ಗಡಿ ಭಾಗದ ಹಿರಿಯ ಸಂಶೋಧಕ ಡಾ.ಶಿವನಗೌಡ ಪಾಟೀಲ್ ನಿಧನ – ಕೊನೆಯ ಇಚ್ಛೆಯಂತೆ ದೇಹದಾನ

Public TV
2 Min Read
Chikkodi Gordana Dr. Shivan Gowda Patil Senior Researcher

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಗಡಿ ಭಾಗದ ಹಿರಿಯ ಸಂಶೋಧಕ ಡಾ.ಶಿವನಗೌಡ ಬಾಳಗೌಡ ಪಾಟೀಲ(83) ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಶಿವನಗೌಡ ಬಾಳಗೌಡ ಅವರು ರಟ್ಟರ ಕಾಲದ ಸಂಸ್ಕೃತಿ ಅಧ್ಯಯನ ಪ್ರಬಂಧಕ್ಕೆ ಪಿ.ಎಚ್.ಡಿ ಪಡೆದಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಪಿ.ಎಚ್.ಡಿ ಪದವಿ ಪಡೆದಿದ್ದು, ಇಡೀ ದಕ್ಷಿಣ ಭಾರತದಲ್ಲಿ ಪ್ರಥಮ ಎನ್ನಲಾಗಿತ್ತು. ಕೂಹುಂಡಿ ನಾಡು, ನಾಣ್ಯಗಳ ಇತಿಹಾಸ, ಶ್ರೀ ಕ್ಷೇತ್ರ ಸೊಗಲ ದರ್ಶನ, ದುಂಡೀಶನ ವಚನಗಳು ಮುಂತಾದ ಐತಿಹಾಸಿಕ ಮತ್ತು ಸಾಹಿತ್ಯಕ ಕೃತಿಗಳನ್ನು ಬರೆದಿದ್ದರು. ಇದನ್ನೂ ಓದಿ:  ಕ್ಯಾಂಪಸ್‍ನಲ್ಲಿ ಗುಂಡಿನ ದಾಳಿ: ಮೂವರು ಬಲಿ, ಇಬ್ಬರಿಗೆ ಗಂಭೀರ ಗಾಯ 

book scaled

ಇದಲ್ಲದೆ ಪಠ್ಯರಚನಾ ಸಮಿತಿಯ ಸದಸ್ಯರಾಗಿ ಅನುಪಮ ಸೇವೆ ಸಲ್ಲಿಸಿದ್ದರು. ಸಂಕೇಶ್ವರ ಹತ್ತಿರದ ಅರ್ಜುನವಾಡ ಬಸವೇಶ್ವರರ ಬಗೆಗೆ ಇದ್ದ ಶಿಲಾ ಶಾಸನವೊಂದನ್ನು ಅವರು ಸಂಶೋಧಿಸಿದ್ದರು. ಹುಕ್ಕೇರಿಯಲ್ಲಿ ಜರುಗಿದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯು ಅವರು ಕಾರ್ಯ ನಿರ್ವಹಿಸಿದ್ದರು.

ಕೂಡಲ ಸಂಗದಮದ ಬಸವಧರ್ಮ ಪೀಠದ ಸಂಸ್ಥಾಪಕ ಸದಸ್ಯರಾಗಿ, ರಾಷ್ಟ್ರೀಯ ಬಸವ ದಳದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಅವರು ಅನುಪಮ ಸೇವೆ ಸಲ್ಲಿಸಿದ್ದರು. ಸಂಕೇಶ್ವರ ಪಟ್ಟಣದಲ್ಲಿ ಬಸವ ಮಂಟಪ ಸ್ಥಾಪಿಸಿ ಪ್ರತಿವಾರವೂ ವಚನಗಳ ಸಾರವನ್ನು ಜನಸಾಮಾನ್ಯರಿಗೆ ತಿಳಿಸುತ್ತಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಏಕಲವ್ಯ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿಗಳು ಅವರಿಗೆ ಬಂದಿದ್ದವು. ತಮ್ಮ ಸ್ವಂತ ಊರು ಕೊಚರಿಯಲ್ಲಿ ಕನ್ನಡ ಮಾಧ್ಯಮ ಶಾಲೆಯೊಂದನ್ನು ಪ್ರಾರಂಭಿಸಿ ಶಿಕ್ಷಣವನ್ನು ನೀಡುತ್ತಾ ಬಂದಿದ್ದರು. ಇದನ್ನೂ ಓದಿ:  ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತೆ: ರಾಜನಾಥ್ ಸಿಂಗ್ 

Top 10 Books Every College Student Should Read - eLearning Industry

ಶಿವನಗೌಡ ಬಾಳಗೌಡರು ತಮ್ಮ ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸಾಂಸ್ಕೃತಿಕ ಪರಿಷತ್ತು, ರಾಷ್ಟ್ರೀಯ ಬಸವ ದಳ, ಕದಳಿ ವೇದಿಕೆ, ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಅವರ ಕೊನೆಯ ಇಚ್ಛೆಯಂತೆ ಅವರ ದೇಹವನ್ನು ಕೆ.ಎಲ್.ಇ ಆಸ್ಪತ್ರೆಗೆ ದಾನ ಮಾಡಲಾಯಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *