ಮುಂಬೈ: ಪಂಚವಟಿ ಎಕ್ಸ್‌ಪ್ರೆಸ್‍ನ ಪ್ರಯಾಣಿಕರು ಎಸಿ ರೈಲಿನ ಒಳಗೆಯೇ ಛತ್ರಿ ಹಿಡಿದು ಕುಳಿತು ಪ್ರಯಾಣ ಮಾಡಿರುವ ಸುದ್ದಿ ಈಗ ಎಲ್ಲಕಡೆ ಚರ್ಚೆಗೆ ಗ್ರಾಸವಾಗುತ್ತಿದೆ.
ಭಾನುವಾರ ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್‍ನ ಮಾಸಿಕ ಸೀಸನ್ ಟಿಕೆಟ್(ಎಂಎಸ್‍ಟಿ) ಹೊಂದಿರುವವರಿಗೆ ಕಾಯ್ದಿರಿಸಿದ ಎಸಿ ಕೋಚ್‍ನ ಮೇಲ್ಛಾವಣಿ ಸೋರಿಕೆಯಾಗುತ್ತಿತ್ತು. ಈ ಪರಿಣಾಮ ಪ್ರಯಾಣಿಕರು ತಮ್ಮನ್ನು ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಛತ್ರಿ ಹಿಡಿದುಕೊಂಡಿದ್ದಾರೆ. ನಾಸಿಕ್‍ನಿಂದ ಮುಂಬೈವರೆಗೂ ಪ್ರಯಾಣಿಕರು ಛತ್ರಿಗಳನ್ನು ಹಿಡಿದು ಕುಳಿತುಕೊಂಡಿದ್ದರು. ಇದನ್ನೂ ಓದಿ: ಇತ್ತೀಚೆಗೆ ನಡೆಯುತ್ತಿರುವ ಕ್ಷುಲ್ಲಕ ಚರ್ಚೆ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ: ಮಸ್ಕ್
ಪ್ರಯಾಣಿಕ ಸಂತೋಷ್ ಶೆವಾಲೆ ಈ ಕುರಿತು ಮಾತನಾಡಿದ್ದು, ಸಿ-2 ಹವಾನಿಯಂತ್ರಿತ ಕೋಚ್‍ನ ಮೇಲ್ಛಾವಣಿಯಿಂದ ನೀರು ಜಿನುಗುತ್ತಲೇ ಇತ್ತು. ಆದರೆ ಇದೇ ಮೊದಲ ಬಾರಿಗೆ ಎಸಿ ಕೋಚ್‍ನಲ್ಲಿ ನೋಡಿದ್ದೇನೆ. ಕೋಚ್ ಮೇಲ್ಛಾವಣಿಯಿಂದ ನಿರಂತರವಾಗಿ ನೀರು ಬರುತ್ತಿತ್ತು. ಪ್ರಯಾಣಿಕರು ತಮ್ಮ ಛತ್ರಿಗಳನ್ನು ಬಳಸಬೇಕಾಯಿತು ಎಂದು ವಿವರಿಸಿದರು.
ರೈಲು ಸಂಪೂರ್ಣ ಭರ್ತಿಯಾಗಿದ್ದರಿಂದ ಪ್ರಯಾಣಿಕರು ಬೇರೆ ಕಡೆ ಹೋಗಲು ಸಾಧ್ಯವಾಗಿರಲ್ಲ. ನಂತರ ನೊಂದ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಮನ್ಮಾಡ್‍ನಲ್ಲಿರುವ ಅಧಿಕಾರಿಗಳು ಸಮಸ್ಯೆಯಾಗಿರುವುದನ್ನು ಒಪ್ಪಿಕೊಂಡರು. ಇದನ್ನೂ ಓದಿ: ವಿಭಜನೆ ನೋವಿನಿಂದ ಕೂಡಿದೆ – ಪಾಕ್, ಬಾಂಗ್ಲಾದೇಶ, ಭಾರತ ಒಂದಾಗಬಹುದು: ಮನೋಹರ್ ಲಾಲ್ ಖಟ್ಟರ್
ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ವಿದ್ಯುತ್ ಪೈಪ್‌ನ ಸಮಸ್ಯೆಯಿಂದ ಈ ರೀತಿಯಾಗಿದೆ ಎಂದು ತಿಳಿಸಿದರು. ಪ್ರಯಾಣಿಕರು ಅಧಿಕಾರಿಗಳಿಗೆ ತಮಗಾದ ಸಮಸ್ಯೆ ಬಗ್ಗೆ ದೂರನ್ನು ಕೊಟ್ಟಿದ್ದಾರೆ.