ಚಂದನವನದಲ್ಲಿ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರ ಖ್ಯಾತಿಯ ಶ್ವೇತಾ ಶ್ರೀವಾಸ್ತವ್ ಇದೀಗ ಮಹತ್ತರದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಸಿನಿಮಾ ಜೊತೆ ಲೇಖಕಿಯಾಗಿ ಗುರುತಿಸಿಕೊಳ್ಳುವತ್ತ ನಟಿ ಹೆಜ್ಜೆ ಇಟ್ಟಿದ್ದಾರೆ.
`ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, `ಕಿರಗೂರಿನ ಗಯ್ಯಾಳಿಗಳು’, `ಫೇರ್ & ಲವ್ಲಿ’ ಚಿತ್ರದ ಮೂಲಕ ಗಮನ ಸೆಳೆದಿರುವ ನಟಿ ಮತ್ತೆ ಹೋಪ್ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಈ ಸಿನಿಮಾದ ರಿಲೀಸ್ ಬಳಿಕ, ಶ್ವೇತಾ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದುಂಟು. ಈಗ ಚಿತ್ರರಂಗಕ್ಕೆ ಪ್ರವೇಶ ನೀಡಿರುವ ಅಸಾಧ್ಯವಾದ ಪ್ರಯತ್ನದ ಕುರಿತು ನಟಿ ಶ್ವೇತಾ ಪುಸ್ತಕ ಬರೆಯಲು ಮನಸ್ಸು ಮಾಡಿದ್ದಾರೆ. ಈ ಜರ್ನಿಯಲ್ಲಿ ನೀವು ಕೂಡ ಸಾಥ್ ನೀಡಬಹುದು ಅಂತಾ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ರಿಪೋರ್ಟ್ : ಪಕ್ಕಾ ಲೆಕ್ಕಾಚಾರ
View this post on Instagram
ನಮಸ್ಕಾರ, ಒಂದು ಮುಖ್ಯವಾದ ವಿಷಯ ತಿಳಿಸುವುದಿತ್ತು. ಮದುವೆಯಾದ ನಂತರ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ಪಾತ್ರ ವಹಿಸುವ ನನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ, ಈ ಚಿತ್ರರಂಗಕ್ಕೆ ಪ್ರವೇಶ ನೀಡಿರುವ ನನ್ನ ಅಸಾಧ್ಯವಾದ ಪ್ರಯತ್ನದ ಕುರಿತು, ಒಂದು ಪುಸ್ತಕ ಬರೆಯುತಿದ್ದೇನೆ. ಇದರ ಮುಖ್ಯ ಉದ್ದೇಶವಿಷ್ಟೇ ಇಂದರಿಂದ ಯಾರಿಗಾದರೂ ಸ್ಫೂರ್ತಿ ಸಿಗಬಹುದೇನೋ ಎಂದು. ನಿಮ್ಮಲ್ಲಿ ನನ್ನನ್ನ ಕುರಿತು ಯಾವುದೇ ಪ್ರಶ್ನೆಗಳಿದ್ದರು, ನನ್ನ ಮೈಲ್ ಐಡಿಗೆ ಕಳುಹಿಸಿ. ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸಿ, ನನ್ನ ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ ಎಂದು ನಟಿ ತಿಳಿಸಿದ್ದಾರೆ. ಈ ಮೂಲಕ ನಟಿ ಶ್ವೇತಾ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.