ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಕಾಂಗ್ರೆಸ್ ನಾಯಕರು ಟ್ವೀಟ್, ವೀಡಿಯೋ ಹಾಗೂ ರೀಟ್ವೀಟ್‌ಗಳನ್ನು ಮಾಡಿದ್ದು, ಅವೆಲ್ಲವನ್ನೂ 24 ಗಂಟೆಗಳ ಒಳಗೆ ಅಳಿಸಲು ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಸ್ಮೃತಿ ಇರಾನಿ ಅವರ ಮಗಳು ಅಕ್ರಮ ಬಾರ್ ನಡೆಸುತ್ತಿರುವುದಾಗಿ ಆರೋಪಿಸಿರುವ ಜೈರಾಮ್ ರಮೇಶ್, ಪವನ್ ಖೇರಾ ಹಾಗೂ ನೆಟ್ಟಾ ಡಿಸೋಜಾ ವಿರುದ್ಧ ಸ್ಮೃತಿ ಇರಾನಿ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದು, ಅವರು ಆಗಸ್ಟ್ 18ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿಗೆ ಬೆಂಬಲಿಸಿದ್ದೆ, ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣ: ಡಿಕೆಶಿ
ಸ್ಮೃತಿ ಇರಾನಿ ಅವರ 18 ವರ್ಷದ ಪುತ್ರಿ ಕಿರಾತ್ ನಾಗ್ರಾ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಹಿನ್ನೆಲೆ ಕಳೆದ ವಾರ ಸ್ಮೃತಿ ಇರಾನಿ ಮೂವರು ಕಾಂಗ್ರೆಸ್ ನಾಯಕರು ಹಾಗೂ ಅವರ ಪಕ್ಷಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು. ತಮ್ಮ ಮಗಳ ಮೇಲಿನ ಆರೋಪವನ್ನು ತಕ್ಷಣವೇ ಹಿಂಪಡೆಯಲು ಹಾಗೂ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದರು. ಇದನ್ನೂ ಓದಿ: ಹುಲಿಗಳ ಸಂಖ್ಯೆ ಹೆಚ್ಚಳ – ಚೆಲುವ ಚಾಮರಾಜನಗರ ಈಗ ಹುಲಿಗಳ ನಾಡು