ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಅಚ್ಚರಿ ಪಡುವಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಹತ್ತು ವರ್ಷಕ್ಕೆ ಆಗುವಷ್ಟು ಸಿನಿಮಾಗಳು ಸದ್ಯ ಶಿವರಾಜ್ ಕುಮಾರ್ ಕೈಯಲ್ಲಿವೆಯಂತೆ. ಆದರೂ, ಅವರ ಬೇಡಿಕೆ ಮಾತ್ರ ಕುಗ್ಗಿಲ್ಲ. ಮೊನ್ನೆಯಷ್ಟೇ ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ಅವರಿಗೆ ಕಾಲ್ ಶೀಟ್ ನೀಡುವ ಮೂಲಕ ಜನ್ಯ ಅವರನ್ನು ನಿರ್ದೇಶಕರನ್ನಾಗಿ ಮಾಡಿದ್ದರು ಶಿವರಾಜ್ ಕುಮಾರ್, ಇದೀಗ ನೃತ್ಯ ನಿರ್ದೇಶಕರಿಗೆ ತಮ್ಮ ಕಾಲ್ ಶೀಟ್ ನೀಡಿದ್ದಾರೆ ಶಿವಣ್ಣ.
ದಕ್ಷಿಣ ಭಾರತದ ಹೆಸರಾಂತ ನೃತ್ಯ ನಿರ್ದೇಶಕರಲ್ಲಿ ಚಿನ್ನ ಪ್ರಕಾಶ್ ಕೂಡ ಒಬ್ಬರು. ಹಿರಿಯ ನೃತ್ಯ ನಿರ್ದೇಶಕರಾಗಿರುವ ಚಿನ್ನ ಪ್ರಕಾಶ್, ಸ್ವತಃ ಡಾ.ರಾಜ್ ಕುಮಾರ್ ಅವರಿಗೂ ನೃತ್ಯ ನಿರ್ದೇಶಕನ ಮಾಡಿದವರು, ಈ ಬಾರಿ ಅಣ್ಣಾವ್ರ ಹಿರಿಯ ಪುತ್ರ ಶಿವರಾಜ್ ಕುಮಾರ್ ಅವರಿಗೆ ಸಿನಿಮಾವೊಂದನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಕುರಿತು ಸ್ವತಃ ಶಿವರಾಜ್ ಕುಮಾರ್ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್
ಚಿನ್ನ ಪ್ರಕಾಶ್ ಕೂಡ ಈ ಕುರಿತು ಮಾತನಾಡಿದ್ದು, ಶಿವರಾಜ್ ಕುಮಾರ್ ಅವರಿಗೆ ಈಗಾಗಲೇ ಕಥೆ ಹೇಳಿದ್ದಾರಂತೆ. ಅವರು ಕೂಡ ಆ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ಸದ್ಯಕ್ಕೆ ಈ ಸಿನಿಮಾ ಆಗದೇ ಇದ್ದರೂ, ಮುಂದಿನ ದಿನಗಳಲ್ಲಿ ಈ ಚಿತ್ರ ಸೆಟ್ಟೇರಲಿ ಎಂದಿದ್ದಾರೆ ಚಿನ್ನಿ ಪ್ರಕಾಶ. ಈಗಾಗಲೇ ಶಿವರಾಜ್ ಕುಮಾರ್ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರಿಂದ ಇನ್ನೊಂದು ವರ್ಷ ಈ ಸಿನಿಮಾ ಸೆಟ್ಟೇರುವುದು ಅನುಮಾನ.