ಕನ್ನಡದ ಡೊಡ್ಮನೆ ಶೋ ʻಬಿಗ್ ಬಾಸ್ ಸೀಸನ್ 6ʼ ಮೂಲಕ ಬೆಳಕಿಗೆ ಬಂದ ಪ್ರತಿಭೆ ಶಶಿಕುಮಾರ್ ಈಗ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಬಿಗ್ ಬಾಸ್ ಮನೆಯ ಮಾಡರ್ನ್ ರೈತ ಎಂದೇ ಫೇಮಸ್ ಆಗಿರುವ ಶಶಿಕುಮಾರ್ ಇದೇ ಆಗಸ್ಟ್ 6 ಹಾಗೂ 7ರಂದು ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೊಡ್ಡ ಬಳ್ಳಾಪುರದ ವಧು ಸ್ವಾತಿ ಎಂಬುವವರ ಕೈ ಹಿಡಿಯಲಿದ್ದಾರೆ. ಕೃಷಿ ಕುಟುಂಬದ ಸ್ವಾತಿ ಇತ್ತೀಚೆಗಷ್ಟೇ ಯುಪಿಎಸ್‌ಸಿ ಪ್ರಿಲಿಮ್ಸ್ ಕೂಡ ಪಾಸ್ ಆಗಲಿದ್ದಾರೆ. ಇದನ್ನೂ ಓದಿ:‘ವಿಕಿಪೀಡಿಯ’ ಹೆಸರಿನಲ್ಲೊಂದು ಸಿನಿಮಾ: ಕಿರುತೆರೆಯಿಂದ ಬೆಳ್ಳಿತೆರೆಗೆ ಯಶವಂತ್ ಎಂಟ್ರಿ



