ಗಾಂಧೀನಗರ: ಗುಜರಾತ್‍ನ ಅಮ್ರೇಲಿ ಜಿಲ್ಲೆಯಲ್ಲಿ 18 ವರ್ಷದ ಕೃಷಿ ಕೂಲಿ ಕಾರ್ಮಿಕನ ಮೇಲೆ ಸಿಂಹವೊಂದು ದಾಳಿ ನಡೆಸಿ ಕೊಂದು ಹಾಕಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಭೈದೇಶ್ ಪಯರ್ ಎಂದು ಗುರುತಿಸಲಾಗಿದೆ. ಎಂಟು ವರ್ಷ ವಯಸ್ಸಿನ ಏಷ್ಯಾಟಿಕ್ ಸಿಂಹವನ್ನು ಭಾನುವಾರ ಸೆರೆಹಿಡಿದು, ನಂತರ ರಕ್ಷಣಾ ಕೇಂದ್ರಕ್ಕೆ ಕೊಂಡೊಯ್ಯಲಾಯಿತು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜದೀಪ್‍ಸಿಂಗ್ ಝಾಲಾ ಹೇಳಿದ್ದಾರೆ. ಇದನ್ನೂ ಓದಿ: ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ, ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ: ಆರ್‌ಜಿವಿ
ಮಧ್ಯಪ್ರದೇಶ ಮೂಲದ ಭೈದೇಶ್ ಪಯರ್ ಅವರು ಕೆಲಸ ಮುಗಿಸಿಕೊಂಡು ತುಳಸಿಶ್ಯಾಮ್ ವ್ಯಾಪ್ತಿಯ ಅರಣ್ಯ ಪ್ರದೇಶದಿಂದ ನಾನಿಧಾರಿ ಗ್ರಾಮದಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಸಿಂಹ ದಾಳಿ ಮಾಡಿ ಅವರನ್ನು ಎಳೆದೊಯ್ದಿದೆ. ನಂತರ ಘಟನೆ ಕುರಿತಂತೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಶೀಘ್ರದಲ್ಲಿಯೇ ಸಿಂಹವನ್ನು ಸೆರೆಹಿಡಿಯಲು ಪ್ರಯತ್ನಿಸುವುದಾಗಿ ತಿಳಿಸಿದ್ದರು.
ಅದರಂತೆ ಟ್ರ್ಯಾಂಕ್ವಿಲೈಸರ್ ಗನ್ ಬಳಸಿ ಸಿಂಹವನ್ನು ಸೆರೆಹಿಡಿದು ಭೋನಿನಲ್ಲಿ ರಕ್ಷಣಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಏಷ್ಯಾಟಿಕ್ ಸಿಂಹಗಳು ಗಿರ್ ಅರಣ್ಯ ಸೇರಿದಂತೆ ಗುಜರಾತ್‍ನ ಸೌರಾಷ್ಟ್ರ ಪ್ರದೇಶದ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಜೂನ್ 2020ರ ಜನಗಣತಿಯ ಪ್ರಕಾರ, ಗಿರ್ ಅರಣ್ಯ ಪ್ರದೇಶದಲ್ಲಿ 674 ಸಿಂಹಗಳಿವೆ.