೆ ತಿಳಿದುಕೊಳ್ಳಿ. ಆರ್‌ಎಸ್‍ಎಸ್ ಬಗ್ಗೆ ಮಾತನಾಡಿರುವ ನಿಮ್ಮ ನಾಲಿಗೆಯನ್ನು ಮೊದಲು ತೊಳೆದುಕೊಳ್ಳಿ. ನೀವು ಡಿಕೆಶಿ ಸೇರಿಕೊಂಡು ಜಾತೀಯತೆ ತೇಪೆ ಹಚ್ಚಿ ಬಿಟ್ಟಿದ್ದೀರಾ. ನಿಮ್ಮ ರಾಜಕೀಯ ತೆವಲುಗಳಿಗೆ ಜಾತಿಯನ್ನು ತಂದಿಟ್ಟಿದ್ದೀರಿ. ಕುಡುಕರು ಮಾತನಾಡಿದ ರೀತಿ ಮಾತನಾಡುವುದು ಸರಿಯಲ್ಲ. ಶಾಖೆಗೆ ಬಂದು ಅಲ್ಲಿ ಇಂತಹ ತಪ್ಪಿದೆ. ಅಂತಹ ತಪ್ಪಿದೆ ಅಂದರೆ ನಾನು ಆಗ ಕೇಳುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ
ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಿ ಎಂಬ ಸಿದ್ದರಾಮಯ್ಯ ಅವರು ಹೇಳಿಕೆ ಬಗ್ಗೆ ಮಾತನಾಡಿದ ಅವರು, ಘಟನೆ ನಡೆದು 24 ಗಂಟೆಯೊಳಗೆ ಬಂಧನ ಆಗಿದೆ. ಇದಕ್ಕಾಗಿ ಸಿಎಂ ಗೃಹ ಸಚಿವರನ್ನು ಅಭಿನಂದಿಸುತ್ತೇನೆ. ನಿಮ್ಮ ಅವಧಿಯಲ್ಲಿ 32 ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಯಿತಲ್ಲ. ನೀವು ಎಷ್ಟು ಸರಿ ರಾಜೀನಾಮೆ ಕೊಟ್ರಿ? ಕಟೀಲ್ ಅವರನ್ನು ಈ ಹತ್ಯೆಯಲ್ಲಿ ವಿಚಾರಣೆ ಮಾಡಿ ಎಂದಿದ್ದೀರಾ, ಕಟೀಲ್ ಅವರನ್ನು ಏಕೆ ವಿಚಾರಣೆ ಮಾಡಬೇಕು? ಕಟೀಲ್ ಅಧ್ಯಕ್ಷರಾದ ಮೇಲೆ ನಿಮ್ಮ ಪಕ್ಷ ಅಧಿಕಾರ ಕಳೆದುಕೊಂಡಿತು ಅಂತಾ ಉರಿನಾ? ಕಟೀಲ್, ಸಿಎಂ, ಗೃಹ ಸಚಿವರ ವಿರುದ್ಧ ಮಾತನಾಡಿದರೆ ಸುಮ್ಮನಿರಲ್ಲ. ನಿಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಮಾಡಿಕೊಳ್ಳಿ ನಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ.
ರಮೇಶ್ ಕುಮಾರ್ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಪತ್ರಕರ್ತರ ಮೇಲೆ ಏಕೆ ಹಲ್ಲೆ ಮಾಡುತ್ತೀರಾ? ಇದು ಕಾಂಗ್ರೆಸ್ ಸಂಸ್ಕೃತಿ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ರಮೇಶ್ ಕುಮಾರ್ ಗೂಂಡಾ ಅಂತಾ ಎಲ್ಲರಿಗೂ ಗೊತ್ತಿದೆ. ರಮೇಶ್ ಕುಮಾರ್ ಅವರನ್ನು ಮೊದಲು ಬಂಧಿಸಬೇಕು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ಕೊಟ್ಟಿದ್ದರು. ಈಗಾಗಲೇ ದುಡುಕಿನ ಕ್ರಮ ಕೈಗೊಂಡಿದ್ದೇವು. ವಾಪಸ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಯಾರದ್ದೋ ಸಿಟ್ಟನ್ನು ಯಾರದ್ದೋ ಮೇಲೆ ಹಾಕಿದ್ದರು. ಕೊಲೆಗಡುಕರ ವಿರುದ್ಧ ನಿಮ್ಮ ಆಕ್ರೋಶ ಇರಬೇಕಿತ್ತು. ಅನೇಕ ಹಿರಿಯರು ನಮ್ಮ ಪಕ್ಷ ಕಟ್ಟಿದ್ದಾರೆ. ನಮ್ಮ ಹಿರಿಯರ ಆಸೆ ಒಂದೊಂದೇ ಈಡೇರುತ್ತಿವೆ. ಸಿಟ್ಟು, ಆಕ್ರೋಶ, ನೋವು ನಿಜ. ಅದು ರಾಷ್ಟ್ರದ್ರೋಹಿಗಳ ವಿರುದ್ಧ ಆಗಬೇಕು. 20% ಇರುವ ಮುಸ್ಲಿಮರು ಏನು ಬೇಕಾದರೂ ಮಾಡಬೇಕಾದರೆ 80% ಇರುವ ಹಿಂದೂಗಳು ಏನೆಲ್ಲಾ ಮಾಡಬಹುದು. ಆದರೆ ನಾವು ಆ ರೀತಿ ಮಾಡುವುದಿಲ್ಲ. ಎಬಿವಿಪಿ ಪಿಎಫ್‍ಐಎಸ್ ಡಿಪಿಐ ನಿಷೇಧ ಮಾಡಬೇಕು ಅಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಿಲುವು ಸಹ ಅದೇ ಆಗಿದೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]