ಡೆಹ್ರಾಡೂನ್: ಪೋಷಕರು ಮಕ್ಕಳ ಜೀವನಕ್ಕೆ ದಾರಿ ದೀಪವಾಗಿರುತ್ತಾರೆ. ಮಕ್ಕಳು ಚಿಕ್ಕವರಿದ್ದಾಗಿಂದಲೂ ದೊಡ್ಡವರಾಗುವವರೆಗೂ ಸರಿಯಾದ ಹಾದಿಯಲ್ಲಿ ನಡೆಸಿ, ಜೀವನವನ್ನು ಕಟ್ಟಿಕೊಳ್ಳುವವರೆಗೂ ತಮ್ಮ ಮಕ್ಕಳಿಗೆ ಬೆನ್ನೆಲುಬಾಗಿ ಸದಾ ಕಾಲ ಜೊತೆಯಾಗಿರುತ್ತಾರೆ. ಅವರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ.
ನಿಜಕ್ಕೂ ಅಂತಹ ಪೋಷಕರ ಪ್ರೀತಿ ನಿಮಗೆ ಸಿಕ್ಕಿದೆ ಎಂದರೆ, ನೀವು ಬಹಳ ಅದೃಷ್ಟವಂತರು ಎಂದೇ ಹೇಳಬಹುದು. ಆದರೆ ಅದೆಷ್ಟೋ ಮಂದಿ ತಂದೆ, ತಾಯಿಗೆ ವಯಸ್ಸಾದ ಬಳಿಕ ವೃದ್ಧಾಶ್ರಮಗಳಿಗೆ ಸೇರಿಸುವಂತವರು ಕೂಡ ಇದ್ದಾರೆ. ಈ ಎಲ್ಲದರ ಮಧ್ಯೆ ತೇತ್ರಾಯುಗದ ಶ್ರವಣಕುಮಾರನಂತೆ ವ್ಯಕ್ತಿಯೋರ್ವ ತನ್ನ ತಂದೆ, ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೋಗುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
जहां आजकल बूढ़े मां-बाप का तिरस्कार होता है, उन्हें घर से निकाल दिया जाता है या अपने साथ रहने नहीं दिया जाता.. वहीं आज इसका विपरीत दृश्य देखने को मिला..
लाखों शिवभक्तों के बीच एक श्रवण कुमार भी है जो पालकी में अपने बुज़ुर्ग माता-पिता को लेकर कांवड़ यात्रा पर आया है..
मेरा नमन! pic.twitter.com/phG1h3pfg1
— Ashok Kumar IPS (@AshokKumar_IPS) July 19, 2022
ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ಅವರು ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯುವಕನೋರ್ವ ತನ್ನ ಪೋಷಕರನ್ನು ಹೆಗಲ ಮೇಲೆ ಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೋಗುತ್ತಿರುವನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಪೋಷಕರನ್ನು ಮಕ್ಕಳು ತಿರಸ್ಕರಿಸುವುದೇ ಹೆಚ್ಚಾಗಿದೆ. ವಯಸ್ಸಾದ ಬಳಿಕ ಅವರನ್ನು ಮನೆಯಿಂದ ಹೊರಹಾಕಲಾಗುತ್ತಿದೆ. ಈ ನಡುವೆ ತೇತ್ರಾಯುಗದ ಶ್ರವಣ ಕುಮಾರನಂತೆ, ತನ್ನ ವೃದ್ಧ ತಂದೆ, ತಾಯಿಯನ್ನು ಪಲ್ಲಕ್ಕಿಯ ಮೇಲೆ ಕೂರಿಸಿಕೊಂಡು ವ್ಯಕ್ತಿ ಕನ್ವರ್ ಯಾತ್ರೆಗೆ ತೆರಳಿದ್ದಾನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಗೆ ಸೋನಿಯಾ ಹಾಜರ್ – ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, 10 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ವ್ಯಕ್ತಿಯ ಮನೋಭಾವಕ್ಕೆ “ಜಿತ್ನಿ ತಾರೀಫ್ ಕರು ಉತ್ನಿ ಕಾಮ್ ಹೈ’ ಎಂದು ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ಜೊತೆಗೆ ಆತನಿಗೊಂದು ಸೆಲ್ಯೂಟ್ ಎನ್ನುತ್ತಿದ್ದಾರೆ. ಇದನ್ನೂ ಓದಿ: 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್