ನಾಯಿ ಮತ್ತು ಮನುಷ್ಯನ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ತೋರಿದ್ದ ಚಿತ್ರ “777 ಚಾರ್ಲಿ”. ರಕ್ಷಿತ್ ಶೆಟ್ಟಿ ನಿರ್ಮಿಸಿ, ನಾಯಕರಾಗೂ ನಟಿಸಿರುವ ಈ ಚಿತ್ರಕ್ಕೆ ದೇಶ – ವಿದೇಶ ಗಳಲ್ಲಿ ಅಪಾರ ಜನಮನ್ನಣೆ ದೊರಕಿದೆ. ಇದೇ ತಿಂಗಳ 29ರಿಂದ Voot select ನಲ್ಲಿ ಚಾರ್ಲಿ ಚಿತ್ರವನ್ನು ವೀಕ್ಷಿಸಬಹುದು. ಈ ಕುರಿತು ಚಿತ್ರದ ನಿರ್ಮಾಪಕ – ನಾಯಕ ರಕ್ಷಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪರಮ್ ವಾ ಸ್ಟುಡಿಯೋಸ್ ನಿರ್ಮಾಣದ “777 ಚಾರ್ಲಿ” ಚಿತ್ರ ಓಟಿಟಿ ನಲ್ಲಿ ಇದೇ 29ರಿಂದ ಲಭ್ಯ. ನಮ್ಮ “ಕಿರಿಕ್ ಪಾರ್ಟಿ” ಚಿತ್ರ ಸಹ voot ನಲ್ಲಿದೆ. ಭಾರತವಷ್ಟೇ ಅಲ್ಲದೇ, ವಿದೇಶಗಳಲ್ಲೂ “ಚಾರ್ಲಿ” ಚಿತ್ರವನ್ನು ಮೆಚ್ಚಿಕೊಂಡವರು ಅಪಾರ. ಅದರಲ್ಲೂ ಕರ್ನಾಟಕದಲ್ಲಿ ನಮ್ಮ ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಈ ಗೆಲುವಿಗೆ ಕಾರಣರಾದ ಸಮಸ್ತರಿಗೂ ನನ್ನ ಧನ್ಯವಾದ. ಚಿತ್ರ ಬಿಡುಗಡೆಯಾಗಿ 47 ದಿನಗಳು ಕಳೆದಿದೆ. 49 ನೇ(ಜುಲೈ29) ದಿನದಿಂದ ನಮ್ಮ ಚಿತ್ರವನ್ನು ಓಟಿಟಿನಲ್ಲಿ ನೋಡಬಹುದು. ಇದನ್ನೂ ಓದಿ: ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ
ಬಹು ಭಾಷೆಗಳಲ್ಲಿ “777 ಚಾರ್ಲಿ” ಬಿಡುಗಡೆಯಾಗಿದೆ. ಆದರೆ ಈಗ ಓಟಿಟಿನಲ್ಲಿ ಕನ್ನಡದ ಚಾರ್ಲಿಯನ್ನು ಮಾತ್ರ ವೀಕ್ಷಿಸಬಹುದು. ಚಿತ್ರ ಐವತ್ತು ದಿನ ಪೂರೈಸುತ್ತಿದೆ. ಈ ಸಂತೋಷವನ್ನು ಸಂಭ್ರಮಿಸಲು ನಮ್ಮ ನಲವತ್ತು ಜನರ ತಂಡ ಥೈಲ್ಯಾಂಡ್ ಗೆ ಹೋಗುತ್ತಿರುವುದಾಗಿ ರಕ್ಷಿತ್ ಶೆಟ್ಟಿ ತಿಳಿಸಿದರು.